ಕೌಸಲ್ಯ ಸುಪ್ರಜಾ ರಾಮ ಸಿನಿಮಾ ಹೇಗಿದೆ..?
Film News : ಜುಲೈ ತಿಂಗಳ ಕೊನೆಯ ವಾರದಲ್ಲಿ ಬಿಡುಗಡೆಯಾದ ಕನ್ನಡ ಚಿತ್ರಗಳ ಪೈಕಿ ಬಹು ನಿರೀಕ್ಷೆಯ ಕೌಸಲ್ಯ ಸುಪ್ರಜ ರಾಮ ಚಿತ್ರ ಕೂಡ ಒಂದು . ಸದ್ಯ ಗಲ್ಲಾಪೆಟ್ಟಿಗೆಯಲ್ಲಿ ಸಖತ್ತಾಗೇ ಸೌಂಡ್ ಮಾಡೋಕೆ ಶುರು ಮಾಡಿದೆ. ಡಾರ್ಲಿಂಗ್ ಕೃಷ್ಣ ಹಾಗೂ ಶಶಾಂಕ್ ಕಾಂಬಿನೇಶನ್‌ನ ‘ಕೌಸಲ್ಯ ಸುಪ್ರಜ ರಾಮ’ ಚಿತ್ರ ಧೂಳೆಬ್ಬಿಸುವುದು ನಿಸ್ಸಂದೇಹವೆಂದೇ ಸಿನಿಪ್ರಿಯರ ಮಾತು.
ಚಿತ್ರತಂಡದಿಂದ ಹೊರಬಂದಿದ್ದ ಟ್ರೈಲರ್ ಚಿತ್ರದ ಮೇಲೆ ನಿರೀಕ್ಷೆ ಹುಟ್ಟುವಂತೆ ಮಾಡಿತ್ತು. ಲವ್ ಸ್ಟೋರಿಗಳನ್ನು ಅಚ್ಚುಕಟ್ಟಾಗಿ ಕಟ್ಟಿಕೊಡುವ ಕಲೆ ಬಲ್ಲ ನಿರ್ದೇಶಕ ಶಶಾಂಕ್ ಈ ಸಿನಿಮಾ ದಲ್ಲೂ ಅದೇ ಚಾಪು ಮೂಡಿಸೋದ್ರರಲ್ಲಿ ಡೌಟೇ ಇಲ್ಲ ಎನ್ನುತ್ತಾರೆ ಸಿನಿರಸಿಕರು.
ಚಿಕ್ಕ ವಯಸ್ಸಿನಲ್ಲೇ ತಂದೆಯ ನೀತಿ ಪಾಠವನ್ನು ಕೇಳಿದ ಮಗ ಗಂಡು ಎಂಬ ಅಹಂ ನಿಂದ ಬದುಕುತ್ತಿರುವಾಗ ಸಂಬಂಧ ಅನ್ನೋ ಅಸಡ್ಡೆ ವೇಳೆಗೆ ಎಂಟ್ರಿಯಾಗೋ ಲವ್ ಲೈಫ್ ನಿಂದ ಹೇಗೆ ಬದಲಾಗುತ್ತಾನೆ ಅನ್ನೋದೆ ಕಥೆಯ ಅಂತರಾಳ.
ಈ ಸಂಕ್ಷಿಪ್ತ ಸ್ಟೋರಿಯಲ್ಲಿ ಹೇಳಿದಂತೆ ನಾಯಕ ರಾಮ್ ತನ್ನ ತಂದೆ ಹೇಳಿಕೊಟ್ಟಂತೆ ಗಂಡು ಎಂಬ ಅಹಂನೊಂದಿಗೆ ಕಾಲೇಜು ಜೀವನದವರೆಗೂ ಬಂದಿರುತ್ತಾನೆ. ನಂತರ ಕಾಲೇಜು ಜೀವನದ ಹಂದರ ಅಲ್ಲೇ ಶುರುವಾಗೋದು ಪ್ರೀತಿ ಪ್ರೇಮ.ಈ ಅಹಂಕಾರಕ್ಕೆ ಸೆಡ್ಡು ಹೊಡೆದು ನಿಲ್ಲೋದೆ ನಾಯಕಿ ಶಿವಾನಿ ಪಾತ್ರ. ಪ್ರೀತಿಯ ಮುಂದೆ ನಾಯಕನ ಅಹಂಕಾರ ಸೋಲದೆ ಗರ್ವ ಬೀಗಿದಾಗ ಆ ಪ್ರೀತಿ ಮುರಿದು ಬೀಳತ್ತೆ.
ನಂತರದ ಪರಿಚಯ ತಂದೆ ತಾಯಿಯ ಮೂಲಕವಾದ ಮದುವೆ. ಒಲ್ಲದ ಮನಸ್ಸಿ ನಿಂದ ಮದುಮಗನಾದ ನಾಯಕ ಮುಂದೆ ಮದುವೆ ನಂತರದ ಜೀವನದಲ್ಲಿ ಅಹಂ ಪಕ್ಕಕ್ಕಿಟ್ಟು ಜೀವನ ಜೊತೆಯಾಗಿರ್ತಾನಾ ಎಂಬುವುದು ಕಥೆಯ ಟ್ವಿಸ್ಟ್.
ಸಕಾರಾತ್ಮಕ ಅಂಶಗಳು ಅಂದರೆ ಅದು ಲವ್ ಸ್ಟೋರಿಯಲ್ಲಿ ನಿರ್ದೇಶಕರು ಕಟ್ಟಿಕೊಟ್ಟಿರೋ ಆ ನಲ್ಮೆಯ ಬಾಂಧವ್ಯ. ಇನ್ನೊಂದೆಡೆ ನಾಯಕನಾಗಿ ಡಾರ್ಲಿಂಗ್ ಕೃಷ್ಣ ಅಭಿನಯ ಅದ್ಭುತ ಮತ್ತೊಂದೆಡೆ ನಾಯಕನಿಗೆ ತಕ್ಕಂತೆ ನಟಿಸಿದ ನಾಯಕಿಯರಾದ ಬೃಂದಾ ಆಚಾರ್ ಮತ್ತು ಮಿಲನಾ ನಾಗರಾಜ್ ನಟನೆಗೆ ಸೋಲದ ಸಿನಿ ಪ್ರಿಯರಿಲ್ಲ.
ಉಳಿದಂತೆ ನಾಯಕನ ಸ್ನೇಹಿತನ ಪಾತ್ರದಲ್ಲಿ ನಟಿಸಿರುವ ನಾಗಭೂಷಣ್, ತಂದೆ – ತಾಯಿ ಪಾತ್ರದಲ್ಲಿ ನಟಿಸಿರುವ ರಂಗಾಯಣ ರಘು ಹಾಗೂ ಸುಧಾ ಬೆಳವಾಡಿ ಮತ್ತು ನಾಯಕಿಯ ತಂದೆ ಪಾತ್ರದಲ್ಲಿ ನಟಿಸಿರುವ ಅಚ್ಯುತ್ ಕುಮಾರ್ ನಟನೆಗೆ ಫುಲ್ ಮಾರ್ಕ್ಸ್ ನೀಡೋದ್ರಲ್ಲಿ ಡೌಟ್ ಇಲ್ಲ.
ಇನ್ನು ಹಾಡುಗಳಂತೂ ಅತ್ಯದ್ಭುತವಾಗಿ ಮೂಡಿ ಬಂದಿದ್ದು ಛಾಯಾಗ್ರಾಹಕನ ಕೈಚಳಕ್ಕೆ ಕಣ್ತುಂಬಿ ಕೊಳ್ಳೋ ದೃಶ್ಯ ವೈಭೋಗವಂತೂ ಸಿನಿಪ್ರಿಯರಿಗೆ ರಸದೌತಣವೇ ಸರಿ. ನಕಾರಾತ್ಮಕವಾಗಿ ಅಷ್ಟೊಂದು ಅಂಶಗಳು ಕಾಣದೇ ಇದ್ದರೂ ಹಿನ್ನಲೆ ಸಂಗೀತ ಸ್ವಲ್ಪ ಮಟ್ಟಿಗೆ ಇನ್ನೂ ಉತ್ತಮವಾಗಿರಬೇಕು ಅನ್ನೋದೆ ಸಿನಿಪ್ರಿಯರ ಅಭಿಪ್ರಾಯವಷ್ಟೇ.
ಒಟ್ಟಾರೆ ಗಂಡ ಹಾಗೂ ಹೆಂಡತಿ ನಡುವೆ ಏನೇ ಸಮಸ್ಯೆ ಬಂದರೂ ದುಡುಕಿ ನಿರ್ಧಾರಗಳನ್ನು ತೆಗೆದುಕೊಳ್ಳಬಾರದು, ಎಂಬ ಸಿನಿ ಸಂದೇಶಕ್ಕೆ, ಪ್ರಸ್ತುತ ಜಾಯಮಾನ ದ ಅವಸ್ಥೆಗೆ ಸರಿಯಾದ ಸಂದೇಶ ನೀಡಿದ್ದಾರೆ ಅನ್ನೋದೆ ಪ್ರೇಕ್ಷಕರಿಗೆ ಇಷ್ಟವಾದ ವಿಚಾರ .
ಕೌಸಲ್ಯ ಸುಪ್ರಜ ರಾಮ ಕುಟುಂಬ ಸಮೇತರಾಗಿ ಕುಳಿತು ವೀಕ್ಷಿಸಬಲ್ಲ ಚಿತ್ರವಾಗಿದ್ದು ಕೊಟ್ಟಿರೋ ದುಡ್ಡಿಗೆ ಇಟ್ಟಿರೋ ನಂಬಿಕೆಗೆ ಎಲ್ಲೂ ಮೋಸವಾಗದೆ ಕೂತ ಸೀಟು ಬಿಟ್ಟುಕೊಡದೆ ನೋಡುವಂತಹ ಸಿನಿಮಾ ಇದಾಗಿದೆ ಅನ್ನೋದಂತೂ ಸತ್ಯ.
ಈ ಕಾರಣಕ್ಕಾಗಿಯೇ ಈಗಾಗಲೇ ಇದೀಗ ಪ್ರೇಕ್ಷಕರ ಮನಗೆದ್ದು 5ರಲ್ಲಿ 4 ಸ್ಟಾರ್ ಗಳನ್ನು ಪಡೆದುಕೊಂಡಿದೆ ಕೌಸಲ್ಯ ಸುಪ್ರಜ ರಾಮ ಕುಟುಂಬ.