political news:
ಬಳ್ಳಾರಿಯ ಗಣಿ ದಣಿ ಮಾಜಿ ಸಚಿವ ಹಾಗೂ ಕರ್ನಾಟಕದಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕ ಗಾಲಿ ಜನಾರ್ಧನ ರೆಡ್ಡಿಯವರು ಇಂದು ಬೆಂಗಳೂರಿನಲ್ಲಿ ತಮ್ಮ ಪಕ್ಷದ ಚಿಹ್ನೆಯನ್ನು ಮತ್ತು ಪ್ರಣಾಳಿಕೆಯನ್ನು ಇಂದು ಬೆಂಗಳೂರಿನಲ್ಲಿ ಬಿಡುಗಡೆ ಮಾಡಿದರು.
ತಮ್ಮ ಪಕ್ಷದ ಚಿಹ್ನೆಯಾದ ಪುಟ್ಬಾಲ್ ಅನ್ನು ಬಿಡುಗಡೆ ಮಾಡಿದ ಬಳಿಕ ಮಾತನಾಡಿದ ಅವರು ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ನನ್ನ ಪಕ್ಷದ ಉದ್ದೇಶಗಳನ್ನು ಬಿಡುಗಡೆ ಮಾಡೋಣ ಮಾಡಬೇಕೆಂದಿದ್ದೆ. ಆದರೆ ಈಗ ನಮ್ಮ ಪಕ್ಷಕ್ಕೆ ಉತ್ತಮ ಬೆಂಬಲ ಸಿಕ್ಕಿದೆ ಈಗಾಗಲೆ ನಮ್ಮ ಪಕ್ಷದ ಅಭ್ಯರ್ಥಿಗಳನ್ನು 12 ವಿವಿಧ ಕ್ಷೇತ್ರಗಳಲ್ಲಿ ಸ್ಪರ್ದೆ ಮಾಡಲು ಅವಕಾಶ ನೀಡಿದ್ದೇನೆ. ಇದು ಕೇವಲ90 ದಿನದಲ್ಲಿ ಆಗಿದೆ ಇನ್ನು ಕೆಲವೇ ವಾರಗಳಲ್ಲಿ 19 ಅಭ್ಯರ್ಥಿಗಳನ್ನು ನಿಲ್ಲಿಸುತಿದ್ದೇನೆ.
ಇನ್ನೂ 20 ಕ್ಷೇತ್ರಗಳಲ್ಲಿ ಅಭ್ಯರ್ಥಿ ಹಾಕಿಲಿದ್ದೇವೆ. 51 ಕ್ಷೇತ್ರಗಳಲ್ಲಿ ಪಕ್ಷದ ಕಾರ್ಯಾಚರಣೆ ನಡೆಯುತ್ತಿದೆ. 30 ಕ್ಷೇತ್ರ ಗೆಲ್ಲುವ ವಿಶ್ವಾಸ ಇದೆ. ಗ್ರಾಮಗಳಲ್ಲಿ ಸಮಸ್ಯೆ ಕಣ್ಣಾರೆ ಕಂಡಿರುವವನು ನಾನು. ನಮ್ಮ ಭಾಗದ ಪ್ರತಿ ಜಿಲ್ಲೆಯಲ್ಲಿ ನಾನು ಓಡಾಡಿದ್ದೇನೆ. ಹದಿನೈದು ವರ್ಷಗಳ ಹಿಂದೆ ನಾನು ಆ ಭಾಗದಲ್ಲಿ ಓಡಾಡಿದ್ದೇನೆ. ಇತ್ತೀಚೆಗೆ ಈ ಭಾಗಗಳಲ್ಲಿ ಅಭಿವೃದ್ಧಿ ಆಗಿಲ್ಲ ಎಂದರು.
ಇಂದು ತಮ್ಮ ಪಕ್ಷದ ಪ್ರಣಾಳಿಕೆ ಬಿಡಿಗಡೆ ಮಾಡಿದ ಜನಾರ್ಧನರೆಡ್ಡಿಯವರು ತಮ್ಮ ಭರವಸೆಗಳನ್ನು ಜನರ ಮುಂದಿಟ್ಟಿದ್ದಾರೆ.
-
- ಪ್ರತಿ ಮನೆಗೆ 250 ಯೂನಿಟ್ ಉಚಿತ ವಿದ್ಯುತ್
- ಎಸ್‌ಟಿ, ಎಸ್‌ಸಿ ಉಚಿತ ನಿವೇಶನ
- ರೈತರಿಗೆ ಬಡ್ಡಿ ರಹಿತ ಸಾಲ
- ಹೆಣ್ಣು ಮಕ್ಕಳ ಹೆಸರಿನಲ್ಲಿ ಮನೆ ಇಲ್ಲದೆ ಇರುವವರಿಗೆ 2 ಬಿಹೆಚ್‌ಕೆ ಮನೆ
- ಎಲ್ಲಾ ಕ್ಷೇತ್ರದಲ್ಲಿ ಮಹಿಳೆಯರಿಗೆ ಸಮಾನ ವೇತನ
- ವಿದ್ಯಾರ್ಥಿಗಳಿಗೆ ಉಚಿತ ಬಸ್ ಪ್ರಯಾಣ ಸೌಲಭ್ಯ
- ಮಹಿಳೆಯರ ಭದ್ರತೆಗಾಗಿ ಹೊಸ ಮಹಿಳೆಯರ ತಂಡ ಸ್ಥಾಪನೆ
- ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ 1,000 ರೂಪಾಯಿ ವೇತನ ಹೆಚ್ಚಳ
- ಆರ್ಥಿಕ ದೌರ್ಬಲ್ಯ ಮಕ್ಕಳಿಗೆ ಉಚಿತ ಶಿಕ್ಷಣ ಇತ್ಯಾದಿಗಳಾಗಿವೆ.
- 5 ಎಕರೆಗಿಂತ ಕಡಿಮೆ ಜಮೀನು ಹೊಂದಿರುವ ರೈತರಿಗೆ ಬಂಡವಾಳದ 15 ಸಾವಿರ ರೂಪಾಯಿ ನೆರವು