ಬೆಂಗಳೂರು: ನಗರದ ಅನ್ನಪೂರ್ಣೆಶ್ವರಿ ನಗರ ಪಿಜಿ ಒಂದರಲ್ಲಿ ಕಾನೂನು ಪದವಿ ವ್ಯಾಸಂಗ ಮಾಡುತ್ತಿದ್ದ ಆರ್ಯನ್ ಕುಮಾರ್ ನಡ್ಡಾ ಎನ್ನುವ ವಿದ್ಯಾರ್ಥಿ ಭಾನುವಾರ (ಆಗಸ್ಟ್ 6) 11.00 ಗಂಟೆ ಸುಮಾರಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಿತಿಯಲ್ಲಿ ಕಂಡುಬಂದಿದೆ.
ಮೂರನೇ ವರ್ಷದ ಕಾನೂನು ವಿದ್ಯಾರ್ಥಿಯೊಬ್ಬರು ಭಾನುವಾರ ಪಶ್ಚಿಮ ಬೆಂಗಳೂರಿನಲ್ಲಿ ಪೇಯಿಂಗ್ ಗೆಸ್ಟ್ ಕೊಠಡಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಸದ್ಯ ಪೊಲೀಸರು ಈ ಪ್ರಕರಣವನ್ನು ಆತ್ಮಹತ್ಯೆ ಎಂದು ಪರಿಗಣಿಸುತ್ತಿದ್ದಾರೆ. ನಡ್ಡಾ ಮೂರು ವರ್ಷಗಳ ಹಿಂದೆ ಬೆಂಗಳೂರಿಗೆ ತೆರಳಿ ಖಾಸಗಿ ಕಾನೂನು ಶಾಲೆಗೆ ದಾಖಲಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ
ಆರ್ಯನ್ ಕುಮಾರ್ ನಡ್ಡಾ ಅವರು 15 ದಿನಗಳ ಹಿಂದೆ ಪಿಜಿ ಕೊಠಡಿಗೆ ತೆರಳಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಬೆಳಗ್ಗೆ 10.45ರ ಸುಮಾರಿಗೆ ಕೋಣೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ. ರೂಮ್‌ಮೇಟ್ 15 ನಿಮಿಷಗಳ ನಂತರ ಅವನು ನೇಣು ಬಿಗಿದಿರುವುದನ್ನು ಕಂಡು ಪೊಲೀಸರಿಗೆ ಕರೆ ಮಾಡಿದ್ದಾನೆ ಸ್ಥಳಕ್ಕೆ ಆಗಮಿಸಿದ ಅನ್ನಪೂರ್ಣೇಶ್ವರಿ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Shri Muruli: ಅತ್ತಿಗೆ ಸ್ಪಂದನಾ ನಿಧನದ ಕುರಿತು ಶ್ರೀ ಮುರುಳಿ ಪ್ರತಿಕ್ರಿಯೆ
DK Shiva kumar: ಸ್ಪಂದನಾ ವಿಜಯ್ ರಾಘವೇಂದ್ರ ಅವರ ನಿಧನಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್ ಸಂತಾಪ:
Siddaramaiah tweet: ಟ್ವೀಟ್ ಮೂಲಕ ಸಂತಾಪ ಸೂಚಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ