- Advertisement -
Koppala News:
ಕೊಪ್ಪಳದಲ್ಲಿ ಮಂಗಳಮುಖಿಯರ ನಡುವೆ ಮಾರಾಮಾರಿ ನಡೆದಿದೆ.ಮಂಗಳಮುಖಿಯರ ಎರಡೂ ಗುಂಪುಗಳ ಮಧ್ಯೆ ಗಲಾಟೆ ಉಂಟಾಗಿದ್ದು, ಅಸಭ್ಯವಾಗಿ ಹೊಡದಾಡಿಕೊಂಡಿರುವಂತಹ ಘಟನೆ ಜಿಲ್ಲೆಯ ಕಾರಟಗಿ ಪಟ್ಟಣದಲ್ಲಿ ನಡೆದಿದೆ. ಬಳ್ಳಾರಿ, ಹುಬ್ಬಳ್ಳಿ, ಕುರುಗೋಡುದಿಂದ ನೂರಾರು ಮಂಗಳಮುಖಿಯರು ಬಂದಿದ್ದರು. ಬಳ್ಳಾರಿ ಜಿಲ್ಲೆಯ ತಂಡ ಸೇರಿಕೊಳ್ಳುವಂತೆ ನಿರಾಕರಿಸಿದ್ದಕ್ಕೆ ಒಂದು ಗುಂಪಿನ ಕಾರಟಗಿ ಮತ್ತು ಸಿಂಧನೂರು ಭಾಗದ ಮಂಗಳಮುಖಿಯರ ಮೇಲೆ ಹಲ್ಲೆ ಮಾಡಿದ್ದಾರೆ. ಗಲಾಟೆಯಲ್ಲಿ ಕ್ರೂಷರ್ ವಾಹನದ ಗ್ಲಾಸ್ ಪುಡಿ ಪುಡಿ ಆಗಿದೆ. ಸದ್ಯ ಮಂಗಳಮುಖಿಯರು ಕಾರಟಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ ಎಂದು ತಿಳಿದು ಬಂದಿದೆ.
ಡಾ. ವಿಷ್ಣುವರ್ಧನ್ ಗೆ ಕರ್ನಾಟಕ ರತ್ನ ಪ್ರಶಸ್ತಿ..?! ಸಿಎಂ ಹೇಳಿದ್ದೇನು..?!
- Advertisement -