Thursday, October 30, 2025

Latest Posts

ಮೋದಿ ಸ್ಟಾರ್ ಡ್ಯಾನ್ಸರ್.. ರಾಹುಲ್ ಗಾಂಧಿ ಅಟ್ಯಾಕ್

- Advertisement -

ಲೇಟ್‌ ಆದ್ರೂ ಲೇಟೆಸ್ಟ್‌ ಆಗಿ ಗೆಲುವಿನ ಸ್ಟ್ರ್ಯಾಟಜಿಗಳೊಂದಿಗೆ, ಬಿಹಾರ ಚುನಾವಣಾ ರಣಕಣಕ್ಕೆ ರಾಹುಲ್‌ ಗಾಂಧಿ ಎಂಟ್ರಿ ಕೊಟ್ಟಿದ್ದಾರೆ. ಮುಜಾಫರ್‌ಪುರದಲ್ಲಿ ಆರ್‌ಜೆಡಿ ನಾಯಕ, ಮುಖ್ಯಮಂತ್ರಿ ಅಭ್ಯರ್ಥಿ ತೇಜಸ್ವಿ ಯಾದವ್ ಜೊತೆ ರಾಹುಲ್ ಗಾಂಧಿ ರ್ಯಾಲಿ ಕೈಗೊಂಡಿದ್ರು. ಇದೇ ವೇಳೆ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ನೀವು ನರೇಂದ್ರ ಮೋದಿಯವರನ್ನು ನಿಮ್ಮ ಮತಗಳಿಗಾಗಿ ಕುಣಿಯಲು ಹೇಳಿದರೆ, ಅವರು ವೇದಿಕೆ ಮೇಲೆ ಕುಣಿಯುತ್ತಾರೆಂದು ಲೇವಡಿ ಮಾಡಿದ್ದಾರೆ.

ದೆಹಲಿಯಲ್ಲಿ ಮಾಲಿನ್ಯಗೊಂಡ ಯಮುನಾ ನದಿಯಲ್ಲಿ ಭಕ್ತರು ಪೂಜೆ ಮಾಡುತ್ತಿದ್ದಾಗ, ಪ್ರಧಾನಿ ವಿಶೇಷವಾಗಿ ನಿರ್ಮಿಸಿದ ಕೊಳದಲ್ಲಿ ಸ್ನಾನ ಮಾಡಿದರು. ಯಮುನಾ ನದಿಯೊಂದಿಗೆ ಅವರಿಗೆ ಯಾವುದೇ ಸಂಬಂಧವಿಲ್ಲ. ಛತ್ ಪೂಜೆಯೊಂದಿಗೆ ಅವರಿಗೆ ಯಾವುದೇ ಸಂಬಂಧವಿಲ್ಲ. ಅವರಿಗೆ ಬೇಕಾಗಿರುವುದು ನಿಮ್ಮ ಮತ ಮಾತ್ರ.

ಕಳೆದ 20 ವರ್ಷಗಳಿಂದ ಅಧಿಕಾರದಲ್ಲಿದ್ದರೂ ಹಿಂದುಳಿದ ವರ್ಗಗಳಿಗಾಗಿ ಏನನ್ನೂ ಮಾಡಿಲ್ಲ ಎಂದು, ನಿತೀಶ್ ಕುಮಾರ್ ಅವರನ್ನು ರಾಹುಲ್ ತರಾಟೆಗೆ ತೆಗೆದುಕೊಂಡಿದ್ದಾರೆ. ರಾಜ್ಯವನ್ನು ನಿಯಂತ್ರಿಸಲು ಜೆಡಿಯು ನಾಯಕನ ಚಿತ್ರವನ್ನು ಬಿಜೆಪಿ ದುರುಪಯೋಗಪಡಿಸಿಕೊಳ್ಳುತ್ತಿದೆ.

ನಿತೀಶ್ ಜಿ ಅವರ ಮುಖವನ್ನು ಬಳಸಿಕೊಳ್ಳಲಾಗುತ್ತಿದೆ. ರಿಮೋಟ್ ಕಂಟ್ರೋಲ್ ಬಿಜೆಪಿಯ ಕೈಯಲ್ಲಿದೆ. ಅತ್ಯಂತ ಹಿಂದುಳಿದ ಜನರ ಧ್ವನಿ ಅಲ್ಲಿ ಕೇಳುತ್ತದೆ ಎಂದು ನೀವು ಅಂದುಕೊಳ್ಳಬಾರದು. ಬಿಜೆಪಿ ಅವರ ಕೈಯಲ್ಲಿ ರಿಮೋಟ್ ಕಂಟ್ರೋಲ್ ಇದೆ. ಮತ್ತು ಅವರಿಗೆ ಸಾಮಾಜಿಕ ನ್ಯಾಯದೊಂದಿಗೆ ಯಾವುದೇ ಸಂಬಂಧವಿಲ್ಲ ಎಂದು ಗುಡುಗಿದ್ದಾರೆ.

ಇದೇ ವೇಳೆ ಮತಗಳ್ಳತನ ಆರೋಪವನ್ನು ರಾಹುಲ್‌ ಗಾಂಧಿ ಪುನರುಚ್ಚರಿಸಿದ್ದಾರೆ. ನಿಮ್ಮ ಮತಗಳನ್ನು ಕದಿಯುವಲ್ಲಿ ನಿರತರಾಗಿದ್ದಾರೆ. ಅವರು ಮಹಾರಾಷ್ಟ್ರದಲ್ಲಿ ಚುನಾವಣೆಗಳನ್ನು ಕದ್ದರು, ಹರಿಯಾಣದಲ್ಲಿ ಚುನಾವಣೆಗಳನ್ನು ಕದ್ದರು. ಇದೀಗ ಬಿಹಾರದಲ್ಲೂ ತಮ್ಮ ಅತ್ಯುತ್ತಮ ಪ್ರಯತ್ನ ಮಾಡುತ್ತಾರೆಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.

- Advertisement -

Latest Posts

Don't Miss