www.karnatakatv.net: ಬೆಂಗಳೂರು : ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರ ಬಗ್ಗೆ ಗುಸುಗುಸು ಮಾತನಾಡಿದ್ದಕ್ಕೆ ಸಲೀಂ ರನ್ನು ಸಸ್ಪೆಂಡ್ ಮಾಡಲಾಗಿದೆ.
ಹೌದು..ಕೆಪಿಸಿಸಿ ಕಚೇರಿಯಲ್ಲಿ ಮಾಜಿ ಸಂಸದ ವಿ.ಎಸ್ ಉಗ್ರಪ್ಪ ಕರೆದಿದ್ದ ಪತ್ರಿಕಾಗೋಷ್ಠಿಯ ಬಿಡುವಿನ ವೇಳೆ ಆಕಸ್ಮಿಕವಾಗಿ ಸಲೀಂ ಜೊತೆ ಮಾತಿಗಿಳಿದ್ರು, ಈ ವೇಳೆ ಈ ಇಬ್ಬರೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಬಗ್ಗೆ ಮಾತನಾಡಿಕೊಳ್ತಿರೋದು ಕ್ಯಾಮರಾದಲ್ಲಿ ಸಂಭಾಷಣೆ ಸಹಿತ ರೆಕಾರ್ಡ್ ಆಗಿತ್ತು. ಇದು ದೊಡ್ಡ ಸ್ಕ್ಯಾಮ್. ಕೆದಕಿದರೆ ಇವರದ್ದು ಬರುತ್ತದೆ. ಇವರ ಹುಡುಗರು 50 ರಿಂದ 100 ಕೋಟಿ ಮಾಡಿದ್ದಾರೆ. ಇವನೇ 50, 100 ಮಾಡಿದ್ದಾನೆಂದರೆ ಡಿಕೆ ಹತ್ತಿರ ಎಷ್ಟಿರಬೇಕು ಲೆಕ್ಕಹಾಕಿ. ಅವನು ಬರಿ ಕಲೆಕ್ಷನ್ ಗಿರಾಕಿ ಅಂತ ಸಲೀಂ ಹೇಳಿದ್ರು.
ಹಿಗೇ ಗುಸುಗುಸು ಮಾತನಾಡಿದ್ದಕ್ಕೆ, ಕಾಂಗ್ರೆಸ್ ಕಾರ್ಯಕತ್ರರು ಅಸಮಾಧಾನ ಗೊಂಡಿದ್ದು ಕೂಡಲೇ ಅವರಿಬ್ಬರನ್ನು ಅಮಾನತುಗೋಳಿಸಬೇಕು ಎಂದು ಡಿ.ಕೆ ಶಿವಕುಮಾರ್ ಅವರ ಬೆಂಬಲಿಗರು ವತ್ತಾಯ ಮಾಡುತ್ತಿದ್ದಾರೆ. ಪಟ್ಟು ಹಿಡಿದು ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೊಡಿಸಿದ್ದು ನಾವು ಎಂದು ಎನ್ನುವ ಸಲೀಂ- ಉಗ್ರಪ್ಪ ನಡುವಣ ಮಾತುಗಳು ಬಹಿರಂಗವಾಗಿವೆ. ಕರ್ನಾಟಕ ರಾಜಕೀಯದಲ್ಲಿ ಭ್ರಷ್ಟಾಚಾರ ಎಂಬುದು ಅವ್ಯಾಹತವಾಗಿ ನಡೆದು ಬಂದಿದೆ.
ಕರ್ನಾಟಕ ಟಿವಿ- ಬೆಂಗಳೂರು