ರಾಜಕೀಯ ಸುದ್ದಿ:ಇಂದು ಸದನದಲ್ಲಿ ಕಲಾಪ ಶುರುವಾಗಿದ್ದು ವಿಪಕ್ಷ ನಾಯಕರ ಆಯ್ಕೆ ವಿಚಾರ ದಿನದಿಂದ ದಿನಕ್ಕೆ ಕಾಂಗ್ರಸ್ ನಾಯಕರ ನಾಲಿಗೆಉ ಮೇಲೆ ಹೊರಳಾಡುತ್ತಿದರೆ. ಇದಕ್ಕೆ ಪುಷ್ಠಿ ಕೊಡುವ ರೀತಿಯಲ್ಲೇ ವಿಪಕ್ಷ ಬಿಜೆಪಿ ನಾಯಕರು ವರ್ತಿಸುತಿದ್ದಾರೆ. ಇಂದು ವಿಪಕ್ಷ ನಾಯಕ ಆಯ್ಕೆ ಬಗ್ಗೆ ಮತ್ತೊಮ್ಮೆ ಲಕ್ಷ್ಮಣ ಸವಧಿ ಟಾಂಗ್ ಕೊಟ್ಟಿದ್ದಾರೆ.
ಕಲಾಪ ಶುರುವಾಗಿ ಇಷ್ಟು ದಿನವಾದರೂ ವಿಪಕ್ಷದವರು ನಾಯಕನ ಆಯ್ಕೆ ಮಾಡಲಾಗುತ್ತಿಲ್ಲ ವಿಪಕ್ಷ ನಾಯಕರಲ್ಲಿ ಯಾರು ಪದೇ ಪದೇ ಸದನದಲ್ಲಿ ಎದ್ದು ನಿಂತುಕೊಳ್ಳುತ್ತಾರೆ. ಮತ್ತು ಯಾರ ಆಡಳಿತ ಪಕ್ಷದ ವಿರುದ್ದ ಮತ್ತೆ ಮತ್ತೆ ದನಿ ಎತ್ತಿ ಏರುದನಿಯಲ್ಲಿ ಮಾತನಾಡುತ್ತಾರೆ ಎಂಬುದು ಲೆಕ್ಕಕ್ಕೆ ಬಂದಂತೆ ಕಾಣುತ್ತಿದೆ ಎಲ್ಲದರ ಲೆಕ್ಕಾಚಾರ ನಡೆಯುತ್ತಿದೆ. ಪ್ರತಿದಿನವೂ ಮಾರ್ಕ್ ಗಳು ಬೀಳುತ್ತವೆ ಅದರ ಆಧಾರದ ಮೇರೆಗೆ ವಿಪಕ್ಷ ನಾಯಕನ ಆಯ್ಕೆ ನಡೆಯುತ್ತದೆ ಎಂದ ಲಕ್ಷ್ಮಣ ಸವದಿ ವಿಪಕ್ಷ ನಾಯಕರಿಗೆ ಲೇವಡಿ ಮಾಡಿದರು.