ಕಾಂಗ್ರೆಸ್ ನಲ್ಲಿ ಲಿಂಗಾಯತರನ್ನು ಕಡೆಗಣಿಸಲಾಗುತ್ತಿದೆ ಎಂಬಬುವುದಾಗಿ ಶಿವಶಂಕರಪ್ಪ ಹೇಳಿಕೆ ನೀಡಿದ್ದರು. ಇದೀಗ ಈ ಹೇಳಿಕೆ ಸದ್ದು ಮಾಡುತ್ತಿದೆ. ಇದೇ ವಿಚಾರಕ್ಕೆ ಶಾಸಕ ಮಹೇಶ್ ಟೆಂಗಿನಕಾಯಿ ಪ್ರತಿಕ್ರಿಯೆ ನೀಡಿದ್ದಾರೆ.
ಕಾಂಗ್ರೆಸ್ ನಲ್ಲಿ ಲಿಂಗಾಯತರನ್ನು ತುಳಿಯುವ ಆರೋಪದ ವಿಚಾರವಾಗಿ ಮಾತನಾಡಿದ ಶಾಸಕ ಮಹೇಶ್ ಟೆಂಗಿನಕಾಯಿ ಶಾಮಮನೂರು ಶಿವಶಂಕರಪ್ಪ ಹೇಳಿದ್ದು ಸತ್ಯವಾದ ಮಾತು. ಈ ಹಿಂದೆ ನಮ್ಮ ಪಕ್ಷ ಬಿಟ್ಟು ಹೋಗುವಾಗ ಮಾಜಿ ಸಿಎಂ ಒಬ್ಬರು ಬಿಜೆಪಿಯಲ್ಲಿ ಲಿಂಗಾಯತರಿಗೆ ಅನ್ಯಾಯವಾಗುತ್ತಿದೆ ಎಂದಿದ್ದರು. ಈ ಅದೆ ಮಾತು ಕಾಂಗ್ರೆಸ್ ನಲ್ಲಿ ಕೇಳಿಬರುತ್ತಿದೆ ಇದರಲ್ಲಿ ಯಾವುದು ಸತ್ಯ ಅಂತ ಅರ್ಥ ಮಾಡಿಕೊಳ್ಳಬೇಕು. ಬಿಜೆಪಿ ಅತೀ ಹೆಚ್ಚು ಲಿಂಗಾಯತ ಮುಖ್ಯಮಂತ್ರಿಗಳನ್ನು ರಾಜ್ಯಕ್ಕೆ ಕೊಟ್ಟಿದೆ. ಮತ್ತೆ ವಾಪಸು ಜಿಲೇಬಿ ಸಂಸ್ಕೃತಿಯನ್ನು ಮುಖ್ಯಮಂತ್ರಿಗಳು ತರುತ್ತಿದ್ದಾರೆ. ನಮ್ಮ ಪಕ್ಷ ಬಿಟ್ಟು ಹೋದ ಮಾಜಿ ಸಿಎಂ ಅವರಿವರನ್ನು ಕರೆದುಕೊಂಡು ಬರತ್ತಿನಿ ಅಂತ ಓಡಾಡುತ್ತಿದ್ದಾರೆ. ಅವರನ್ನು ನಂಬಿ ಹೋಗುವವರು ಸ್ವಲ್ಪ ಯೋಚನೆ ಮಾಡಿ. ಕರೆದುಕೊಂಡು ಹೋಗುವವರು ಮತ್ತು ಹೋಗುವವರು ಈಗ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಕಾಂಗ್ರೆಸ್ ನಲ್ಲಿ ಅವರನ್ನು ಎಂಎಲ್ಸಿ ಮಾಡಿದ್ದೆ ದೊಡ್ಡದು ಅವರನ್ನು ಮುಂದೆ ಏನು ಮಾಡೋದಿಲ್ಲ. ಬಿಜೆಪಿಯಲ್ಲಿ ಏನಾದರೂ ಸಿಗತ್ತಿತ್ತು ಅವರಿಗೂ ಮುಂದೆ ಏನು ಅನ್ಯಾಯ ಆಗುತ್ತೆ ಅಂತ ಗೊತ್ತಾಗಿತ್ತೆ. ಪರೋಕ್ಷವಾಗಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಗೆ ಟೆಂಗಿನಕಾಯಿ ಟಾಂಗ್.
ಸರ್ಕಾರ ಜಾತಿಯನ್ನು ಹಿಡಿದು ಆಡಳಿತ ಮಾಡಬಾರದು. ಆದರೆ ಇದು ಸಿದ್ದರಾಮಯ್ಯ ಸರ್ಕಾರದಲ್ಲಿ ಹೈಪ್ ಲೆವಲ್ ಗೆ ಹೋಗುತ್ತಿದೆ.ಇದಕ್ಕೆ ಶಾಮನೂರು ಧ್ವನಿಗೂಡಿಸಿದ್ದು ನೋಡಿದ್ರೆ ಮೇಲ್ನೋಟಕ್ಕೆ ನಿಜ ಅನ್ನಸುತ್ತದೆ. ಸಮಾಜವನ್ನು ತುಳಿಯುವ ಕೆಲಸ ಕಾಂಗ್ರೆಸ್ ಮೊದಲು ಮಾಡಿತ್ತು ಈಗಲೂ ಮಾಡುತ್ತಿದೆ.ಇನ್ನೂ ಕಾಂಗ್ರೆಸ್ ಎಚ್ಚೆತ್ತುಕೊಳ್ಳಬೇಕು. ಎಂಬುವುದಾಗಿ ಹೇಳಿದರು.
School : ಶಿರಗುಪ್ಪಿ ಸರ್ಕಾರಿ ಶಾಲೆಗೆ ಹೊಸ ರೂಪ ನೀಡಲು ʼಬಣ್ಣದರ್ಪಣೆʼ ಅಭಿಯಾನ
12 ಗಂಟೆಯಲ್ಲಿ 120 ಕಿಮೀ ನಡೆದು ಎಲ್ಲಮ್ಮನ ಗುಡ್ಡಕ್ಕೆ ಬಂದು ಹರಕೆ ತೀರಿಸಿದವರಿಗೆ ಸನ್ಮಾನ..