Political News: ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಏನು ನಿರ್ಧಾರ ಕೈಗ“ಳ್ಳುತ್ತಾರೋ, ಅದಕ್ಕೆ ನನ್ನ ಬೆಂಬಲವಿದೆ ಎಂದು ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ ಹೇಳಿದ್ದಾರೆ. ಅಲ್ಲದೇ ದೇಶದ ಎಲ್ಲ ಪಕ್ಷದ ನಾಯಕರೂ ಕೂಡ ಇದೇ ರೀತಿ ಪ್ರಧಾನಿ ಮೋದಿ ತೆಗೆದುಕಳ್ಳುವ ನಿರ್ಣಯಕ್ಕೆ ಬೆಂಬಲಿಸಬೇಕು ಎಂದು ಮಾಯಾವತಿ ಕರೆ ನೀಡಿದ್ದಾರೆ.
ಕೇಂದ್ರದ ವಿರುದ್ಧ ಪೋಸ್ಟ್ ಹಾಕುವ ಬದಲು, ಹೇಳಿಕೆ ನೀಡುವ ಬದಲು, ಇದೇ ನೆಪದಲ್ಲಿ ಕ“ಳಕು ರಾಜಕೀಯ ಮಾಡುವ ಬದಲು, ನಾಾವು ಪ್ರಧಾನಿ ಮೋದಿಯವರ ನಿರ್ಣಯವನ್ನು ಬೆಂಬಲಿಸಬೇಕು. ಮೋದಿ ವಿರುದ್ಧ ಪೋಸ್ಟ್ ಮಾಡುವುದು, ಹೇಳಿಕೆ ನೀಡುವುದರಿಂದ ದೇಶದ ಜನರಲ್ಲಿ ಇದು ಗ“ಂದಲ ಸೃಷ್ಟಿಸುತ್ತದೆ ಎಂದು ಮಾಯಾವತಿ Tweet ಮಾಡಿದ್ದಾರೆ.
ಅಲ್ಲದೇ, ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಅವಮಾನಿಸಬಾರದು. ವಿಶೇಷವಾಗಿ ಎಸ್‌ಪಿ ಮತ್ತು ಕಾಂಗ್ರೆಸ್ ಪಕ್ಷ ಈ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಇಲ್ಲವಾದಲ್ಲಿ ಇವರಿಬ್ಬರ ವಿರುದ್ಧ ಬಿಎಸ್‌ಪಿ ಪ್ರತಿಭಟಿಸಬೇಕಾಗುತ್ತದೆ ಎಂದು ಮಾಯಾವತಿ ಎಚ್ಚರಿಕೆ ನೀಡಿದ್ದಾರೆ.
ಇನ್ನು ನಿನ್ನೆಯಷ್s ಕಾಂಗ್ರೆಸ್ ಮೋದಿ ವಿರುದ್ಧ ತನ್ನ ಎಕ್ಸ್‌ಖಾತೆಯಲ್ಲಿ ತಲೆ ಇಲ್ಲದ ಇಮೇಜ್ ಹಾಕಿ, ಮೋದಿ ಗಾಯಬ್ ಅನ್ನೋ ರೀತಿ ಪೋಸ್ಟ ಹಾಕಿತ್ತು..ಇದಕ್ಕೆ ದೇಶಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದಕ್ಕೆ, ಇಂದು ಆ ಪೋಸ್ಟ ಡಿಲೀಟ್ ಮಾಡಲಾಗಿದೆ.
ಇದೇ ಪೋಸ್ಟ ಇಟ್ಟುಕ“ಂಡು ಪಾಕಿಸ್ತಾನದಲ್ಲಿ ತಮಾಷೆ ಮಾಡಲಾಗುತ್ತಿದೆ. ಭಾರತದಲ್ಲೇ ಪಾಕಿಸ್ತಾನದ ಪರ ಮಾತನಾಡುವವರಿದ್ದಾರೆ. ಪಾಕಿಸ್ತಾನದ ವಿರುದ್ಧ ಯುದ್ಧ ಬೇಡ ಎನ್ನುವವರಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಹರಿದಾಡುತ್ತಿದೆ. ಒಟ್ಟಾರೆಯಾಗಿ, ಗಲೀಜು ರಾಜಕೀಯ ಕೆಸರೆರೆಚಾಟಗಳ ನಡುವೆ, ದೇಶದ ಮಾನ ವಿಶ್ವದಲ್ಲಿ ಹರಾಜಾಗುವ ಎಲ್ಲಾ ಲಕ್ಷಣಗಳು ಕಾಣುತ್ತಿದೆ. ಇದನ್ನು ಅರ್ಥ ಮಾಡಿಕ“ಂಡಾದರೂ, ರಾಜಕೀಯ ನಾಯಕರು ಒಗ್ಗಟ್ಟಾಗಿ ಇರುತ್ತಾರಾ ಅಂತಾ ಕಾದು ನೋಡಬೇಕಿದೆ.