Wednesday, August 20, 2025

Latest Posts

ಕಾರ್ಮಿಕ ಸಚಿವರೇ ನಿಮ್ಮೂರಿನ ಆಸ್ಪತ್ರೆಯಲ್ಲೇ ನಡೆಯುತ್ತಿದೆ ಕಳ್ಳಾಟ.. Karnataka TV Exclusive

- Advertisement -

Hubli News: ಹುಬ್ಬಳ್ಳಿ: ಕಾರ್ಮಿಕ ಸಚಿವ ಸಂತೋಷ್ ಲಾಡ್‌ ಅವರು ಅವಳಿ ನಗರವಾದ ಹುಬ್ಬಳ್ಳಿ- ಧಾರವಾಡದ ಉಸ್ತುವಾರಿ ಸಚಿವರಾಗಿದ್ದಾರೆ. ಅವರಿಂದ ಆದಷ್ಟು ಅತ್ಯುತ್ತಮ ಕೆಲಸವನ್ನು ಲಾಡ್ ಮಾಡುತ್ತಿದ್ದಾರೆ. ಆದರೆ ಇದೀಗ ಹುಬ್ಬಳ್ಳಿಯ ಇಎಸ್‌ಐ ಆಸ್ಪತ್ರೆಯಲ್ಲಿ ನಡೆಯುತ್ತಿರುವ ಕರ್ಮಕಾಂಡಕ್ಕೆ ಅಂತ್ಯ ಹಾಡುವ ಸಮಯ ಹತ್ತಿರವಾದಂತಿದೆ. ಯಾಕಂದ್ರೆ ಇವರ ಕಳ್ಳಾಟವನ್ನು ಕರ್ನಾಟಕ ಟಿವಿ ಮತ್ತು ದಲಿತ ಕಲ್ಯಾಣ ಸೇವಾ ಸಮಿತಿ ಬಯಲು ಮಾಡಿದೆ.

ಹುಬ್ಬಳ್ಳಿಯ ಇಎಸ್‌ಐ ಆಸ್ಪತ್ರೆ ಕಾರ್ಮಿಕ ಇಲಾಖೆಯ ಆಸ್ಪತ್ರೆ. ಆದರೆ ಈ ಆಸ್ಪತ್ರೆಯಲ್ಲಿ ಮಾತ್ರೆಗಳನ್ನು ಸುಮ್ಮನೆ ಹಾಳು ಮಾಡಲಾಗುತ್ತಿದೆ. ಮಾತ್ರೆಗಳನ್ನು ಶೌಚಾಲಯಕ್ಕೆ ಹಾಕಿ, ನೀರು ಬಿಡಲಾಗುತ್ತಿದೆ. ಈ ಬಗ್ಗೆ ಪ್ರಶ್ನಿಸಿದಾಗ, ಇಲಿ ಕಾಟವೆಂದು ಆಸ್ಪತ್ರೆ ಸಿಬ್ಬಂದಿ ಹಾರಿಕೆಯ ಉತ್ತರ ನೀಡುತ್ತಿದ್ದಾರೆ.

ಹುಬ್ಬಳಿಯ ಗೋಕುಲ್ ಕೈಗಾರಿಕಾ ಪ್ರದೇಶದಲ್ಲಿ ಈ ಆಸ್ಪತ್ರೆ ಇದ್ದು, ಈ ಆಸ್ಪತ್ರೆ ಸಿಬ್ಬಂದಿಗಳು ಮನಸ್ಸಿಗೆ ಬಂದಂತೆ ಮಾತ್ರೆಗಳನ್ನು ಹಾಳು ಮಾಡುತ್ತಿದ್ದಾರೆ. ಹೇಳೋರಿಲ್ಲ ಕೇಳೋರಿಲ್ಲ ಇವರದ್ದೇ ಆಟ ಅನ್ನೋ ರೀತಿ ಪರಿಸ್ಥಿತಿ ಬಂದಿದೆ. ಇವರು ಮಾಡುತ್ತಿರುವ ಕೆಲಸದ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೂ ಬಾರದಿರುವುದು ವಿಪರ್ಯಾಸದ ಸಂಗತಿ.

- Advertisement -

Latest Posts

Don't Miss