Kundagola News: ಕುಂದಗೋಳ: ಕುಂದಗೋಳ ತಾಲೂಕು ಆಸ್ಪತ್ರೆಯಲ್ಲಿ ಸೇವೆ ಸಲ್ಲಿಬೇಕಿದ್ದ ಸ್ತ್ರೀರೋಗ ತಜ್ಞರ ಅನಧಿಕೃತ ಗೈರು ಹಾಜರಿ ಪರಿಣಾಮ ಬಡ ಮಧ್ಯಮ ವರ್ಗದ ಗರ್ಭಿಣಿ, ಬಾಣಂತಿಯರಿಗೆ ಸೂಕ್ತ ತಪಾಸಣೆ ಚಿಕಿತ್ಸೆ ದೂರವಾಗಿದೆ.
ಹೌದು ! ಬಡ, ಮಧ್ಯಮ ವರ್ಗದ ಗರ್ಭಿಣಿ, ಬಾಣಂತಿಯರ ಪಾಲಿಗೆ ಸಂಜೀವಿನಿ ಆಗಬೇಕಿದ್ದ ಕುಂದಗೋಳ ತಾಲೂಕು ಆಸ್ಪತ್ರೆ. ಇದೀಗ ಸ್ತ್ರೀರೋಗ ತಜ್ಞರ ಗೈರು ಹಾಜರಿ ಪರಿಣಾಮ ಗರ್ಭಿಣಿ, ಬಾಣಂತಿಯರು ಖಾಸಗಿ ಆಸ್ಪತ್ರೆ ಇಲ್ಲವೇ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಓಡಾಡುವ ದುಸ್ಥಿತಿ ಏರ್ಪಟ್ಟಿದೆ.
ಕುಂದಗೋಳ ತಾಲೂಕು ಆಸ್ಪತ್ರೆಯಲ್ಲಿ ಒಂದೇ ಸ್ತ್ರೀ ರೋಗ ತಜ್ಞರ ಹುದ್ದೆ ಇದ್ದು, ಆ ಹುದ್ದೆ ನಿಭಾಯಿಸಬೇಕಿದ್ದ ಡಾ.ಶಾರಾದ ಕಮತದ ನವೆಂಬರ್ 6,2024 ರಿಂದ ಪ್ರಸ್ತುತ ಇಲ್ಲಿಯವರೆಗೆ 11 ತಿಂಗಳು ಅನಧಿಕೃತ ಗೈರು ಹಾಜರಿ ಇದ್ದಾರೆ ಎನ್ನುತ್ತಾರೆ ಆಸ್ಪತ್ರೆ ಪ್ರಭಾರಿ ವೈದ್ಯಾಧಿಕಾರಿ ಡಾ.ಗಿರೀಶ್ ಮರಡ್ಡಿ.
ಸದ್ಯ ಸ್ತ್ರೀ ರೋಗ ತಜ್ಞರ ಗೈರು ಹಾಜರಿ ಪರಿಣಾಮ ಗರ್ಭಿಣಿಯರ ಆರೋಗ್ಯ ತಪಾಸಣೆ, ಹೆರಿಗೆ, ಟೂಬೆಕ್ಟಮಿ, ಲ್ಯಾಪ್ರೋಸ್ಕಮಿ ಆಪರೇಷನ್’ಗೆ ಸಮಸ್ಯೆಯಾಗಿದೆ.
ಸ್ತ್ರೀರೋಗ ತಜ್ಞರ ಅನಧಿಕೃತ ಗೈರು ಮತ್ತೋರ್ವ ವೈದ್ಯರನ್ನು ನೇಮಿಸಲು ಅಡೆತಡೆಯಾಗಿದ್ದು, ಈ ವಿಷಯ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಜಿಲ್ಲಾ ಆರೋಗ್ಯಾಧಿಕಾರಿಗಳ ಗಮನಕ್ಕೆ ಬಂದರೂ ಪರಿಸ್ಥಿತಿ ಮಾತ್ರ ಇಂದಿಗೂ ಸುಧಾರಿಸಿಲ್ಲಾ.
ಸಂಗಮೇಶ ಸತ್ತಿಗೇರಿ ಕರ್ನಾಟಕ ಟಿವಿ ಹುಬ್ಬಳ್ಳಿ