Film News:
ನಟ ಶಿವರಾಜ್ ಕುಮಾರ್ ಮತ್ತು ಯೋಗರಾಜ್ ಭಟ್ ಕಾಂಬಿನೇಷನ್‌ನಲ್ಲಿ ಸಿನಿಮಾ ಬರುತ್ತೆ ಎನ್ನುವ ಸುದ್ದಿ ಬಂದಾಗಲೇ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕಿದೆ. ಸಿನಿಮಾ ಕಥೆ ಹಳೆ ಕಾಲದ ಅಂಶಗಳನ್ನು ಹೊಂದಿದೆ ಎನ್ನುವುದು ಕೂಡ ಹೆಚ್ಚಿನ ಕುತೂಹಲಕ್ಕೆ ಕಾರಣವಾಗಿದೆ.
‘ಕುಲದಲ್ಲಿ ಕೀಳ್ಯಾವುದೋ’ ಎಂದು ತಾತ್ಕಾಲಿಕವಾಗಿ ಈ ಚಿತ್ರಕ್ಕೆ ಹೆಸರಿಡಲಾಗಿದೆ. ಸರಳ ಮುಹೂರ್ತದೊಂದಿಗೆ ಈ ಚಿತ್ರದ ಕೆಲಸಗಳನ್ನು ಹಲವು ದಿನಗಳ ಹಿಂದೆಯೇ ಪ್ರಾರಂಭಿಸಲಾಯಿತು. ಆಗಸ್ಟ್ 20ರಿಂದ ಈ ಚಿತ್ರದ ಶೂಟಿಂಗ್ ಶುರುವಾಗಲಿದೆ ಎನ್ನಲಗಿತ್ತು. ಆದರೆ ಕೊಂಚ ತಡವಾಗಿ ಇಂದಿನಿಂದ (ಆಗಸ್ಟ್ 27) ಚಿತ್ರ ಅಧಿಕೃತವಾಗಿ ಚಿತ್ರೀಕರಣ ಆರಂಭಿಸಿದೆ. ಮೊದಲ ದಿನದ ಶೂಟಿಂಗ್‌ನಲ್ಲಿ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಕೂಡ ಖಾಕಿ ತೊಟ್ಟು ಕಾಣಿಸಿಕೊಂಡಿದ್ದಾರೆ.
ಸುಮಲತಾ ಅಂಬರೀಷ್ ಹುಟ್ಟುಹಬ್ಬದಂದೇ ಅಭಿಷೇಕ್ ಹೊಸ ಮೂವಿ ಪೋಸ್ಟರ್ ರಿಲೀಸ್
ಮೇಘನಾ ರಾಜ್ ಕೈಯಲ್ಲಿ ಆ ಹೆಸರು…? ಎರಡನೇ ಮದುವೆ ವಿಚಾರಕ್ಕೆ ಉತ್ತರ ಇದೇನಾ..?!