ಒಂದು ಕಡೆ ದುಡಿದ ದುಡ್ಡು ಕೈಯಲ್ಲಿ ನಿಲ್ಲುತ್ತಿಲ್ಲ. ಇನ್ನೊಂದೆಡೆ ಅಂದುಕೊಂಡ ಕೆಲಸ ಮಾಡಲು ಆಗುತ್ತಿಲ್ಲ. ಮತ್ತೊಂದೆಡೆ ಮನೆಯಲ್ಲಿ ಜಗಳ. ಒಟ್ಟಿನಲ್ಲಿ ಮನಶಾಂತಿ ಅನ್ನೋದೇ ಇಲ್ಲಾ ಅನ್ನೋದು ನಿಮ್ಮ ಸಮಸ್ಯೆ ಆಗಿದ್ದರೆ ಅಂಥ ಸಮಸ್ಯೆಗೆ ಪರಿಹಾರ ಹೇಗೆ ಕಂಡುಕೊಳ್ಳಬಹುದು ಅನ್ನೋ ಬಗ್ಗೆ ನಾವಿವತ್ತು ನಿಮಗೆ ಮಾಹಿತಿ ನೀಡಲಿದ್ದೇವೆ.

ಶುಕ್ರವಾರದ ದಿನ ಯಾವುದಾದರೂ ದೇವಿ ದೇವಸ್ಥಾನ ಅಂದ್ರೆ ದುರ್ಗಾದೇವಿ, ಅಂಬಾಭವಾನಿ ದೇವಸ್ಥಾನಕ್ಕೆ ಹೋಗಿ ನಿಂಬೆ ಹಣ್ಣಿನ ದೀಪವನ್ನ ಹಚ್ಚಬೇಕು. ಆದ್ರೆ ಯಾವುದೇ ಕಾರಣಕ್ಕೂ ಸರಸ್ವತಿ ಮತ್ತು ಲಕ್ಷ್ಮೀ ದೇವಿಯ ದೇವಸ್ಥಾನದಲ್ಲಿ ನಿಂಬೆಹಣ್ಣಿನ ದೀಪವನ್ನ ಹಚ್ಚಕೂಡದು. ಲಕ್ಷ್ಮೀ ಮತ್ತು ಸರಸ್ವತಿ ದೇವಸ್ಥಾನದಲ್ಲಿ ನಿಂಬೆಹಣ್ಣಿನ ದೀಪ ಹಚ್ಚಿದ್ರೆ ಒಳಿತಾಗುವುದಿಲ್ಲ. ಆದ್ದರಿಂದ ರೌದ್ರ ರೂಪದ ದೇವಿಯ ದೇವಸ್ಥಾನದಲ್ಲೇ ನಿಂಬೆಹಣ್ಣಿನ ದೀಪ ಹಚ್ಚಬೇಕು.
ಇದಾದನಂತರ ಪೂಜೆ ಮಾಡುವವರ ಹೆಸರಿನಲ್ಲಿ ಅಥವಾ ಯಾರಿಗೆ ಒಳಿತಾಗಲೆಂದು ನೀವು ಪೂಜೆ ಮಾಡುತ್ತಿದ್ದೀರೋ ಅವರ ಹೆಸರಿನಲ್ಲಿ ಅಷ್ಟೋತ್ತರ ಮಾಡಿಸಬೇಕು. ಇದರ ಜೊತೆ ಪ್ರಸಾದ ತಯಾರಿಸಿ, ಹಣ್ಣು ಹಂಪಲುಗಳನ್ನ ನೈವೇದ್ಯ ಮಾಡಿ, ಸುಮಂಗಲಿಯರಿಗೆ ಅರಿಷಿನ ಕುಂಕುಮಕ್ಕೆ ಕರೆದು ಉಡಿ ತುಂಬಬೇಕಾಗುತ್ತದೆ.
ಇನ್ನು ಈ ದೀಪವನ್ನು ಹಚ್ಚುವಾಗ ಕೆಲ ನಿಯಮಗಳನ್ನ ಅನುಸರಿಸಬೇಕು. ಒಂದು ಮನೆಯಲ್ಲಿ ಒಬ್ಬರಿಗಿಂತ ಹೆಚ್ಚು ಜನ ನಿಂಬೆಹಣ್ಣಿನ ದೀಪ ಹಚ್ಚಕೂಡದು. ಅದರಲ್ಲೂ ಮನೆಯ ಹೆಣ್ಣುಮಗಳೇ ದೀಪ ಹಚ್ಚಬೇಕು. ಅಲ್ಲದೇ ಮನೆಯಲ್ಲಿ ನಿಂಬೆಹಣ್ಣಿನ ದೀಪ ಹಚ್ಚಬಾರದು. ಈ ಕೆಲಸವಷ್ಟೇ ಅಲ್ಲ ಬೇರೆ ಯಾವ ಪೂಜೆ ಮಾಡಬೇಕೆಂದರೂ ಮುಟ್ಟಾಗಿ ಏಳು ದಿನ ಕಳೆದ ಮೇಲೆ ಶುಭ್ರಗೊಂಡು ಪೂಜೆ ಮಾಡಬೇಕು. ಮನೆಯಲ್ಲಿ ಯಾವುದಾದರೂ ವಿಶೇಷ ದಿನವಿದ್ದಾಗ, ಹಿರಿಯರ ಶ್ರಾದ್ಧವಿದ್ದಾಗ, ಸೂತಕವಿದ್ದಾಗ, ಅನಾರೋಗ್ಯವಿದ್ದಾಗ ನಿಂಬೆಹಣ್ಣಿನ ದೀಪ ಹಚ್ಚಬಾರದು.
ಇನ್ನು ಈ ವೃತ ಎಷ್ಟು ದಿನ ಮಾಡಬೇಕು ಅನ್ನೋ ಪ್ರಶ್ನೆ ನಿಮ್ಮದಾಗಿದ್ದರೆ, 3, 5, ಅಥವಾ 9 ಶುಕ್ರವಾರಗಳ ಕಾಲ ಈ ವೃತಾಚರಣೆ ಮಾಡಬೇಕು.

ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶುಕ್ಲಾಚಾರ್ಯು ಗುರೂಜಿ, ದೂರವಾಣಿ ಸಂಖ್ಯೆ: 9886868111
ನಿಮ್ಮ ಸಮಸ್ಯೆಗಳಾದ ಸ್ತ್ರೀ ಪುರುಷ ವಶೀಕರಣ, ಗಂಡ ಹೆಂಡತಿ ಸಮಸ್ಯೆ, ಸಾಲಬಾಧೆ, ವ್ಯಾಪಾರ, ಶತ್ರುನಾಶ, ಮಾಟಮಂತ್ರ, ಜನವಶ, ಧನವಶ ಯಾವುದೇ ಸಮಸ್ಯೆಗಳಿದ್ದರೂ ಕೇವಲ ಮೂರು ದಿನಗಳಲ್ಲಿ ಪರಿಹಾರ..