ಬಿಡುಗಡೆಯಾಗಬೇಕಾದ ಹಣ ಕೊಡುವಂತೆ ಕಿಯೋನಿಕ್ಸ್ ಸಂಸ್ಥೆಗೆ ನೊಂದ ಗುತ್ತಿಗೆದಾರರಿಂದ ಪತ್ರ

News: ಕಿಯೋನಿಕ್ಸ್ ಸಂಸ್ಥೆ 120ಕ್ಕೂ ಹೆಚ್ಚು ಕಂಪನಿಗಳಿಗೆ 200 ಕೋಟಿಗೂ ಹೆಚ್ಚು ಹಣವನ್ನು ನೀಡಿಲ್ಲ ಎಂದು ಆರೋಪಿಸಲಾಗಿದೆ. ಅಲ್ಲದೇ ಆದಷ್ಟು ಬೇಗ ಬಿಡುಗಡೆಯಾಗಬೇಕಾದ ಹಣ ಕೊಡಬೇಕೆಂದು ಆಗ್ರಹಿಸಿದೆ.

Keonics Complaint Letter

ನೊಂದ ಕಿಯೋನಿಕ್ಸ್ ಸಂಸ್ಥೆಯ ಗುತ್ತಿಗೆದಾರರು ಈ ಬಗ್ಗೆ ಪತ್ರ ಬರೆದಿದ್ದು, ಕಿಯೋನಿಕ್ಸ್ ಸಂಸ್ಥೆ 120ಕ್ಕೂ ಹೆಚ್ಚು ಕಂಪನಿಗಳಿಗೆ 200 ಕೋಟಿಗೂ ಹೆಚ್ಚು ಹಣವನ್ನು  ನೀಡುವುದು ಬಾಕಿ ಇದೆ. 11 ತಿಂಗಳಾದರೂ, ಈವರೆಗೂ ಕಂಪನಿ ಬಾಕಿ ಇರುವ ಹಣದಲ್ಲಿ ಸ್ವಲ್ಪ ಹಣವನ್ನು ಕೂಡ ನೀಡಲೇ ಇಲ್ಲ. ಯಾವ ಕಂಪನಿ ಮಾಲೀಕರಿಗೂ ಈವರೆಗೆ ಯಾವುದೇ ಸಂದೇಶ ರವಾನೆಯಾಗಿಲ್ಲ.

ಈ ಬಗ್ಗೆ ಕೇಳಿದಾಗ, ಆಡಿಟ್ ಮತ್ತು ಇನ್ವೆಸ್ಟಿಗೇಷನ್ ಕ್ರಿಯೆ ನಡೆಯುತ್ತಿದೆ ಎಂದಿದ್ದೀರಿ. ಆದರೆ 11 ತಿಂಗಳು ಕಳೆದರೂ ಯಾವುದೇ ಲಿಖಿತ ಉತ್ತರ ಕಿಯೋನೆಕ್ಸ್ ಕಡೆಯಿಂದ ಬಂದಿಲ್ಲ. ಅಷ್ಟಕ್ಕೂ ಆಡಿಟಿಂಗ್‌ಗೆ ಇಷ್ಟೆಲ್ಲ ಸಮಯ ಬೇಕಾಗುವುದಿಲ್ಲ ಎಂದು ಗುತ್ತಿಗೆದಾರರು ಹೇಳಿದ್ದಾರೆ.

ಈ ಕಂಪನಿಯ ನಿರ್ಲಕ್ಷ್ಯತೆಯಿಂದ 300 ಹೆಚ್ಚು ಉದ್ಯೋಗಿಗಳ ಕುಟುಂಬ ಬೀದಿಗೆ ಬಂದಿದೆ. ಅವರಿಗೆ ಸೇರಬೇಕಾದ ಹಣ ಸೇರಿಲ್ಲ. ಹೀಗಾದರೆ, ಉದ್ಯೋಗಿಗಳು ಜೀವನ ನಡೆಸುವುದಾದರೂ ಹೇಗೆ ಎಂದು ಗುತ್ತಿಗೆದಾರರು ಪ್ರಶ್ನಿಸಿದ್ದಾರೆ.

ಅಲ್ಲದೇ ಎಷ್ಟೋ ಉದ್ಯೋಗಿಗಳು ಸಂಬಳ ಸಿಗದೇ, ತಮ್ಮ ಆಸ್ತಿಗಳನ್ನು ಮಾರಿದ್ದಾರೆ. ಇನ್ನು ಕೆಲವರು ಬಡ್ಡಿ ಕಟ್ಟಿ ಸೋತು ಸುಣ್ಣವಾಗಿದ್ದಾರೆ. ಇನ್ನು ಕೆಲವರು ತಮ್ಮ ಮಕ್ಕಳ ವಿದ್ಯಾಭ್ಯಾಸವನ್ನೇ ನಿಲ್ಲಿಸಿದ್ದಾರೆ. ಮತ್ತೆ ಕೆಲವರು ದುಡ್ಡಿಗಾಗಿ ಪತ್ನಿ ಒಡವೆಯನ್ನು ಅಡವಿಟ್ಟು, ಜೀವನ ನಡೆಸುತ್ತಿದ್ದಾರೆ. ಹಾಗಾಗಿ ಬೇಗ ಹಣಬಿಡುಗಡೆ ಮಾಡುತ್ತೀರಿ ಎಂಬ ನಂಬಿಕೆಯಲ್ಲಿ ನಾವಿದ್ದೇವೆ ಎಂದು ಗುತ್ತಿಗೆದಾರರು ಪತ್ರ ಬರೆದಿದ್ದಾರೆ.

About The Author