Thursday, November 30, 2023

Latest Posts

ದ್ವೀಪ ಕೊಳ್ಳಲು ಮುಂದಾದ ಟ್ರಂಪ್.. ಆಗಲ್ಲ ಅಂತು ಡೆನ್ಮಾರ್ಕ್..!

- Advertisement -

ಅಮೆರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಡೆನ್ಮಾರ್ಕ್ ನ ಗ್ರೀನ್ ಲ್ಯಾಂಡ್ ದ್ವೀಪ ಕೊಳ್ಳಲು ಆಸಕ್ತಿ ತೋರಿದ್ದಾರೆ. ಆದ್ರೆ, ಡೆನ್ಮಾರ್ಕ್ ಸರ್ಕಾರ ಮಾತ್ರ ಯಾವುದೇ ಕಾರಣಕ್ಕೂ ಸಾಧ್ಯವಿಲ್ಲಅಂತ ಖಡಕ್ಕಾಗಿ ತಿಳಿಸಿದೆ.. ಎರಡು ದಿನಗಳ ಭೇಟಿಗಾಗಿ ಡೋನಾಲ್ಡ್ ಟ್ರಂಪ್ ಡೆನ್ಮಾರ್ಕ್ ಗೆ ತೆರಳಲಿದ್ದು ಈ ವೇಳೆ ಅಧಿಕೃತ ಪ್ರಸ್ತಾಪ ಮಾಡುವ ಸಾಧ್ಯತೆ ಇದೆ. ಈ ಸಂಬಧ ಈಗಾಗಲೇ ಡೆನ್ಮಾರ್ಕ್ ವಿರೋಧ ಪಕ್ಷ ಮಾರಾಟಕ್ಕೆ ವಿರೋಧ ವ್ಯಕ್ತಪಡಿಸಿದೆ.

ಗ್ರೀನ್ ಲ್ಯಾಂಡ್ ಮೇಲೆ ಟ್ರಂಪ್ ಗ್ಯಾಕೆ ಕಣ್ಣು..?

ಇನ್ನು ಈ ದ್ವೀಪ ಶೇಕಡಾ 80 ರಷ್ಟು ಮಂಜಿನಿಂದ ಕೂಡಿದ್ದು 20%ರಷ್ಟು ಮಾತ್ರ ವಾಸಯೋಗ್ಯವಾಗಿದೆ.. 56 ಸಾವಿರ ಜನಸಂಖ್ಯೆ ಹೊಂದಿರುವ  ಈ ದ್ವೀಪದ ಮೇಲೆ ಹಲವು ದೇಶಗಳ ಕಣ್ಣಿದೆ.. ರಷ್ಯಾ, ಅಮೆರಿಕಾ, ಯೂರೋಪ್  ಈ ದ್ವೀಪ ದ ಮೇಲೆ ಕಣ್ಣಿಟ್ಟಿದೆ.. ಆದ್ರೆ ಡೆನ್ಮಾರ್ಕ್ ಈ ದ್ವೀಪಕ್ಕೆ ಹಣಕಾಸಿನ ನೆರವು ನೀಡುವ ಮೂಲಕ ಹಿಡಿತದಲ್ಲಿ ಇಟ್ಟುಕೊಂಡಿದೆ. ಈಗಾಗಲೇ ಚೀನಾ ಇಲ್ಲಿ ಎರಡು ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸಹಾಯ ಮಾಡುವ ಮೂಲಕ ದ್ವೀಪದಲ್ಲಿ ಸಾಮ್ರಾಜ್ಯ ಸ್ಥಾಪನೆಗೆ ಕಣ್ಣು ಹಾಕಿದೆ.. ಎರಡನೇ ವಿಶ್ವಯುದ್ಧದ ವೇಳೆ ಈ ದ್ವೀಪವನ್ನ ಕೇಂದ್ರ ಸ್ಥಾನವಾಗಿಸಿಕೊಂಡು ಅಮೆರಿಕಾ ಯುದ್ಧದಲ್ಲಿ ಭಾಗಿಯಾಗಿತ್ತು..  ಇದೀಗ ಡೆನ್ಮಾರ್ಕ್ ಗ್ರೀನ್ ಲ್ಯಾಂಡ್ ಮಾರಾಟವನ್ನ ತಳ್ಳಿಹಾಕುವ ಮೂಲಕ ಅಮೆರಿಕಾ ಅಧ್ಯಕ್ಷ ಟ್ರಂಪ್ ಆಸೆಗೆ ತಣ್ಣೀರು ಎರಚಿದೆ.

- Advertisement -

Latest Posts

Don't Miss