Sunday, December 1, 2024

Latest Posts

Lakshmi Hebbalkar : ಲಕ್ಷ್ಮೀ ಹೆಬ್ಬಾಳ್ಕರ್ ಅಳಿಯನ ಕೊರಳಲ್ಲೂ ಹುಲಿ ಉಗುರು! ಇಕ್ಕಟ್ಟಿಗೆ ಸಿಲುಕಿತಾ ಕಾಂಗ್ರೆಸ್ ಸರ್ಕಾರ?

- Advertisement -

Hubballi News : ‘ಹುಲಿ ಉಗುರ’ಪ್ರಕರಣದಲ್ಲಿ ಕನ್ನಡ ಕಿರುತೆರೆ ರಿಯಾಲಿಟಿ ಶೋ ಬಿಗ್ ಬಾಸ್ 10 ಸ್ಪರ್ಧಿಯಾಗಿದ್ದ ವರ್ತೂರು ಸಂತೋಷ್ ಬಂಧನ ಬಳಿಕ ಸ್ವಾಮೀಜಿ, ಸೆಲೆಬ್ರಿಟಿ, ರಾಜಕಾರಣಿಗಳು ಧರಿಸಿರುವ ಬಗ್ಗೆ ಒಂದೊಂದೇ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಹುಲಿ ಉಗುರು ಪ್ರಕರಣ ಇದೀಗ ಕಾಂಗ್ರೆಸ್ ಕೊರಳಿಗೆ ಕೈಹಾಕಿದೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅಳಿಯ ಹುಬ್ಬಳ್ಳಿ ಕಾಂಗ್ರೆಸ್ ಯುವ ಮುಖಂಡ ರಜತ್ ಉಳ್ಳಾಗಡ್ಡಿ ಕೊರಳಲ್ಲೂ ಹುಲಿ ಉಗುರು ಪೆಂಡೆಂಟ್ ಇರುವ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಸಂತೋಷ್ ಬಂಧನವಾಯ್ತು, ಇವರ ಬಂಧನ ಯಾವಾಗ? ಕಾನೂನು ಎಲ್ಲರಿಗೂ ಒಂದೇ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ. ಈ ಪ್ರಕರಣದಿಂದ ಕಾಂಗ್ರೆಸ್ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಸಾಧ್ಯತೆಯಿದೆ.

ಮದುವೆ ಸಮಯದಲ್ಲಿ ಪೋಟೋ ಶೂಟ್ ನಲ್ಲಿ ಹುಲಿ ಉಗುರು ಮಾದರಿ ಚೈನ್ ಧರಿಸಿದ್ದ ರಜತ್ ಪೋಟೋ ಈಗ ವೈರಲ್ ಆಗಿದೆ. ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಸಹೋದರಿ ಮಗಳನ್ನು ಮದುವೆಯಾಗಿರುವ ರಜತ್ ಉಳ್ಳಾಗಡ್ಡಿ ಮಠ. ರಾಜಕೀಯ ವಲಯದಲ್ಲಿ ಲಕ್ಷ್ಮಿ ಹೆಬ್ಬಾಳಕರ ಅಳಿಯ ಅಂತಲೇ ಫೇಮಸ್. ಈ ಹಿಂದೆ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಆಗಿದ್ದ ರಜತ್. ಇದೀಗ ಹುಲಿ ಉಗುರು ಪೆಂಡೆಂಟ್ ಧರಿಸಿರುವ ವಿಚಾರಕ್ಕೆ ಪೇಚಿಗೆ ಸಿಲುಕಿಕೊಂಡಂತಾಗಿದೆ. ಪೆಂಡೆಂಟ್ ಧರಿಸಿದ ವಿಚಾರಕ್ಕೆ ಜಗ್ಗೇಶ್, ನಟ ದರ್ಶನ ಮನೆಮೇಲೆ ದಾಳಿ ಮಾಡಿರುವ ಅರಣ್ಯ ಇಲಾಖೆ ಇದೀಗ ಲಕ್ಷ್ಮೀ ಹೆಬ್ಬಾಳ್ಕರ್ ಅಳಿಯ ರಜತ್ ಉಳ್ಳಾಗಡ್ಡಿ ಮನೆ ಮೇಲೂ ದಾಳಿ ಮಾಡುತ್ತಾ? ಭಾರೀ ಕುತೂಹಲ ಮೂಡಿಸಿದೆ.

Droupadi Murmu : ಇಂದು ಬೆಂಗಳೂರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿ

Jaggesh : ಜಗ್ಗೇಶ್ ಕತ್ತಲ್ಲೂ ಇದೆ ಹುಲಿ ಉಗುರಿನ ಲಾಕೆಟ್ ; ಅವರೇ ಒಪ್ಪಿಕೊಂಡಿದ್ರು

ತಮಿಳುನಾಡಿನಲ್ಲಿ ಎಲ್ಟಿಟಿಇ ಸಂಘಟನೆಯ ಶಂಕಿತ ಉಗ್ರನನ್ನು ಬಂಧಿಸಿದ ಬೆಂಗಳೂರಿನ ಎನ್ಐಎ

- Advertisement -

Latest Posts

Don't Miss