Friday, December 13, 2024

Latest Posts

ಕೆ. ಆರ್ ಪೇಟೆಯಲ್ಲಿ ಗೆಲ್ಲೋದ್ಯಾರು..?

- Advertisement -

ಹುಟ್ಟೂರಿನ ಜನ ಯಡಿಯೂರಪ್ಪಗೆ ಶಕ್ತಿ ತುಂಬ್ತಾರಾ..? ಪಕ್ಷಕ್ಕೆ ವಂಚಿಸಿದ್ದಕ್ಕೆ ದಳಪತಿಗಳು ನಾರಾಯಣಗೌಡರಿಗೆ ಪಾಠ ಕಲಿಸ್ತಾರಾ..? ಸೋಲಿನ ಸುಳಿಯಿಂದ ಹೊರ ಬರುತ್ತಾ ಕಾಂಗ್ರೆಸ್..? ಸ್ವಾಭಿಮಾನಿ ಸುಮಲತಾ ಬೆಂಬಲ ಯಾರಿಗೆ..? ಇದೆಲ್ಲದರ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ ನೋಡಿ..

ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪಗೆ ಹುಟ್ಟೂರಿನಲ್ಲಿ ಪಕ್ಷವನ್ನ ಗೆಲ್ಲಿಸಲಾಗದ ನೋವಿದೆ.. ನಮ್ಮೂರಿನ ಮಗ ಯಡಿಯೂರಪ್ಪ ಸಿಎಂ ಆಗ್ತಾರೆ ಅಂತ ಪ್ರಚಾರ ಮಾಡಿದಾಗಲೂ ಕೆ.ಆರ್ ಪೇಟೆ ಜನ ಬಿಜೆಪಿಗೆ ಮತ ಹಾಕಿ ಗೆಲ್ಲಿಸಿಲ್ಲ.. ಆದ್ರೀಗ ಜೆಡಿಎಸ್ ನಿಂದ ಗೆಲುವು ಕಂಡಿದ್ದ ನಾರಾಯಣಗೌಡರನ್ನೇ ರಾಜೀನಾಮೆ ಕೊಡಿಸಿ ಕಮಲ ಪಕ್ಷದ ಅಭ್ಯರ್ಥಿ ಮಾಡಲಾಗಿದೆ.. ಯಡಿಯೂರಪ್ಪ ನೇತೃತ್ವದಲ್ಲಿ ಇದೇ ಕಡೆಯ ಚುನಾವಣೆ.. ಹೀಗಾಗಿ ಈ ಬಾರಿಯಾದರೂ ಕೆ.ಆರ್ ಪೇಟೆ ಜನ ತಮ್ಮೂರಿನ  ಮಗನಿಗೆ ಗೆಲುವಿನ ಉಡುಗೊರೆ ಕೊಡ್ತಾರಾ ಅನ್ನೋದು ಬಿಜೆಪಿ ನಾಯಕರ ಪ್ರಶ್ನೆ.. ಆದ್ರೆ, ನಾರಾಯಣಗೌಡರನ್ನ ಜೆಡಿಎಸ್ ಎರಡು ಬಾರಿ ಶಾಸಕನನ್ನಾಗಿ ಮಾಡಿತ್ತು.. ಆದ್ರೆ, ತಾಯಿ ಸಮನಾದ ಪಕ್ಷಕ್ಕೆ ದ್ರೋಹಮಾಡಿದ್ದಾರೆ, ಹೀಗಾಗಿ ನಾರಾಯಣಗೌಡರನ್ನ ಸೋಲಿಸಿ ಜೆಡಿಎಸ್ ಗೆಲ್ಲಿಸಬೇಕು ಅಂತ ದಳಪತಿಗಳು ಕಾರ್ಯಕರ್ತರಿಗೆ ಕರೆಕೊಟ್ಟಿದ್ದಾರೆ.. ಮತ್ತೊಂದೆಡೆ ರಾಜ್ಯದಲ್ಲಿ ಜೆಡಿಎಸ್ ಪತನವಾಗ್ತಿದೆ.. ಲೋಕಸಭಾ ಚುನಾವಣೆಯಲ್ಲಿ ಸಿಎಂ ಪುತ್ರನನ್ನೇ ಜನ ಸೋಲಿಸಿದ್ದಾರೆ.. ಕ್ಷೇತ್ರದಲ್ಲಿ ಬಿಜೆಪಿ ಠೇವಣಿ ಬರೋದು ಕಷ್ಟ ಹೀಗಾಗಿ ನಾವೇ ಗೆಲ್ತೀವಿ ಅಂತ ಕಾಂಗ್ರೆಸ್ ಕಾರ್ಯಕರ್ತರು ಖುಷಿಯಾಗಿದ್ದಾರೆ.. ಆದ್ರೆ, ಕ್ಷೇತ್ರದ ಜನ 1996ರಲ್ಲಿ ಪಕ್ಷೇತರರನ್ನೂ ಗೆಲ್ಲಿಸಿ ಇದು ಯಾವ ಪಕ್ಷದ ಭದ್ರಕೋಟೆಯಲ್ಲ ಅಂತ ಸಾಬೀತು ಮಾಡಿದ್ದಾರೆ.. 2013, 2018ರ ಚುನಾವಣೆ ಹೊರತು ಪಡಿಸಿದ್ರೆ 45 ವರ್ಷಗಳಿಂದ ಕೆ.ಆರ್ ಪೇಟೆಯಲ್ಲಿ ಒಂದು ಬಾರಿ ಗೆದ್ದವರು ಮತ್ತೊಂದು ಬಾರಿ ಸತತವಾಗಿ ಗೆಲುವು ಸಾಧಿಸಿಲ್ಲ.. ಹೀಗಾಗಿ ಕ್ಷೇತ್ರದ ಇತಿಹಾಸ ಮರುಕಳುಹಿಸಿದ್ದೇ ಆದಲ್ಲಿ ಕಾಂಗ್ರೆಸ್ ಅಥವಾ ಬಿಜೆಪಿ ಗೆಲ್ಲಬಹುದು.. ಆದ್ರೆ, ನಾರಾಯಣಗೌಡ ಬಿಟ್ರೆ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲುತ್ತೆ ಅಂತ ಹೇಳಲು ಬೇರೆಯಾವ ಕಾರಣಗಳು ಸಿಗ್ತಿಲ್ಲ.. ಮತ್ತೊಂದೆಡೆ ಬಿಜೆಪಿ, ಕಾಂಗ್ರೆಸ್ ಮತಗಳನ್ನೇ ಪಡೆದು ಸ್ವಾಭಿಮಾನದ ಹೆಸರಿನಲ್ಲಿ ಮಂಡ್ಯ ಸಂಸದೆಯಾಗಿರುವ ಸುಮಲತಾ ಬೆಂಬಲ ಯಾರಿಗೆ ಕೊಡ್ತಾರೆ ಅನ್ನೋದರ ಮೇಲೂ ಫಲಿತಾಂಶ ನಿರ್ಧಾರವಾಗಲಿದೆ..

ಜೆಡಿಎಸ್ ಪಕ್ಷದ ಬಲಾಬಲ..!

ಕೆ.ಆರ್ ಪೇಟೆ ಕ್ಷೇತ್ರ ಮಂಡ್ಯದ ಇತರೆ ಕ್ಷೇತ್ರಗಳಂತೆ ದೇವೇಗೌಡರ ಜೆಡಿಎಸ್ ಭದ್ರಕೋಟೆ ಏನಲ್ಲ.. 1994ರಲ್ಲಿ ಅವಿಭಜಿತ ಜನತಾದಳದಿಂದ ಕೇಷ್ಣ ಗೆಲುವು ಸಾಧಿಸಿದ್ರು. ನಂತರ 1999ರಲ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಕೆ.ಬಿ ಚಂದ್ರಶೇಖರ್ ಗೆಲುವು ಸಾಧಿಸಿದ್ರು.. 2004ರಲ್ಲಿ ಮಾಜಿ ಸ್ಪೀಕರ್ ಕೃಷ್ಣ ಜೆಡಿಎಸ್ ಸಿಂಬಲ್ ನಲ್ಲಿ ಮೊದಲ ಗೆಲುವು ಸಾಧಿಸಿದ್ರು.. ನಂತರ 2009ರಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿತು. ಮತ್ತೆ 2014ರಲ್ಲಿ ಕೃಷ್ಣರಿಗೆ ಟಿಕೆಟ್ ಕೊಡದ ದೇವೇಗೌಡರು ಹೋಟೆಲ್ ಉದ್ಯಮಿ ನಾರಾಯಣಗೌಡರಿಗೆ ಮಣೆ ಹಾಕಿತು.. 2014ರಲ್ಲಿ ಮೊದಲ ಬಾರಿ ಗೆಲುವು ಸಾಧಿಸಿದ ನಾರಾಯಣಗೌಡ 2018ರ ವೇಳೆಗೆ ಟಿಕೆಟ್ ಸಿಗದ ಸನ್ನಿವೇಶ ನಿರ್ಮಾಣ ಮಾಡಿಕೊಂಡಿದ್ರು.. ಜೆಡಿಎಸ್ ಜಿಲ್ಲಾ ಪಂಚಾಯ್ತಿ ಸದಸ್ಯ ದೇವರಾಜು ಎಂಬುವವರಿಗೆ ಬಿ ಫಾರಂ ಕೊಡಲಾಗಿತ್ತು.. ಗೌಡರ ಮನೆಯವರನ್ನ ಕಾಡಿಬೇಡಿ ಸಿ ಫಾರಂ ತಂದ ನಾರಾಯಣಗೌಡ 2018ರ ಚುನಾವಣೆಯಲ್ಲಿ ಎರಡನೇ ಬಾರಿ ಗೆಲುವು ಸಾಧಿಸಿದ್ರು.. ಇದೀಗ ಜೆಡಿಎಸ್ ನಿಂದ 2018ರಲ್ಲಿ ಬಿ ಫಾರಂ ಪಡೆದು ನಂತರ ಕಣದಿಂದ ಹಿಂದೆ ಸರಿದಿದ್ದ ಜಿಲ್ಲಾ ಪಂಚಾಯ್ತಿ ಸದಸ್ಯ ದೇವರಾಜು ಜೆಡಿಎಸ್ ಅಭ್ಯರ್ಥಿಯಾಗಿದ್ದಾರೆ.. ದೇವರಾಜು ಪಕ್ಷದ ನಿಷ್ಠಾವಂತ ಕಾರ್ಯಕರ್ತ. ಕ್ಷೇತ್ರದಲ್ಲಿ ಒಳ್ಳೆಯ ಹೆಸರಿದೆ, ಆದ್ರೆ, ಕಾಂಗ್ರೆಸ್, ಬಿಜೆಪಿ ಅಭ್ಯರ್ಥಿಗೆ ಹೋಲಿಸಿದ್ರೆ ಹಣಬಲದಲ್ಲಿ ತುಂಬಾ ವೀಕ್.. ಕುಮಾರಸ್ವಾಮಿ, ದೇವೇಗೌಡರು ಮನಸ್ಸು ಮಾಡಿ ದೇವರಾಜುಗೆ ಹಣದ ಸಹಾಯ ಮಾಡಿದ್ರೆ ಕೆ.ಆರ್ ಪೇಟೆಯಲ್ಲಿ ಜೆಡಿಎಸ್ ಗೆಲ್ಲಬಹುದು.. ಆದ್ರೆ, ದಳಪತಿಗಳು ತಮ್ಮ ಮನೆಯಿಂದ ಹಣ ಹಾಕಿ ಅಭ್ಯರ್ಥಿ ಗೆಲ್ಲಿಸುತ್ತಾರೆ ಅನ್ನೋದನ್ನ ನಂಬೋದು ಸ್ವಲ್ಪ ಕಷ್ಟ..

ಕಾಂಗ್ರೆಸ್ ಅಭ್ಯರ್ಥಿ ಬಲಾಬಲ

ಕೆ.ಆರ್ ಪೇಟೆಯಲ್ಲಿ ಮತದಾರರ ರೋಟೆಷನ್ ಪದ್ಧತಿಯಂತೆ 2018ರ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಬೇಕಿತ್ತು.. ಯಾಕಂದ್ರೆ ಈ ಕ್ಷೇತ್ರದಲ್ಲಿ ಒಂದು ಬಾರಿ ಗೆದ್ದವರು ಮತ್ತೊಂದು ಬಾರಿ ಸತತವಾಗಿ ಗೆಲ್ಲೋದಿಲ್ಲ..  ಆದ್ರೆ, ನಾರಾಯಣಗೌಡ ಹಣ ಬಲ, ಹಾಗೂ ಸಿದ್ದರಾಮಯ್ಯ ಒಕ್ಕಲಿಗ ವಿರೋಧಿ ಎಂಬ ಬಿರುಗಾಳಿ  ಕೆ.ಬಿ ಚಂದ್ರಶೇಖರ್ ಸೋಲಿಗೆ ಕಾರಣವಾಗಿತ್ತು.. ಆದ್ರೆ, ಕಾಂಗ್ರೆಸ್ ಅಭ್ಯರ್ಥಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಪರವಾಗಿ ಓಡಾಡಿ ಕ್ಷೇತ್ರದಲ್ಲಿ ಲೀಡ್ ಕೊಡಿಸಿದ್ದಾರೆ.. ಹೀಗಾಗಿ ಕುಮಾರಸ್ವಾಮಿ ಪುತ್ರ ನಿಖಿಲ್ ನನ್ನೇ ಕ್ಷೇತ್ರದ ಜನ ತಿರಸ್ಕರಿಸಿದ್ದಾರೆ.. ಹೀಗಾಗಿ ಈ ಬಾರಿ ನಾನು ಗೆಲ್ತೇನೆ ಅಂತ ಕಾನ್ಫಿಡೆನ್ಸ್ ನಲ್ಲಿ ಇದ್ದಾರೆ.. ಜಿಲ್ಲೆಯ ಇತರೆ ಜೆಡಿಎಸ್ ನಾಯಕರು ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ಬೆಂಬಲಿಸದೆ ಜೆಡಿಎಸ್ ಅಭ್ಯರ್ಥಿ ದೇವರಾಜು ಪರವಾಗಿ ಪ್ರಮಾಣಿಕವಾಗಿ ಮತ ಕೇಳಿದ್ರೆ ದಳಪತಿಗಳ ಮತಗಳು ವಿಭಜನೆಯಾಗಿ ಕಾಂಗ್ರೆಸ್ ಅಭ್ಯರ್ಥಿ ಸುಲಭವಾಗಿ ಗೆಲುವು ಸಾಧಿಸಬಹುದು..

ಕೆ.ಆರ್ ಪೇಟೆಯಲ್ಲಿ ಕಮಲ ಅರಳುತ್ತಾ..?

ಮರುಭೂಮಿಯಲ್ಲಿ ಭತ್ತ ಬೆಳಿಬಹುದು, ಆದ್ರೆ ಮಂಡ್ಯದಲ್ಲಿ ಮಾತ್ರ ಬಿಜೆಪಿಯಿಂದ ಶಾಸಕರನ್ನ ಗೆಲ್ಲಿಸೋದು ಕಷ್ಟ..  ಈ ರೀತಿಯಾದ ಸನ್ನಿವೇಶ ಮಂಡ್ಯದಲ್ಲಿ ಬಿಜೆಪಿ ಪಕ್ಷಕ್ಕಿದೆ.. ಇಂಥಹ ಸಂದರ್ಭದಲ್ಲಿ ನಾರಾಯಣಗೌಡ ಕೆ.ಆರ್ ಪೇಟೆಯಲ್ಲಿ ನಿಂತು ಅಭಿವೃದ್ಧಿಗಾಗಿ ಬಿಜೆಪಿ ಬೆಂಬಲಿಸಿ ಅಂತ ಮಾತನಾಡ್ತಿದ್ಧಾರೆ.. ಕೆ.ಆರ್ ಪೇಟೆ ಕ್ಷೇತ್ರದಲ್ಲಿ ಕಳೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪಡೆದ ಮತ 10 ಸಾವಿರ.. 2008ರಲ್ಲಿ 27 ಸಾವಿರ ಮತಗಳನ್ನ ಬಿಜೆಪಿ ಅಭ್ಯರ್ಥಿ ಪಡೆದದ್ದೇ ಇದುವರೆಗೂ ಕ್ಷೇತ್ರದಲ್ಲಿ ಕಮಲ ಪಕ್ಷಕ್ಕೆ ಸಿಕ್ಕ ಅತಿಹೆಚ್ಚು ಮತವಾಗಿದೆ.. ಹಾಗಂತ ಈ ಬಾರಿಯೂ ಬಿಜೆಪಿ 27 ಸಾವಿರಕ್ಕಿಂತ ಕಡಿಮೆ ಪಡೆಯುತ್ತೆ ಅಂತ ಹೇಳಲು ಸಾಧ್ಯವಿಲ್ಲ.. ಯಾಕಂದ್ರೆ, ನಾರಾಯಣಗೌಡ ಕ್ಷೇತ್ರದಲ್ಲಿ ತಕ್ಕಮಟ್ಟಿಗೆ ವಯಕ್ತಿಕ ವರ್ಚಸ್ಸನ್ನು ಉಳಿಸಿಕೊಂಡಿದ್ದಾರೆ.. ಈ ಬಾರಿ ಬಿಜೆಪಿ ಹಾಗೂ ನಾರಾಯಣಗೌಡರ ವಯಕ್ತಿಕ ಮತಗಳು ಸೇರಿ 40 ಸಾವಿರದ ವರೆಗೆ ಮತ ಬಿಜೆಪಿ ಬೀಳಬಹುದು.. ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಅಭ್ಯರ್ಥಿಗಿಂತ ಹೆಚ್ಚು ಹಣ ಖರ್ಚು ಮಾಡ್ತಿದ್ದಾರೆ.. ಜೊತೆಗೆ ಪ್ರತೀ ಬೂತ್ ನಲ್ಲೂ ಮತಹಾಕಿಸಲು ಕಾರ್ಯಕರ್ತರು ಇದ್ದಾರೆ.. ಜೊತೆಗೆ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿರುವುದು, ನಾರಾಯಣಗೌಡ ಗೆದ್ದರೆ ಕ್ಷೇತ್ರಕ್ಕೆ ಲಾಭವಾಗುತ್ತೆ ಅಂತ ಜನ ಮನಸ್ಸು ಮಾಡಿದ್ರೆ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕೆ.ಆರ್ ಪೇಟೆ ಮೂಲಕ ಮಂಡ್ಯದಲ್ಲಿ ಕಮಲ ಅರಳುವ ಸಾಧ್ಯತೆ ಇದೆ.. ಆದ್ರೆ, ಕುಮಾರಸ್ವಾಮಿ, ದೇವೇಗೌಡರು ಒಂದು ವೇಳೆ ನಾರಾಯಣಗೌಡ ಗೆಲ್ಲುವ ಸಾಧ್ಯತೆ ಕಂಡು ಬಂದ್ರೆ ಕಾಂಗ್ರೆಸ್ ಅಭ್ಯರ್ಥಿಗೆ ಜೆಡಿಎಸ್ ಮತಗಳನ್ನ ಹಾಕಿಸಿದ್ರು ಆಶ್ಚರ್ಯ ಪಡಬೇಕಿಲ್ಲ.. ಯಾಕಂದ್ರೆ, ಚುನಾವಣಾ ಕಣದಲ್ಲಿ ನಾನು ಗೆಲ್ಲದಿದ್ದರೂ ನನ್ನ ಶತ್ರು ಗೆಲ್ಲಬಾರದು ಅನ್ನುವ ಸಿದ್ಧಾಂತ ಕೆಲಸ ಮಾಡುತ್ತೆ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಷಯವೇನಲ್ಲ..

ಯಸ್ ವೀಕ್ಷಕರೇ ನಿಮ್ಮ ಪ್ರಕಾರ ಕೆ.ಆರ್ ಪೆಟೆಯಲ್ಲಿ ಗೆಲ್ಲೋದು ಯಾರು..? ಬಿಜೆಪಿಯ ನಾರಾಯಣಗೌಡರಾ..? ಜೆಡಿಎಸ್ ನ ದೇವರಾಜುನಾ..? ಕಾಂಗ್ರೆಸ್ ನ ಕೆ.ಬಿ ಚಂದ್ರಶೇಖರ್..? ನಿಮ್ಮಅಭಿಪ್ರಾಯ ಕಾಮೆಂಟ್ ಮಾಡಿ…

- Advertisement -

Latest Posts

Don't Miss