Wednesday, July 2, 2025

Latest Posts

ಶಶಿಕಲಾ ಜೊಲ್ಲೆ ಅವರ ವಿರುದ್ದ ಬೆಳಗಾವಿ ಕೆಪಿಸಿಸಿ ಕಾರ್ಮಿಕ ಘಟಕದ ಅಧ್ಯಕ್ಷ ಅಕ್ರೋಶ

- Advertisement -

www.karnatakatv.net : ಬೆಳಗಾವಿ:  ರಾಜ್ಯದಲ್ಲಿ ಗರ್ಭಿಣಿಯರಿಗೆ ಮತ್ತು ಮಕ್ಕಳಿಗೆ ನೀಡುವ ಪೌಷ್ಟಿಕ ಆಹಾರದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ಹಗರಣದಲ್ಲಿ ಭಾಗಿಯಾದ ಸಚಿವೆ ಶಶಿಕಲಾ ಜೊಲ್ಲೆ ಅವರಿಗೆ ನಾಚಿಕೆ ಅನ್ನೊದು ಇದ್ದರೆ ಸಚಿವ ಸ್ಥಾನದಿಂದ ಹೊರ ಬರಬೇಕು ಎಂದು ನಗರದ ಕಾಂಗ್ರೆಸ್ ಕಚೇರಿಯಲ್ಲಿ ಹೇಳಿಕೆ ನೀಡಿರುವ ಕೆಪಿಸಿಸಿ ಕಾರ್ಮಿಕ ಘಟಕದ ಬೆಳಗಾವಿ ಅಧ್ಯಕ್ಷರು ಆಗಿರುವ ಮಂಜುನಾಥ ಕಾಂಬಳೆ ಅಕ್ರೋಶ ವ್ಯಕ್ತಪಡಿಸಿದರು.

ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಬೆಳಗಾವಿ ಕಾರ್ಮಿಕ ಘಟಕದ ಅಧ್ಯಕ್ಷರು ಆದ ಮಂಜುನಾಥ ಕಾಂಬಳೆ ಅವರು ರಾಜ್ಯದಲ್ಲಿ ಬಿಜೆಪಿ ಸರಕಾರ ಆಡಳಿತಕ್ಕೆ ಬಂದಾಗಿಂದ ಭ್ರಷ್ಟಾಚಾರ ಮಾಡೋದೆ ಆಗಿದೆ. ಸರಕಾರಗಳು  ಮಕ್ಕಳು ಅಪೌಷ್ಟಿಕತೆಯಿಂದ  ಬಳಲಬಾರದು ಎಂದು ಸಾಕಷ್ಟು ಯೋಜನೆಗಳ ಜೊತೆಗೆ ಅನುದಾನ ಬಿಡುಗಡೆ ಮಾಡುತ್ತಿದೆ ಆದರೆ ಇಂತಹ ಸಚಿವರು ನಮ್ಮ ರಾಜ್ಯದಲ್ಲಿ ಇರುವುದು ನಮ್ಮ ದುರದೈವ ಎಂದು ಸಚಿವೆ ಶಶಿಕಲಾ ಜೊಲ್ಲೆ ವಿರುದ್ದ ಅಕ್ರೋಶ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಮೊಟ್ಟೆ ಡೀಲ್ ಹಗರಣ ಕುರಿತು ಸಚಿವೆ ಶಶಿಕಲಾ ಜೊಲ್ಲೆ ಅವರು ರಾಜೀನಾಮೆ ನೀಡಬೇಕು ಮತ್ತು  ಸೂಕ್ತ ತನಿಖೆ ಮಾಡಿ ಕಾನೂನು ರೀತಿಯಲ್ಲಿ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

- Advertisement -

Latest Posts

Don't Miss