Friday, October 18, 2024

Latest Posts

ಆಚಾರ್ಯ ಚಾಣಕ್ಯರ ಈ 5 ಮಾತನ್ನು ಕೇಳಿದರೆ, ಯಶಸ್ಸು ಖಚಿತ..

- Advertisement -

ಕೌಟಿಲ್ಯ ನೀತಿಯಲ್ಲಿ ನಿಪುಣರಾದಂಥ ಆಚಾರ್ಯ ಚಾಣಕ್ಯರು ಬುದ್ಧಿವಂತಿಕೆಗೆ ಹೆಸರಾದವರು. ಇವರು ಹೇಳಿರುವ ನೀತಿಯನ್ನು ಜೀವನದಲ್ಲಿ ಅಳವಡಿಸಿಕೊಂಡಲ್ಲಿ, ಜೀವನದಲ್ಲಿ ಯಶಸ್ಸು ಗಳಿಸೋದು ಖಚಿತ. ಅಂಥ ನೀತಿಯಲ್ಲಿ ಯಾವ ಹೆಣ್ಣನ್ನು ವರಿಸಬೇಕು. ಎಂಥ ಹೆಣ್ಣನ್ನು ತ್ಯಜಿಸಬೇಕು. ಯಾವ ಪುರುಷನನ್ನು ವಿವಾಹವಾಗಬೇಕು. ಎಂಥ ಪುರುಷನ ಸಂಗ ಮಾಡಬಾರದು. ಜೀವನದಲ್ಲಿ ಹೇಗಿರಬೇಕು ಎಂಬುದರ ಬಗ್ಗೆ ಚಾಣಕ್ಯರು ಸಾಕಷ್ಟು ವಿಷಯಗಳನ್ನು ಹೇಳಿದ್ದಾರೆ. ಅಂಥ ವಿಷಯಗಳಲ್ಲಿ ನಾವಿವತ್ತು 5 ವಿಷಯಗಳನ್ನು ಹೇಳಲಿದ್ದೇವೆ. ಆ ವಿಷಯಗಳನ್ನು ನೀವು ಜೀವನದಲ್ಲಿ ಅಳವಡಿಸಿಕೊಂಡಲ್ಲಿ, ಯಶಸ್ಸು ಕಟ್ಟಿಟ್ಟ ಬುತ್ತಿ.

ಮೊದಲನೇಯದಾಗಿ ಮೂರ್ಖರ ಸಂಗ ಮಾಡಬೇಡಿ. ಮೂರ್ಖರೊಂದಿಗೆ ವಾದ ಮಾಡಬೇಡಿ. ಒಂದು ಗಾದೆ ಮಾತಿದೆ, ಮೂರ್‌ಖರೊಂದಿಗೆ ವಾದ ಮಾಡುವುದು ಒಂದೇ ಗೋಡೆಗೆ ತಲೆ ಚಚ್ಚಿಕೊಳ್ಳುವುದೂ ಒಂದೆ ಎಂದು. ಇದೇ ಈ ಮಾತಿನ ಅರ್ಥ. ವಾದ ಮಾಡುವವರೆಲ್ಲ ಮೂರರ್ಖರಲ್ಲ. ಆದ್ರೆ ಮೂರ್ಖರಂತೆ ವಾದ ಮಾಡುವವರಿಂದ ನಾವು ದೂರವಿರಬೇಕು ಅನ್ನೋದು ಚಾಣಕ್ಯರ ಮಾತು.

 ಎರಡನೇಯದಾಗಿ ನಿಮ್ಮಲ್ಲಿರುವ ದುರ್ಬಲತೆಯನ್ನು ನೀವು ಯಾರಿಗೂ ಹೇಳಬಾರದು. ಇದು ರಾಮಾಯಣವನ್ನು ನೋಡಿ ನಾವು ಕಲಿಯಬೇಕಾದ ಸಂಗತಿಯಾಗಿದೆ. ರಾವಣನನ್ನು ಸಂಹಾರ ಮಾಡಲು, ಎಲ್ಲಿ ಬಾಣ ಬಿಡಬೇಕು ಎಂದು ರಾಮನಿಗೆ ಗೊತ್ತಿರಲಿಲ್ಲ. ಆದರೆ ರಾವಣನ ಹೊಕ್ಕಳಲ್ಲಿ ಅಮೃತವಿದೆ ಎಂದು ವಿಭೀಷಣ ರಾಮನಿಗೆ ಹೇಳಿದ. ಹಾಗಾಗಿಯೇ ರಾಮ ರಾವವಣನ ಹೊಕ್ಕಳಿಗೆ ಬಾಣ ಬಿಟ್ಟು,ರಾವಣನ ಸಂಹಾರ ಮಾಡಿದ. ಹಾಗಾಗಿಯೇ ಚಾಣಕ್ಯರು ಹೇಳುತ್ತಾರೆ, ನಿಮ್ಮಲ್ಲಿರುವ ದುರ್ಬಲತೆಯನ್ನು ನೀವು ಯಾರಲ್ಲಿಯೂ ಹೇಳಬಾರದು. ಸಂಬಂಧಿಕರು, ಅಣ್ಣ- ತಮ್ಮಂದಿರು, ಗಂಡ ಹೆಂಡತಿ, ಮಕ್ಕಳು ಯಾರಲ್ಲಿಯೂ ನಿಮ್ಮ ದುರ್ಬಲತೆಯನ್ನು ತೋರ್ಪಡಿಸಬೇಡಿ.

ಮೂರನೇಯದಾಗಿ ಅವಶ್ಯಕತೆ ಇದ್ದ್ಲಲಿ ಮಾತ್ರ ಹಣವನ್ನು ವ್ಯಯಿಸಿ. ನಾವು ಈಗಾಗಲೇ ನಿಮಗೆ ಉದ್ಯಮದ ಉಪಾಯಗಳನ್ನು ಹೇಳುವಾಗ, ಈ ವಿಷಯದ ಬಗ್ಗೆ ಹೇಳಿದ್ದೆವು. ಏನೆಂದರೆ ನಾವು ಶ್ರೀಮಂತರಂತೆ ಕಾಣಿಸಲು ಪ್ರಯತ್ನಿಸಬಾರದು. ಬದಲಾಗಿ ಶ್ರೀಮಂತರಾಗಿ ತೋರಿಸಬೇಕೆಂದು. ಈ ಮಾತು ಚಾಣಕ್ಯರ ಮೂರನೇ ನುಡಿಗೆ ಅನ್ವಯಿಸುತ್ತದೆ. ಹಣವನ್ನು ಬೇಕಾದ್ದಲ್ಲಿ ಅಷ್ಟೇ ಖರ್ಚು ಮಾಡಬೇಕೇ, ವಿನಃ ಸಿಕ್ಕ ಸಿಕ್ಕದ್ದನ್ನೆಲ್ಲಾ ಕೊಂಡುಕೊಂಡು ಖರ್ಚು ಮಾಡಬಾರದು.  ಇದರಿಂದ ಭವಿಷ್ಯದಲ್ಲಿ ಹಣದ ಸಮಸ್ಯೆ ಬಂದೇ ಬರುತ್ತದೆ.

ನಾಲ್ಕನೇಯದಾಗಿ, ಎಲ್ಲರ ಮೇಲೂ ವಿಶ್ವಾಸ ಇಡಬೇಡಿ. ಕೆಲವರು ಮುಖವನ್ನು ನೋಡಿ, ಮಾತನ್ನು ನೋಡಿ, ಒಂದೇ ಸಲ ಅವರು ಒಳ್ಳೆಯವರೆಂದು ಭಾವಿಸಿಬಿಡುತ್ತಾರೆ. ಮತ್ತು ಗೆಳೆತನ ಮಾಡಿ ಬಿಡುತ್ತಾರೆ. ಇದು ತಪ್ಪು ಎನ್ನುತ್ತಾರೆ ಚಾಣಕ್ಯರು. ನಿಮಗೆ ಎದುರಿನವರು ಎಷ್ಟೇ ಒಳ್ಳೆಯವರಂತೆ ಕಂಡರೂ, ಅವರ ಬಳಿ ಎಷ್ಟು ಬೇಕೋ ಅಷ್ಟೇ ಸ್ನೇಹದಿಂದಿರಿ. ಅತೀಯಾದ ವಿಶ್ವಾಸ, ಮೋಸ ಹೋಗುವಂತೆ ಮಾಡುತ್ತದೆ. ಮನಸ್ಸನ್ನ ಘಾಸಿಗೊಳಿಸುತ್ತದೆ ಅನ್ನೋದು ಚಾಣಕ್ಯರ ಅಂಬೋಣ.

ಐದನೇಯದಾಗಿ, ಜೀವನದಲ್ಲಿ ಯಶಸ್ಸು ಗಳಿಸಬೇಕೆಂದರೆ, ಪ್ರೀತಿ ಪ್ರೇಮದಿಂದ ದೂರವಿರಿ ಎನ್ನುತ್ತಾರೆ ಚಾಣಕ್ಯರು. ಈ ಮಾತು ಇಂದಿನ ಪೀಳಿಗೆಯವರಿಗೆ ಅನ್ವಯಿಸುತ್ತದೆ. ಅದರಲ್ಲೂ ಪುರುಷರಿಗೆ. ಚಿಕ್ಕ ವಯಸ್ಸಿನಲ್ಲೇ ಪ್ರೀತಿ ಪ್ರೇಮವೆಂದು ತಲೆ ಕೆಡಿಸಿಕೊಂಡು, ಅರ್ಧಂಬರ್ಧ ಓದಿ, ಸರಿಯಾಗಿ ಕೆಲಸ ಸಿಗದೇ, ಜೀವನದಲ್ಲಿ ಯಶಸ್ಸು ಗಳಿಸದೇ, ಮಾಮೂಲಿ ಜೀವನ ಮಾಡಿಬಿಡುತ್ತಾರೆ. ಹಾಗಾಗಿ ಇಂಥವರಿಗಾಗಿಯೇ ಚಾಣಕ್ಯರು, ಪ್ರೀತಿ ಪ್ರೇಮದಿಂದ ದೂರವಿರಿ, ಏಕಾಂಗಿಯಾಗಿ ಯಶಸ್ಸು ಗಳಿಸಿ ಎಂದು ಹೇಳಿದ್ದಾರೆ.

- Advertisement -

Latest Posts

Don't Miss