www.karnatakatv.net: ಬೆಳಗಾವಿ: ಪುನೀತ್ ರಾಜಕುಮಾರ್ ಅವರು ಅತ್ಯುತ್ತಮ ನಟರಾಗಿದ್ದು, ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದರು. ಅವರ ನಿಧನದಿಂದ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ಸಂತಾಪ ಸೂಚಿಸಿದ್ದಾರೆ.
ರಾಜಕುಮಾರ್ ಕುಟುಂಬದೊoದಿಗೆ ಮೊದಲಿನಿಂದಲೂ ನಮ್ಮ ಕುಟುಂಬಕ್ಕೆ ಉತ್ತಮ ಒಡನಾಟವಿದೆ. ಉತ್ತರ ಕರ್ನಾಟಕದ ಜನರ ಬಗ್ಗೆ ರಾಜಕುಮಾರ್ ಅವರಿಗೆ ವಿಶೇಷ ಒಲವು ಇತ್ತು. ಪುನೀತ್ ರಾಜಕುಮಾರ್ ಅವರಿಗೂ ಸಹ ವಿಶೇಷ ಪ್ರೀತಿ ಇತ್ತು ಎಂದು ಸ್ಮರಿಸಿದ್ದಾರೆ. ಪುನೀತ್ ರಾಜಕುಮಾರ್ ಅವರು ಏಕಾಏಕಿ ನಿಧನರಾಗಿದ್ದು ಧಿಗ್ಬ್ರಮೆ ಮೂಡಿಸಿದೆ. ಇದು ಅತ್ಯಂತ ನೋವಿನ ಸಂಗತಿ. ಕನ್ನಡ ಚಿತ್ರರಂಗಕ್ಕೆ ಪುನೀತ್ ಕೊಡುಗೆ ಅಪಾರ ಎಂದು ಹೇಳಿದ್ದಾರೆ. ಪುನೀತ್ ರಾಜಕುಮಾರ್ ಅವರ ಕುಟುಂಬ ವರ್ಗ ಹಾಗೂ ಅಭಿಮಾನಿಗಳಿಗೆ ದುಃಖ ಸಹಿಸಿಕೊಳ್ಳುವ ಶಕ್ತಿ ದೊರೆಯಲಿ ಎಂದು ಸತೀಶ ಜಾರಕಿಹೊಳಿ ಆಶಿಸಿದ್ದಾರೆ.




