- Advertisement -
ಅವತ್ತು ನಮ್ಮನೆಲ್ಲ ಬಿಜೆಪಿ ಬಿ ಟೀಮ್ ಅಂತ ಹೇಳ್ಕೊಂಡಿ ಹೋದ್ರಲ್ಲ, ಕಾಂಗ್ರೆಸ್ ನವರು ಇವಗ್ಯಾಕೆ ಪತ್ರ ಬರೆದಿದ್ದಾರೆ. ಕಾಂಗ್ರೆಸ್ ಪಕ್ಷದವರಿಗೆ ಈಗ ಜ್ಞಾನೋದಯವಾಯ್ತಾ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಗುಡುಗಿದ್ದಾರೆ.
ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯಸಭಾ ಚುನಾವಣೆಯಲ್ಲಿ ನಮಗೆ ಅವಕಾಶವನ್ನು ಕೊಡಿ ಎಂದು ತಿಳಿಸಿದರು. ರಾಜ್ಯಸಭಾ ಚುನಾವಣೆಗೆ ನಾಮ ಪತ್ರ ಸಲ್ಲಿಸುವ ಮೊದಲೇ ಜೆಡಿಎಸ್ ಪಕ್ಷದ ನಾಯಕರ ಜೊತೆಯಲ್ಲಿ ಚರ್ಚೆ ಮಾಡಿದ್ರೆ ಇಷ್ಟೆಲ್ಲ ಕಾಂಪ್ಲಿಕೇಷನ್ ಯಾಕೆ ಆಗುತ್ತಿತ್ತು, ಚರ್ಚೆ ಮಾಡಬೇಕಿತ್ತು.
ಕಾವೇರಿ ನೀರಿನ ಹೋರಾಟದಲ್ಲಿ ದೇವೆಗೌಡರು ಬಿಟ್ಟರೆ ಬೇರೆ ಯಾರಾದರು ಹೋರಾಟಕ್ಕೆ ಹೋಗಿಲ್ಲ. ಎಂದು ಕಾಂಗ್ರೆಸ್ ಪಕ್ಷದ ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
- Advertisement -