ಹಲವು ಹುಡುಗರಿಗೆ ತಾನು ಮದುವೆಯಾಗುವ ಹೆಣ್ಣು, ಸಂಸ್ಕಾರವಂತೆಯಾಗಿರಬೇಕು, ತನ್ನ ತಂದೆ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು. ತನ್ನ ಕಷ್ಟ ಸುಖಗಳಿಗೆ ಸಾಥ್ ನೀಡಬೇಕು ಅನ್ನೋ ಆಸೆ ಇರುತ್ತದೆ. ಆದ್ರೆ ಎಲ್ಲರಿಗೂ ತಮಗೆ ಬೇಕಾದ ಹೆಣ್ಣು ಸಿಗುವುದಿಲ್ಲ. ಹಾಗಾದ್ರೆ ಎಂಥ ಹೆಣ್ಣಿನಲ್ಲಿ ಇಂಥ ಗುಣಗಳಿರುವುದಿಲ್ಲ..? ಎಂಥ ಹೆಣ್ಣನ್ನು ವರಿಸಬಾರದು ಅನ್ನೋ ಬಗ್ಗೆ ಚಾಣಕ್ಯರು ತಮ್ಮ ನೀತಿಯಲ್ಲಿ ಹೇಳಿದ್ದಾರೆ. ಆ ಬಗ್ಗೆ ತಿಳಿಯೋಣ ಬನ್ನಿ..
ಮೊದಲನೇಯದಾಗಿ, ಹೆಚ್ಚಿನ ಪುರುಷರು, ಹೆಣ್ಣಿನ ಸೌಂದರ್ಯಕ್ಕೆ ಮರಳಾಗುತ್ತಾರೆ. ಸುಂದರವಾಗಿರುವ ಹೆಣ್ಣು ಮಕ್ಕಳೆಲ್ಲ ಕೆಟ್ಟವರಂತಲ್ಲ. ಆದ್ರೆ ಚಂದದ ಹೆಣ್ಣಿನ ಮನಸ್ಸು ಕೂಡ ಸುಂದರವಾಗಿದೆಯಾ ಅನ್ನೋದನ್ನ ಪುರುಷ ಪರೀಕ್ಷೆ ಮಾಡಬೇಕು. ಆಕೆಯಲ್ಲಿ ಹಿರಿಯರಿಗೆ ಗೌರವ ಕೊಡುವ ಗುಣವಿದೆಯಾ..? ಚಿಕ್ಕ ಮಕ್ಕಳಲ್ಲಿ ಆಕೆ ಪ್ರೀತಿಯನ್ನು ತೋರುತ್ತಾಳಾ..? ನಿಮ್ಮ ಮೇಲೆ ನಿಜವಾಗಲೂ ಆಕೆಗೆ ಪ್ರೀತಿ ಇದೆಯಾ..? ಇವೆಲ್ಲಾ ಗುಣಗಳು ಅವಳಲ್ಲಿ ಇದೆಯಾ ಎಂದು ನೀವು ನೋಡಬೇಕು.
ಎರಡನೇಯದಾಗಿ ನಿಮಗಿಂತ ಹೆಚ್ಚು ನಿಮ್ಮ ಬಳಿ ಇರುವ ಆಸ್ತಿ, ಆಭರಣವನ್ನ ಪ್ರೀತಿಸುವವಳು. ಇಂಥ ಹೆಣ್ಣು ಮಕ್ಕಳು ಇಂದಿನ ಕಾಲದಲ್ಲಿ ಹಲವು ಕಡೆ ಕಾಣ ಸಿಗುತ್ತಾರೆ. ಇಂಥವರು ನೀವು ರಾತ್ರಿ ಹಗಲು ಬೆವರು ಸುರಿಸಿ ದುಡಿದ ಹಣವನ್ನ, ಧಾರಾಳವಾಗಿ ಖರ್ಚು ಮಾಡುತ್ತಾರೆ. ಇಂಥವರಿಗೆ ಹಣ ಕೂಡಿಡುವ ಬುದ್ಧಿ ಇರುವುದಿಲ್ಲ. ಇಂಥವರು ಯಾವುದೇ ಕಾರಣಕ್ಕೂ ನಿಮ್ಮ ಆಪತ್ಕಾಲದಲ್ಲಿ ನಿಮಗೆ ಸಹಾಯಕ್ಕೂ ಬರುವುದಿಲ್ಲ, ನಿಮ್ಮ ಜೊತೆ ಜೀವನವೂ ಮಾಡುವುದಿಲ್ಲ.
ಕೊನೆಯದಾಗಿ ಗಂಡನ ಮನೆಯ ಗೌಪ್ಯತೆಯನ್ನು ಕಾಪಾಡದ ಹೆಣ್ಣು. ಗಂಡನ ಮನೆಯಲ್ಲಿ ನಡೆಯುವ ಜಗಳವನ್ನ ತವರು ಮನೆಯವರಿಗೆ, ಗೆಳೆಯ ಗೆಳತಿಯರಿಗೆ ಹೇಳುವ ಹೆಣ್ಣು, ನಿಮ್ಮ ಮನೆಯ ಗೌರವವನ್ನು ಎಂದಿಗೂ ಕಾಪಾಡುವುದಿಲ್ಲ. ಯಾವ ಹೆಣ್ಣಿಗೆ ಗೌಪ್ಯತೆ ಕಾಪಾಡುವ ಗುಣ ಇರುವುದಿಲ್ಲವೋ, ಆಕೆ ಎಂದಿಗೂ ಉತ್ತಮ ಪತ್ನಿಯಾಗುವುದಿಲ್ಲ. ನಡೆದ ಜಗಳವನ್ನು ದೊಡ್ಡದು ಮಾಡದೇ, ಹೊಂದಿಕೊಂಡು ಹೋಗುವ ಹೆಣ್ಣು, ತನ್ನ ಮನೆಯಲ್ಲಿ ನಡೆದ ಜಗಳದ ಬಗ್ಗೆ ಯಾರಿಗೂ ಹೇಳದ ಹೆಣ್ಣು, ಗಂಡನ ಬಗ್ಗೆ ಯಾರಿಗೂ ಚಾಡಿ ಹೇಳದ ಹೆಣ್ಣು, ಉತ್ತಮ ಪತ್ನಿಯಾಗುತ್ತಾಳೆ. ಇಂಥ ಹೆಣ್ಣನ್ನ ಮದುವೆಯಾಗಬೇಕು ಎನ್ನುತ್ತಾರೆ ಚಾಣಕ್ಯರು.