Wednesday, August 20, 2025

Latest Posts

ಡಿಕೆಶಿ ಹೇಳಿಕೆಗೆ ಬೆಂಬಲ ನೀಡಿದ ಲಕ್ಷ್ಮೀ ಹೆಬ್ಬಾಳ್ಕರ್!

- Advertisement -

ಧರ್ಮಸ್ಥಳದ ಕುರಿತು ಡಿಸಿಎಂ ಡಿ.ಕೆ. ಶಿವಕುಮಾರ್ ನೀಡಿರುವ ಹೇಳಿಕೆ ಕುರಿತು ಪ್ರತಿಕ್ರಿಯಿಸಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರು ಹಾಗೂ ಉಡುಪಿ ಜಿಲ್ಲೆಯ ಉಸ್ತುವಾರಿ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್, ನಾವೆಲ್ಲರೂ ಧರ್ಮಸ್ಥಳ ಮಂಜುನಾಥನ ಭಕ್ತರು. ಡಿಕೆಶಿ ಅವರ ಹೇಳಿಕೆಗೆ ನಾನು ಸಂಪೂರ್ಣ ಸಹಮತ ವ್ಯಕ್ತಪಡಿಸುತ್ತೇನೆ ಎಂದು ತಿಳಿಸಿದ್ದಾರೆ.

ಶುಕ್ರವಾರ ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಧರ್ಮಸ್ಥಳದ ಕುರಿತು ನಡೆಯುತ್ತಿರುವ ಕೆಲವು ಬೆಳವಣಿಗೆಗಳು ಆತಂಕ ಉಂಟುಮಾಡುತ್ತಿವೆ ಎಂದು ಅಭಿಪ್ರಾಯಪಟ್ಟರು. ಈ ವಿಷಯದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ. ಎಸ್ಐಟಿ ತನಿಖೆಯ ಮೂಲಕವೇ ಈ ಪ್ರಕರಣದ ಸತ್ಯಾಸತ್ಯತೆ ಬೆಳಕಿಗೆ ಬರಬೇಕು. ಇದಕ್ಕೆಲ್ಲಾ ಉತ್ತರ ಸಿಗಬೇಕು ಎಂದೆ ಎಸ್ ಐ ಟಿ ರಚನೆಯಾಗಿದೆ. ಆದಷ್ಟು ಬೇಗ ಉತ್ತರ ಸಿಗಲಿದೆ ಎಂದು ಅವರು ಹೇಳಿದರು.

ಲಕ್ಷ್ಮೀ ಹೆಬ್ಬಾಳ್ಕರ್ ಅವರು ಎಸ್ಐಟಿ ತನಿಖೆಗೆ ಭರವಸೆ ವ್ಯಕ್ತಪಡಿಸಿ, ಗೃಹಸಚಿವರೊಂದಿಗೆ ಅಧಿಕಾರಿಗಳು ನಿರಂತರ ಮಾಹಿತಿ ಹಂಚಿಕೊಳ್ಳುತ್ತಿದ್ದಾರೆ. ಧರ್ಮಸ್ಥಳದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ವ್ಯಕ್ತಿಗಳು ಕ್ಷೇತ್ರ ಹಾಗೂ ಧರ್ಮಾಧಿಕಾರಿಗಳ ವಿರುದ್ಧ ಅವಹೇಳನಾತ್ಮಕ ಪೋಸ್ಟ್‌ಗಳನ್ನು ಹರಡುತ್ತಿದ್ದಾರೆ. ಇದು ಕಾನೂನುಬಾಹಿರವಾಗಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಸೌಜನ್ಯಳಿಗೆ ಯಾವುದೇ ರೀತಿಯ ಅನ್ಯಾಯವಾಗಿದೆ ಎಂಬುದಾಗಿ ಸಾಬೀತಾದರೆ, ನ್ಯಾಯ ಸಿಗಲೇಬೇಕು. ಕೆಲವರು ಈ ಪ್ರಕರಣದಲ್ಲಿ ಹೊಸ ಹೊಸ ಸ್ಥಳಗಳನ್ನು ಮುಸಕುದಾರಿಯಾಗಿ ಗುರುತಿಸುತ್ತಿದ್ದಾರೆ. ಇವುಗಳಿಗೆ ಸಮರ್ಥನೆ ಬೇಕಾಗಿದೆ. ಆದಷ್ಟು ಬೇಗ, ಎಸ್ಐಟಿ ತನಿಖೆಯಿಂದ ಸತ್ಯತೆ ಬಯಲಾಗಲಿದೆ ಎಂದು ಸಚಿವರು ನಂಬಿಕೆ ವ್ಯಕ್ತಪಡಿಸಿದರು.

ಈ ಹಿನ್ನೆಲೆಯಲ್ಲಿ, ಡಿಸಿಎಂ ಡಿಕೆ ಶಿವಕುಮಾರ್ ನೀಡಿರುವ ಹೇಳಿಕೆ ಸಾಕಷ್ಟು ಚರ್ಚೆಗೆ ಕಾರಣವಾಗಿದ್ದು, ಸಚಿವ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಸ್ಪಷ್ಟನೆ ಮತ್ತಷ್ಟು ಚರ್ಚೆಗೆ ಆಸ್ಪದವಾಗಲಿದೆ.

- Advertisement -

Latest Posts

Don't Miss