- Advertisement -
Chikkodi News: ಚಿಕ್ಕೋಡಿ: ಚಿಕ್ಕೋಡಿಯಲ್ಲಿ ಕೃಷ್ಣಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ನದಿ ದಡದಲ್ಲಿ ಜನ ಹುಚ್ಚಾಟ ನಡೆಸುತ್ತಿದ್ದಾರೆ.
ಕಂದಾಯ ಸಚಿವರು ಈಗಾಗಲೇ, ಜಿಲ್ಲಾಡಳಿತಕ್ಕೆ ನದಿ ತೀರದಲ್ಲಿ ಕಟ್ಟೆಚ್ಚರ ವಹಿಸುವಂತೆ ಆದೇಶ ನೀಡಿ ಹೋಗಿದ್ದಾರೆ. ಕೆಲ ಹಿಂದೆಯಷ್ಟೇ ಸಚಿವ ಸತೀಶ್ ಜಾರಕಿಹೊಳಿ ಇಲ್ಲಿ ಭೇಟಿ ನೀಡಿ, ಪರಿಶೀಲನೆ ನಡೆಸಿ, ಆದೇಶ ನೀಡಿ ಹೋಗಿದ್ದರು. ಆದರೂ ಕೂಡ ಸಚಿವರ ಆದೇಶಕ್ಕೆ ಜಿಲ್ಲಾಡಳಿತ ಬೆಲೆಯೇ ನೀಡಿಲ್ಲ.
ಅಥಣಿ ತಾಲೂಕಿನ ಹಲ್ಯಾಳ-ದರೂರು ಸೇತುವೆ ಬಳಿ ಜನ, ಜೀವದ ಹಂಗು ತೊರೆದು, ಹುಚ್ಚಾಟ ನಡೆಸುತ್ತಿದ್ದಾರೆ. ಆದರೆ ಅಥಣಿ ತಾಲೂಕಾಡಳಿತ ಮಾತ್ರ, ಎಲ್ಲವೂ ಗೊತ್ತಿದ್ದು, ಏನೂ ಗೊತ್ತೇ ಇಲ್ಲವೆಂಬಂತೆ ಇದೆ. ಇಲ್ಲೇನಾದರೂ ಅನಾಹುತವಾದರೆ, ಅದಕ್‌ಯಾರು ಹೊಣೆ ಎಂದು ಸಾರ್ವಜನಿಕರು ಪ್ರಶ್ನಿಸಿದ್ದು, ಸುದ್ದಿ ಗಮನಿಸಿದ ಮೇಲೆಯಾದರೂ ಜಿಲ್ಲಾಡಳಿತ ಎಚ್ಚೆತ್ತುಕೊಳ್ಳುತ್ತಾರಾ ಅಂತಾ ಕಾದು ನೋಡಬೇಕಿದೆ.
- Advertisement -