Political News: KRS ಪಕ್ಷ 200 ಕೋಟಿ ಲಂಚ ಉಳಿಸಿದೆ : Ravi Krishna Reddy Exclusive Podcast

Political News: ಈ ಮುನ್ನ ಆಮ್ ಆದ್ಮಿ ಪಕ್ಷದಲ್ಲಿ ಇದ್ದ ರವಿಕೃಷ್ಣ ರೆಡ್ಡಿಯವರು ಸಂದರ್ಶನದಲ್ಲಿ ಮಾತನಾಡಿದ್ದು, ತಮ್ಮ ನೂತನ ಪಕ್ಷ ಕೆಆರ್ಎಸ್ ಬಗ್ಗೆ ಮಾತನಾಡಿದ್ದಾರೆ.

ಕೆಆರ್‌ಎಸ್ ಪಕ್ಷ ಲಂಚಬಾಕರನ್ನು ಹಿಡಿದು ಬುದ್ಧಿ ಕಲಿಸುವ ಪಕ್ಷವಾಗಿದ್ದು, ಈ ಪಕ್ಷದ ಪ್‌ರಸಿದ್ಧಿ ಅದೆಷ್ಟರ ಮಟ್ಟಿಗಿದೆ ಅಂದ್ರೆ, ಯಾರಾದ್ರೂ ಲಂಚ ಪಡೀತಾರೆ ಅಂದ್ರೆ, ಕೆಆರ್‌ಎಸ್ ಪಕ್ಷದವ್ರಿಗೆ ಹೇಳ್ಬೇಕಾ ಅಂತಾ ಕೇಳಿದ್ರೆ, ಬೇಡಾ ಸರ್ ಅಂತಾ ಫ್ರೀಯಾಗಿ ಕೆಲಸ ಮಾಡಿ ಕ`ಡುವಷ್ಟು ಈ ಪಕ್ಷದ ಹವಾ ಇದೆ.

ಈ ಬಗ್ಗೆ ಸಂತಸ ವ್ಯಕ್ತಪಡಿಸಿರುವ ರವಿಕೃಷ್ಣಾ ರೆಡ್ಡಿಯವರು, ನನ್ನ ಪರಿಚಯಸ್ಥರೇ ನನಗೆ ಹೇಳಿದ್ರು, ಆನೇಕಲ್ ತಾಲೂಕಿನಲ್ಲಿ ಭೂಮಿಗೆ ಬಂಗಾರದ ಬೆಲೆ ಸಿಕ್ಕಿದೆ. ಅಲ್ಲಿ ಭೂಮಿ ಕೆಲಸ ಮಾಡಿಸಬೇಕು ಅಂದ್ರೆ, ಸಾವಿರ ಸಾವಿರ ಲಂಚ ಪಡೆಯುತ್ತಾರೆ. ಆದರೆ ಅಲ್ಲಿನ ಜನ 200 ಕೋಟಿ ರೂಪಾಯಿ ಲಂಚ ನೀಡೋದನ್ನ ಉಳಿಸಿಕ“ಂಡಿದ್ದಾರಂತೆ. ಆ ರೇಂಜಿಗಿದೆ ಕೆಆರ್‌ಎಸ್ ಪಕ್ಷದ ಪ್ರಸಿದ್ಧಿ.

ಇನ್ನು ರವಿಕೃಷ್ಣ ರೆಡ್ಡಿಯವರು ನೇಸರ್ಗಿ ಎಂಬ ಹಳ್ಳಿಗೆ ಹೋದಾಗ ಅಲ್ಲಿ ಓರ್ವ ವ್ಯಕ್ತಿಗೆ ನೀನು ನನ್ನ ಪಕ್ಷದ ಮೆಂಬರ್ ಆಗ್ತೀಯಾ ಅಂತಾ ಕೇಳಿದ್ದಕ್ಕೆ, ಖಂಡಿತ ಆಗ್ತೀನಿ ಸರ್. ನಾನು ಕೆಲ ದಿನಗಳ ಹಿಂದೆ ಸರ್ಕಾರಿ ಕಚೇರಿಗೆ ಹೋಗಿದ್ದೆ, ಅಲ್ಲಿ ಕೆಲಸ ಮಾಡಲು ಲಂಚ ಕೇಳಿದ್ರು, ನಾನು ನಿಮ್ಮ ಪಕ್ಷದ ಮೆಂಬರ್ ಎಂದಿದ್ದಕ್ಕೆ, ಫ್ರೀಯಾಗಿ ಕೆಲಸ ಮಾಡಿಕ“ಟ್ರು ಎಂದನಂತೆ. ಬಳಿಕ ಆತನೂ ಕೆಆರ್‌ಎಸ್ ಪಕ್ಷದ ಮೆಂಬರ್ ಆದ ಎಂದು ಹೇಳ್ತಾರೆ ರವಿಕೃಷ್ಣ ರೆಡ್ಡಿ.

About The Author