Friday, July 11, 2025

Latest Posts

Krishna Byregowda: ತಹಶಿಲ್ದಾರ್ ಕಛೇರಿಗೆ ಸಚಿವರ ದಿಡೀರ್ ಭೇಟಿ ಅಧಿಕಾರಿಗಳ ತರಾಟೆಗೆ..!

- Advertisement -

ಹುಬ್ಬಳ್ಳಿ: ಕಂದಾಯ ಸಚಿವ ಕೃಷ್ಣಭೈರೇಗೌಡ ಹುಬ್ಬಳ್ಳಿ ತಹಶಿಲ್ದಾರ ಕಚೇರಿಗೆ ದಿಢೀರ್ ಭೇಟಿ ನೀಡಿ ವಿವಿಧ ದಾಖಲೆಗಳನ್ನು ಪರಿಶೀಲಿಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ತಹಶಿಲ್ದಾರ ಕಚೇರಿಯ ಮೊದಲ ಮಹಡಿಯಲ್ಲಿ ತೆರದಿರುವ ನಾಗರಿಕ ಮಿತ್ರ ಕೇಂದ್ರ, ಗ್ರಾಮ ಲೆಕ್ಕಾಧಿಕಾರಿಗಳ ಕಾರ್ಯಾಲಯಕ್ಕೆ ತೆರಳಿದ ಸಚಿವರು ಹುಬ್ಬಳ್ಳಿ ತಾಲೂಕು ಹಾಗೂ ಗ್ರಾಮೀಣ ಭಾಗದ ಜನರ ದೂರುಗಳು ಹಾಗೂ ಅದಕ್ಕೆ ಸ್ಪಂದಿಸಿದ ವರದಿಗಳ ಕುರಿತು ಪರಿಶೀಲಿಸಿದರು.

ಈ ವೇಳೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ತಹಶಿಲ್ದಾರ ಕಲ್ಲಗೌಡ ಪಾಟೀಲ್, ಗ್ರಾಮೀಣ ತಹಶಿಲ್ದಾರರ್ ಪ್ರಕಾಶ ನಾಶಿ ಸೇರಿದಂತೆ ಅಧಿಕಾರಿಗಳಿಗೆ ಕೆಲವು ಸಲಹೆ ಸೂಚನೆಗಳನ್ನು ನೀಡಿದರು. ಯಾವುದೇ ಜೆರಾಕ್ಸ್ ಸೆಂಟರ್ ಹಾಗೂ ವಿವಿಧ ದೂರುಗಳ ಹಿನ್ನಲೆಯಲ್ಲಿ ಅಧಿಕಾರಿಗಳಿಗೆ ಅವರು ತರಾಟೆ ತೆಗೆದುಕೊಂಡರು.

ನಾಗರಿಕ ಮಿತ್ರ ಕೇಂದ್ರಕ್ಕೆ ಬರುವ ಜನರಿಗೆ ತೊಂದರೆಯಾಗದಂತೆ ತ್ವರಿತ ಕ್ರಮ ಕೈಗೊಳ್ಳಬೇಕು ಅವರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಹೇಗೆ ಭೇಟಿ ಆಗಬೇಕು ಎಂಬ ಸಮಗ್ರ ಮಾಹಿತಿ ನೀಡಬೇಕು. ಸಮಯಕ್ಕೆ ಸರಿಯಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಖಡಕ್ಕಾಗಿ ಸೂಚಿಸಿದರು.

Chaithra Kundapura : ಚೈತ್ರಾ ಕುಂದಾಪುರ ಸೇರಿ 7 ಆರೋಪಿಗಳಿಗೆ 14 ದಿನ ಸೆರೆವಾಸ

Farmers Protest: ವಿವಿಧ ಬೇಡಿಕೆಗಳ ಈಡೇರಿಕೆಗೆ ಕುಂದಗೋಳ ರೈತರಿಂದ ಪ್ರತಿಭಟನೆ..!

HD Kumarswamy: ವೀರಪ್ಪಮೊಯ್ಲಿ ವಿರುದ್ಧ ಹೆಚ್ಡಿಕೆ ಕೆಂಡಾಮಂಡಲ..!

- Advertisement -

Latest Posts

Don't Miss