ಕುಮಾರಸ್ವಾಮಿ ಎಲ್ಲಿ ಕೈಗಾರಿಕೆ ತರುತ್ತಾರೆ ಎಂದು ಹೇಳಲಿ. ಅಲ್ಲಿ ಭೂಸ್ವಾಧೀನ ಪ್ರಕ್ರಿಯೆ ಮಾಡೋಣ ಅಂತಾ ಡಿಕೆಶಿ ಪ್ರಶ್ನೆಗೆ, ಬೆಂಗಳೂರಿನ ಸುದ್ದಿಗೋಷ್ಠಿಯಲ್ಲಿ ಹೆಚ್‌ಡಿಕೆ ಖಡಕ್ ಕೌಂಟರ್ ಕೊಟ್ಟಿದ್ದಾರೆ.
ಇಲ್ಲಿ ಕೈಗಾರಿಕೆ ನಿರ್ಮಾಣ ಮಾಡೋದು ರಾಜ್ಯ ಸರ್ಕಾರದ ಕೆಲಸ. ರಾಜ್ಯದಲ್ಲಿ ಅಂತಹ ವಾತಾವರಣ ನಿರ್ಮಿಸಬೇಕಿದೆ. ನನಗೆ ಕೇಂದ್ರದಲ್ಲಿ ಕೊಟ್ಟಿರುವ ಇಲಾಖೆ ಕಾರ್ಖಾನೆ ತರೋದಲ್ಲ. ಕರ್ನಾಟಕಕ್ಕೆ ನಾಲ್ಕೂವರೆ ಸಾವಿರ ಬಸ್ ಕೊಟ್ಟಿದ್ದೇನೆ. ತೆಲಂಗಾಣಕ್ಕೆ 2 ಸಾವಿರ, ಅಹಮದಾಬಾದ್‌ಗೆ 1 ಸಾವಿರ ಬಸ್ ಕೊಟ್ಟಿದ್ದೇನೆ. ನೀವೆಷ್ಟು ಕಾರ್ಖಾನೆ ತಂದಿದ್ದೀರಿ. ದೊಡ್ಡ ಪಟ್ಟಿಯನ್ನೇ ಕೊಡ್ತೀನಿ. ನನ್ನ ಬಗ್ಗೆ ಚರ್ಚೆ ಮಾಡೋದಕ್ಕೆ ಯೋಗ್ಯತೆಯೇ ಇಲ್ಲ.
ಇದ್ದಿದ್ದು 14 ತಿಂಗಳು ಕೆಲಸ ಮಾಡೋದಕ್ಕೂ ಬಿಡ್ಲಿಲ್ಲ. ತುಂಗಭದ್ರಾ ಡ್ಯಾಂ ಗೇಟ್‌ಗಳನ್ನು ಇಷ್ಟೊತ್ತಿಗೆ ಚೇಂಜ್ ಮಾಡಬೇಕಿತ್ತು. ದುಡ್ಡು ಕೊಡದೇ ಅಲ್ಲಿ ಕೆಲಸ ಆಗಿಲ್ಲ. ಆಂಧ್ರಕ್ಕೆ ನೀರು ಹರಿದು ಹೋಗ್ತಿದೆ. ಮೊದಲು ಗೇಟ್ ಚೇಂಜ್ ಮಾಡಿ, ನೀರು ತಡೆ ಹಿಡಿಯಿರಿ. ಬಳಿಕ ಕುಮಾರಸ್ವಾಮಿ ಜೊತೆ ಚರ್ಚೆಗೆ ಬರುವೆಯಂತೆ.
ನನ್ನ ಕಾಲದಲ್ಲಿ ಇವರ ಜೊತೆಯೇ ಸರ್ಕಾರ ಮಾಡಿ, 9 ಇಂಡಸ್ಟ್ರಿಯಲ್ ಕ್ಲಸ್ಟರ್ ಮಾಡುವ ತೀರ್ಮಾನ ತೆಗೆದುಕೊಂಡಿದ್ದೆ. ಕಾಂಪಿಟ್ ವಿತ್ ಚೈನಾ ಕಾರ್ಯಕ್ರಮ ಅದಾಗಿತ್ತು. ಟ್ರಂಪ್ ಬಗ್ಗೆ, ಚೀನಾ ಬಗ್ಗೆ ಚರ್ಚೆ ಮಾಡ್ತಿದ್ದೇವೆ. ಆತ್ಮನಿರ್ಭರ್ ಕಾರ್ಯಕ್ರಮ, ವಿಕಸಿತ ಭಾರತ ಎಂದು ಹೇಳ್ತಿದ್ದೇವೆ. ಕೊಪ್ಪಳ ಬಿಟ್ಟು ಎಲ್ಲೂ ಟೇಕ್‌ಆಫ್ ಆಗ್ಲಿಲ್ಲ. ಲಕ್ಷಾಂತರ ಜನರಿಗೆ ಉದ್ಯೋಗದ ಅವಕಾಶವಿತ್ತು. ನಾನು ಕಂಟಿನ್ಯೂ ಆಗಿದ್ರೆ, ಕೈಗಾರಿಕೆ ಮಾಡೋರಿಗೆ 25 ಸಾವಿರ ಕೋಟಿ ಕೊಡೋದಕ್ಕೆ ಪ್ಲಾನ್ ಮಾಡಿದ್ದೆ.
5 ವರ್ಷ ಸರ್ಕಾರ ನನ್ನ ಕೈಗೆ ಸಿಕ್ಕಿದ್ರೆ ಏನೆಂದು ತೋರಿಸುತ್ತಿದೆ. ಇವತ್ಯಾಕೆ ಗುಂಡಿಗಳನ್ನು ಇಟ್ಟುಕೊಂಡಿದ್ದೀರಿ. ಗುಂಡಿ ಮುಚ್ಚುವ ಯೋಗ್ಯತೆಯೂ ನಿಮಗೆ ಇಲ್ಲ. 5 ಪರ್ಸೆಂಟ್ ವಸೂಲಿ ಬಗ್ಗೆ ಅಧಿಕಾರಿಗಳನ್ನು ಕೇಳಿದ್ರೆ, ಪಾರ್ಕ್, ರಸ್ತೆಗಳಿಲ್ಲದ ಬಡಾವಣೆಗಳಲ್ಲಿ ಮೂಲಭೂತ ಸೌಕರ್ಯ ಕೊಡ್ತಾರಂತೆ. ಜಾಗವೇ ಇಲ್ಲ ಇನ್ನೆಲ್ಲಿಂದ ಪಾರ್ಕ್ ಮಾಡ್ತಾರೆ.
ನನ್ನ 20 ತಿಂಗಳ ಆಡಳಿತದಲ್ಲಿ ಏನೇನ್ ಮಾಡಿದ್ದೇನೆ ಅನ್ನೋ ಬಗ್ಗೆ ದಾಖಲೆಗಳಿವೆ. 1999ರಿಂದಲೂ ಕಾಂಗ್ರೆಸ್ ಸರ್ಕಾರ ಇತ್ತಲ್ವಾ?. ಇವರೇ ಅರ್ಬನ್ ಮಿನಿಸ್ಟರ್ ಆಗಿದ್ರು. ಬಳ್ಳಾರಿಯಲ್ಲಿ ಸುಳ್ಳು ಹೇಳಿಕೊಂಡು ಅಧಿರು ಹೊಡೆಯುವುದಕ್ಕೆ ಇವರ ಲೆಟರ್ ಹೆಡ್ ಬಳಕೆಯಾಗಿತ್ತು.
ಅವರೇನ್ ಬಹಿರಂಗ ಚರ್ಚೆ ಮಾಡ್ತಾರೆ?. ಅವರ ಜೊತೆ ಚರ್ಚೆ ಮಾಡೋಕೆ ಆಗುತ್ತಾ?. ಮಾತನಾಡುವ ಯೋಗ್ಯತೆ ಇಟ್ಟುಕೊಂಡಿದ್ದಾರಾ? ಅವರಂತೆ ದುಡ್ಡು ಹೊಡೆಯುವ ಕೆಲಸ ಮಾಡ್ಲಿಲ್ಲ. 189 ಫಸ್ಟ್ ಗ್ರೇಡ್ ಕಾಲೇಜ್‌ಮಾಡಿದ್ದೇನೆ. ಪಬ್ಲಿಕ್ ಶಾಲೆ ಘೋಷಣೆ ಮಾಡಿದ್ದೇನೆ. ಇವರೇನ್ ಮಾಡಿದ್ದಾರೆ.

