KPSCಗೆ ನೂತನ ಅಧ್ಯಕ್ಷರನ್ನ ನೇಮಿಸಿದ ರಾಜ್ಯಪಾಲ

ರಾಜ್ಯ ಬಿಜೆಪಿ ಸರ್ಕಾರದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಹೊರತುಪಡಿಸಿ ಯಾವೊಬ್ಬ  ಸಚಿವರು ಇಲ್ಲದಿದ್ದರೂ ವರ್ಗವಾಣೆ ಸೇರಿದಂತೆ ನೇಮಕಾತಿ ಪ್ರಕ್ರಿಯೆಗಳು ರಾಕೆಟ್ ವೇಗದಲ್ಲಿ ಮುಂದುವರೆದಿದೆ. ಇಂದು ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷರನ್ನಾಗಿ ಷಡಕ್ಷರಿ ಸ್ವಾಮಿಯವರನ್ನ ನೇಮಕಗೊಳಿಸಿ ರಾಜ್ಯಪಾಲ ವಜುಬಾಯಿವಾಲಾ ಆದೇಶ ಹೊರಡಿಸಿದ್ದಾರೆ. ಈ ಮೊದಲು ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯರಾಗಿದ್ದ ಷಡಕ್ಷರಿ ಸ್ವಾಮಿ ಇದೀಗ ನೂತನ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ..

ಕುಮಾರಸ್ವಾಮಿ-ಡಿಕೆಶಿ ಹಗ್ಗಜಗ್ಗಾಟದಿಂದ ತಡವಾಗಿದ್ದ ನೇಮಕ

ಈ ಮೊದಲು ದೋಸ್ತಿ ಸರ್ಕಾರ ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷರ ನೇಮಕ ವಿಚಾರದಲ್ಲಿ ಹಗ್ಗಜಗ್ಗಾಟ ನಡೆದಿದ್ದು. ಕುಮಾರಸ್ವಾಮಿ ತನ್ನ ಆಪ್ತ ಐಎಎಸ್ ಅಧಿಕಾರಿ ಕರೀಗೌಡರನ್ನಅಧ್ಯಕ್ಷರನ್ನಾಗಿ ನೇಮಿಸಲು ಮುಂದಾಗಿದ್ರು, ಆದ್ರೆ, ಡಿ.ಕೆ ಶಿವಕುಮಾರ್ ಚನ್ನಪಟ್ಟಣ ಮೂಲದ ರಘುನಂದನ್ ರಾಮಣ್ಣಅವರನ್ನ ನೇಮಿಸಲು ಪಟ್ಟು ಹಿಡಿದಿದ್ರು. ಡಿಕೆಶಿ-ಹೆಚ್ಡಿಕೆ ಹಗ್ಗಜಗ್ಗಾಟ ಅಧ್ಯಕ್ಷರ ನೇಮಕ ತಡವಾಗಲು ಕಾರಣವಾಗಿದ್ದು. ಈ ನಡುವೆ ದೋಸ್ತಿ ಸರ್ಕಾರ ಪತನವಾದ ಹಿನ್ನೆಲೆ ಯಡಿಯೂರಪ್ಪ ಸಿಎಂ ಆದ್ರು.. ಇದೀಗ ಷಡಕ್ಷರು ಸ್ವಾಮಿಯವರನ್ನ ರಾಜ್ಯಪಾಲರು ನೇಮಿಸಿದ್ದಾರೆ..

About The Author