www.karnatakatv.net :ಧಾರವಾಡ: ಹುಬ್ಬಳ್ಳಿಯ ರಾಜನಗರದಲ್ಲಿ ಕಾಣಿಸಿಕೊಂಡಿದೆ ಎನ್ನಲಾದ ಚಿರತೆ ಇದೀಗ ಧಾರವಾಡ ತಾಲೂಕಿನ ಕವಲಗೇರಿ ಗ್ರಾಮದ ಹೊರವಲಯದಲ್ಲಿರುವ ಕಬ್ಬಿನ ಗದ್ದೆಯಲ್ಲಿ ಕಾಣಿಸಿಕೊಂಡಿದೆ.
ನಿನ್ನೆ ಸಂಜೆ ಚಿರತೆ ಇಬ್ಬರಿಗೆ ಕಾಣಿಸಿಕೊಂಡಿದೆ. ಅಲ್ಲದೇ ಗದ್ದೆಯಲ್ಲಿ ಚಿರತೆಯ ಹೆಜ್ಜೆ ಗುರುತುಗಳ ಸಹ ಕಂಡು ಬಂದಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಚಿರತೆಯನ್ನು ಸೆರೆ ಹಿಡಿಯವ ಕೆಲಸ ಮಾಡುತ್ತಿದ್ದಾರೆ.
ಸಂಜೆ ಕಾಣಿಸಿಕೊಂಡಿದ್ದ ಚಿರತೆ ಇಂದು ಮಧ್ಯಾಹ್ನದವರೆಗೂ ಗೋಚರಿಸಿಲ್ಲ. ಜನರ ಹೇಳಿಕೆ ಮೇಲೆಯೇ ಚಿರತೆಗಾಗಿ ಅರಣ್ಯ ಇಲಾಖೆ ಸಿಬ್ಬಂದಿ ಶೋಧ ನಡೆಸಿದ್ದಾರೆ. ಕವಲಗೇರಿಯ ಬಸಪ್ಪ ಕವಳಿ ಎಂಬುವವರ ಗದ್ದೆಯಲ್ಲಿ ಚಿರತೆ ಅವಿತು ಕುಳಿತಿದ್ದು, ಅದನ್ನು ಸೆರೆಹಿಡಿಯುವುದಕ್ಕಾಗಿ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ.
ಕರ್ನಾಟಕ ಟಿವಿ- ಹುಬ್ಬಳ್ಳಿ




