- Advertisement -
www.karnatakatv.net : ರಾಜ್ಯ: ರಾಜ್ಯದ ಪ್ರತಿಷ್ಟಿತ ಅಣೆಕಟ್ಟು ಕೆಆರ್ ಎಸ್ ಗೆ 90 ವರ್ಷ ವಯಸ್ಸಾಗಿದ್ದರೂ ಎಂದೂ ಸಮಸ್ಯೆ ಆಗಿಲ್ಲ. ಇದನ್ನು ದೊಡ್ಡ ಸೈಜ್ ಗಲ್, ಸುಣ್ಣ, ಕೆಂಪು ಮಣ್ಣು ಮಿಶ್ರಣ ಮಾಡಿ ನಿರ್ಮಿಸಲಾಗಿದೆ. ಅಂದಿನ ಮಹಾರಾಜರ ಹಾಗೂ ವಿಶ್ವೇಶ್ವರಯ್ಯ ಅವರ ದೂರದೃಷ್ಟಿ ಇದು. ಆಗಾಗ ಕೊಂಚ ಸಮಸ್ಯೆಗಳಾಗಿರಬಹುದು ಆದರೆ ಬಿರುಕು ಬಿಡುವ ಸಮಯ ಬಂದಿಲ್ಲ ಎಂದು ಕಾವೇರಿ ನಿರ್ವಹಣಾ ಸಲಹಾ ಸಮಿತಿ ಸಂಚಾಲಕ ತಜ್ಞ ಇಂಜಿನಿಯರ್ ಎಂ.ಲಕ್ಷ್ಮಣ್ ತಿಳಿಸಿದರು. ಇದೇ ವೇಳೆ ಡ್ಯಾಂ ಆಸುಪಾಸಿನಲ್ಲಿ ಗಣಿಗಾರಿಕೆ ನಡೆಯುತ್ತಿದ್ದು ಅದರ ಪರಿಣಾಮ ಆಗಿರುವುದು ನಿಜ ಆದರೆ ಬಿರುಕು ಬಿಟ್ಟಿಲ್ಲ, ಈ ಬಗ್ಗೆ ರಾಜಕೀಯ ಬೇಡ ಎಂದರು.
- Advertisement -