Sunday, September 8, 2024

Latest Posts

ನಮ್ಮ ಜಾತಿಯವರು ಸಿಎಂ, ಮಂತ್ರಿ ಆಗಬೇಕು ಎನ್ನುವುದು ಬಿಡಿ;ಕೊತ್ತೂರು ಮಂಜುನಾಥ್

- Advertisement -

ಕೋಲಾರ:  ಧರ್ಮ ಇಲ್ಲ ಎಂದು ಹೇಳುವವರನ್ನ ಗಲ್ಲಿಗೇರಿಸಬೇಕು, ಆ ಧರ್ಮ, ಈ ಧರ್ಮ ಅಂತ ಹೇಳುವವರನ್ನ ದೇಶದಿಂದಲೇ ಗಡಿಪಾರು ಮಾಡಬೇಕು ಎಂದು ಹೇಳಿದ ಉದಯನಿಧಿ ಸ್ಟಾಲಿನ್ ವಿರುದ್ಧ ಕೋಲಾರ ಕ್ಷೇತ್ರದ ಶಾಸಕ ಕೊತ್ತೂರು ಮಂಜುನಾಥ್ ವಾಗ್ದಾಳಿ ನಡೆಸಿದ್ದಾರೆ.

ಗಾಂಧಿ ಜಯಂತಿ ಪ್ರಯುಕ್ತ ನಗರದ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧರ್ಮ ಇಲ್ಲ ಎಂದು ಹೇಳುವವರನ್ನ ಗಲ್ಲಿಗೇರಿಸಬೇಕು. ಉದಯನಿಧಿ ಅವರಿಗೆ ದುಡ್ಡು ಜಾಸ್ತಿಯಾಗಿ ಮೆಂಟಲ್ ಆಗಿದ್ದಾರೆ. ಅವನಿಗೆ ಎರಡೂ ಮೂರು ಹುಚ್ಚು ನಾಯಿ ಕಚ್ಚಿದೆ ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ. ನಾವು ಇರೋದು ಭಾರತ ದೇಶದಲ್ಲಿ ಯಾರು, ಯಾವ ಧರ್ಮವನ್ನ ಯಾರು ಬೇಕಾದ್ರು ಪಾಲನೆ ಮಾಡಲಿ, ನಿನ್ನ ಧರ್ಮವನ್ನ ನೀನು ಪಾಲನೆ ಮಾಡು.

ನನ್ನ ಧರ್ಮವನ್ನ ಪಾಲನೆ ಮಾಡಬೇಡ ಎನ್ನುವುದಕ್ಕೆ ಯಾರಿಗೂ ಹಕ್ಕಿಲ್ಲ ನನ್ನ ಧರ್ಮವನ್ನ ಇಲ್ಲ ಎಂದು ಹೇಳುವುದಕ್ಕೆ ನೀನ್ಯಾರು? ಎಂದು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.

ಇದೇ ವೇಳೆ ತಮಿಳು ನಟ ರಜಿನಿಕಾಂತ್‌ ಅವರನ್ನ ಉದಾಹರಣೆ ನೀಡಿ ನಾನೇನಾದ್ರು ಮೋರಿಯಲ್ಲಿ ಬಿದ್ದು ಎದ್ದರೆ ಅದು ಬೇರೆ ಅರ್ಥ ಬರುತ್ತೆ. ಇವನಿಗೆ ನಾಯಿ ಕಚ್ಚಿದೆ ಅಂತಾರೆ. ಅದೇ ಕೆಲಸ ಸೂಪರ್ ಸ್ಟಾರ್ ರಜನಿಕಾಂತ್ ಮಾಡಿದ್ರೆ ಸೂಪರ್ ಅಂತಾರೆ. ಹಾಗೆಯೇ ಧರ್ಮದ ವಿಚಾರವಾಗಿ ಮೋರಿಯಲ್ಲಿ ಬಿದ್ದಂತ್ತಾಗಿದೆ ಎಂದು ತಮಿಳುನಾಡು ಸಚಿವರ ವಿರುದ್ಧ ಹರಿಹಾಯ್ದರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಸುಭಿಕ್ಷವಾಗಿ ನಡೆಯುತ್ತಿದೆ:

ತಲೆ ಕೆಟ್ಟು ಕೆಲವರು ಸಿಎಂ ಸ್ಥಾನದ ಕುರಿತು ಹೇಳಿಕೆ ನೀಡುತ್ತಿದ್ದಾರೆ. ಈ ಬಗ್ಗೆ ತೆಲೆಕೆಡಿಸಿಕೊಳ್ಳುವ ಅಗತ್ಯ ಇಲ್ಲ. ಕಾಂಗ್ರೆಸ್​ಸರ್ಕಾರವು ಸುಭಿಕ್ಷವಾಗಿ ನಡೆದುಕೊಂಡು ಹೋಗುತ್ತಿದೆ. ಲಿಂಗಾಯತ ಸಮುದಾಯದ ಅಧಿಕಾರಿಗಳನ್ನು ಮೂಲೆಗುಂಪು ಮಾಡುತ್ತಿದ್ದಾರೆ ಎಂಬ ಕಾಂಗ್ರೆಸ್​ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದರು. ಕೆಲವರು ತಲೆ ಕೆಟ್ಟು ಈ ರೀತಿಯೆಲ್ಲ ಮಾತನಾಡುತ್ತಿದ್ದಾರೆ. ಕಾಂಗ್ರೆಸ್​ ಪಕ್ಷವು ರಾಜ್ಯದಲ್ಲಿ ಜನರ ಆಶೀರ್ವಾದದಿಂದ 136 ಸ್ಥಾ‌ನಗಳನ್ನು ಗೆದ್ದಿದೆ. ಸರ್ಕಾರವೂ ಸಹ ಸುಭಿಕ್ಷವಾಗಿ ನಡೆದುಕೊಂಡು ಹೋಗುತ್ತಿದೆ ಎಂದು ಹೇಳಿದರು.

ಯಾವುದಾದರೂ ಶಾಸಕರಿಗೆ ಈ ರೀತಿ ಮಾತನಾಡುವ ಅವಶ್ಯಕತೆ ಇದ್ದರೆ ನಿಮ್ಮ ನಿಮ್ಮ ಕ್ಷೇತ್ರಗಳ, ತಾಲೂಕುಗಳ ಅಭಿವೃದ್ಧಿಯ ಕುರಿತು ಮಾತನಾಡಿ. ಈ ಸಂಬಂಧ ಕ್ಷೇತ್ರದ ಅಭಿವೃದ್ಧಿ ಕುರಿತು ಸಿಎಂ ಹಾಗೂ ಡಿಸಿಎಂ ಅವರ ಬಳಿ ಹೋಗಿ ಮಾತನಾಡಿ, ಕೆಲಸ ಮಾಡಿಸಿಕೊಂಡು ಬರಲಿ. ಈ ರೀತಿ ಮಾತನಾಡುವವರನ್ನು ಪಕ್ಷದಿಂದ ದೂರ ಇಡುವಂತೆ ಪಕ್ಷದ ಹಿರಿಯರಲ್ಲಿ ಮನವಿ ಮಾಡುತ್ತೇನೆ ಎಂದರು.

ನನಗೂ ಪಿಎಂ ಆಗಬೇಕೆಂದು ಆಸೆ ಇದೆ: ಎಲ್ಲರೂ ಮಂತ್ರಿ ಬೇಕು, ಸಿಎಂ ಬೇಕು ಎಂದು ಆಸೆಪಟ್ಟರೆ ಹೇಗೆ? ನನಗೂ ಪಿಎಂ ಆಗಬೇಕೆಂದು ಆಸೆ ಇದೆ. ಆದರೆ ಕೈ ಎಲ್ಲಿಯವರೆಗೆ ಎಟುಕುವುದೊ ಅಷ್ಟಕ್ಕೆ ಆಸೆ ಪಡಬೇಕು. ಕೆಲಸ ಮಾಡಲು ಆಸಕ್ತಿ ಇದ್ದರೆ ಕೆಲಸ ಮಾಡಿ. ಅದನ್ನು ಬಿಟ್ಟು ನಮ್ಮ ಜಾತಿಯವರು ಸಿಎಂ ಆಗಬೇಕು, ಮಂತ್ರಿ ಆಗಬೇಕು ಎನ್ನುವುದನ್ನು ಬಿಡಿ ಎಂದು ತಿಳಿಸಿದರು. ಇಂತಹ ವಿಚಾರಗಳನ್ನು ತಲೆಕೆಟ್ಟವರು ಮಾತ್ರ ಮಾತನಾಡುತ್ತಾರೆ. ಆದರೆ ಸರ್ಕಾರ ಸುಭಿಕ್ಷವಾಗಿದೆ. ಸಿದ್ದರಾಮಯ್ಯ ಹಾಗೂ ಡಿಕೆಶಿ ಅವರು ಸುಭಿಕ್ಷವಾಗಿ ಸರ್ಕಾರ ನಡೆಸುತ್ತಿದ್ದಾರೆ ಎಂದು ತಿಳಿಸಿದರು.

ಆಕ್ಷೇಪಾರ್ಹ ಪದ ಬಳಕೆ ಆರೋಪ: ಕ್ಷಮೆ ಕೇಳಿದ ಶಾಸಕ ಎಸ್ ಕೆ ಸುರೇಶ್..!

Shetter: ಪಕ್ಷ ಬಿಟ್ಟು ಹೋದ ಶೆಟ್ಟರ್ ಅವರಿವರನ್ನು ಕರೆತರುತ್ತೇನೆ ಅಂತ ಓಡಾಡುತ್ತಿದ್ದಾರೆ.!

Tiger: ದನ ಮೇಯಿಸಲು ಹೋದ ರೈತ ಹುಲಿಗೆ ಆಹಾರವಾದ..!

- Advertisement -

Latest Posts

Don't Miss