ಶಾಲೆ ಶುರುವಾಗುವ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದೇನು..?

ರಾಜ್ಯ ಸರ್ಕಾರ ಶಾಲೆಗಳ ಪುನರಾರಂಭ ಮಾಡೋ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ಮಾತನಾಡಿದ್ದು, ಶಾಲೆ ಆರಂಭಿಸಬೇಡಿ ಎಂದು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಹೆಚ್ಡಿಕೆ, ರಾಜ್ಯ ಸರ್ಕಾರ ಶಾಲೆಗಳ ಪುನರಾರಂಭಕ್ಕೆ ಮುಂದಾಗಿದೆ. ಇದೇ ಸಂದರ್ಭದಲ್ಲಿ ವಠಾರ ಶಾಲೆಗೂ ಕೊರೋನಾ ವಕ್ಕರಿಸಿ ಆತಂಕ ಸೃಷ್ಟಿಸಿದೆ. ಎಲ್ಲ ಪೋಷಕರ ದುಗುಡ ಮತ್ತಷ್ಟು ಹೆಚ್ಚಾಗಿದೆ.

ವಠಾರ ಶಾಲೆಯಲ್ಲಿ ಅಭ್ಯಾಸ ಮಾಡುತ್ತಿದ್ದ 4 ಮಕ್ಕಳಿಗೆ ಕೊರೋನಾ ಪಾಸಿಟಿವ್ ಬಂದಿರುವ ಘಟನೆ ಕಲಬುರ್ಗಿ ಜಿಲ್ಲೆ ಅಫಜಲಪುರ ತಾಲೂಕಿನ ಮಾಶಾಳ ಗ್ರಾಮದಲ್ಲಿ ನಡೆದಿದೆ. ಮುಖ್ಯಮಂತ್ರಿಗಳೇ ಜೀವ ಮುಖ್ಯ ಅನ್ನೋ ಮಾತು ನಿಜವಾಗಿಸಬೇಕಾದರೆ ಈ ವರ್ಷ ಯಾವುದೇ ಕಾರಣಕ್ಕೂ ಶಾಲೆ ಆರಂಭಿಸಬೇಡಿ ಎಂದು ಮನವಿ ಮಾಡಿದ್ದಾರೆ.

ಕೇಂದ್ರ ಹಾಗೂ ರಾಜ್ಯ ಪಠ್ಯಕ್ರಮದ ಹನ್ನೆರಡನೆಯ ತರಗತಿವರಗೆ ಎಲ್ಲ ಮಕ್ಕಳಿಗೂ ಮುಂದಿನ‌ ತರಗತಿಗೆ ಅವರ ಹಿಂದಿನ ಫಲಿತಾಂಶ ಹಾಗೂ ಪರ್ಫಾರ್ಮೆನ್ಸ್ ಪರಿಗಣಿಸಿ ಬಡ್ತಿ ನೀಡಿ.

ಮಕ್ಕಳ ಓದುವಿಕೆ ಆಧಾರದಲ್ಲಿ ಎಲ್ಲ ಮಕ್ಕಳಿಗೂ A,B,C,D, ಎಂಬ ದರ್ಜೆಯನ್ನು ಸಂಬಂಧಿಸಿದ ಶಾಲೆಗಳೆ ನಿರ್ಧರಿಸಿ ನೀಡಲಿ. 10 ಮತ್ತು 12ನೇ ತರಗತಿಗೆ ಇದು ಸಂಪೂರ್ಣವಾಗಿ ಅನ್ವಯವಾಗಲಿ. 1 ರಿಂದ 9ನೇ ತರಗತಿಯವರಿಗೆ ಸಮಾನ ದರ್ಜೆ ನೀಡಿ ಬಡ್ತಿ ನೀಡಲಿ. 2021ರ ಶೈಕ್ಷಣಿಕ ವರ್ಷದಿಂದ ಹೊಸದಾಗಿ ಶಾಲಾ ಕಾಲೇಜುಗಳಲ್ಲಿ ಪ್ರವೇಶ ಕಲ್ಪಿಸಿ.

ಕೊರೋನಾ ನಿಯಂತ್ರಣಕ್ಕೆ ಬಾರದೆ ಸೋಂಕು ವಿಪರೀತ ವಾಗುತ್ತಿರುವ ಈ ಸಂದರ್ಭದಲ್ಲಿ ಶಾಲೆಗಳ ಆರಂಭ ದೊಡ್ಡ ಅನಾಹುತಕ್ಕೆ ದಾರಿಯಾಗಲಿದೆ ಎಂಬುದನ್ನು ಸರಕಾರ ಮನಗಾಣಬೇಕು ಎಂದು ಎಚ್ಚರಿಸುತ್ತೇನೆ ಎಂದು ಹೆಚ್ಡಿಕೆ ಟ್ವೀಟ್ ಮಾಡಿದ್ದಾರೆ.

About The Author