ಮಹಿಳೆಯರಿಗೆ ಸಿಗಲಿದೆ ಭರ್ಜರಿ ಬಂಪರ್ ಗಿಫ್ಟ್. ಮಹಿಳೆಯರನ್ನು ಸಬಲೀಕರಣಗೊಳಿಸುವ ಮತ್ತು ವಿಮಾ ಜಾಗೃತಿ ಮೂಡಿಸುವ ಉದ್ದೇಶದಿಂದ ಸಾರ್ವಜನಿಕ ರಂಗದ ದೈತ್ಯ ವಿಮಾ ಸಂಸ್ಥೆ ಭಾರತೀಯ ಜೀವ ವಿಮಾ ನಿಗಮವು LIC ಬಿಮಾ ಸಖಿ ಎಂಬ ವಿಶೇಷ ಯೋಜನೆಯನ್ನು ಆರಂಭಿಸಿದೆ. ಮಹಿಳೆಯರಿಗೆಂದೇ ಈ ಯೋಜನೆ ಇದ್ದು, ಸ್ಥಿರವಾದ ಮಾಸಿಕ ಆದಾಯ ಗಳಿಸಲು ಈ ಯೋಜನೆಯು ಒಂದು ಉತ್ತಮ ಅವಕಾಶವನ್ನು ಒದಗಿಸುತ್ತದೆ.
ಮಹಿಳೆಯರಿಗಾಗಿಯೇ ರೂಪಿಸಲಾದ ಒಂದು ಸಬಲೀಕರಣ ಕಾರ್ಯಕ್ರಮ ಎಲ್ ಐಸಿ ಬಿಮಾ ಸಖಿ. ಈ ಯೋಜನೆಯ ಅಡಿಯಲ್ಲಿ ಮಹಿಳೆಯರನ್ನು ಎಲ್‌ಐಸಿ ಏಜೆಂಟರಾಗಿ ನೇಮಿಸಿ, ಅವರಿಗೆ ತರಬೇತಿಯನ್ನು ನೀಡಲಾಗುತ್ತದೆ. ಇದರಿಂದ ಅವರು ತಮ್ಮ ಸಮುದಾಯದಲ್ಲಿ ವಿಮಾ ಜಾಗೃತಿ ಮೂಡಿಸುತ್ತಲೇ ಆದಾಯವನ್ನು ಗಳಿಸಬಹುದು. ಯಶಸ್ವಿ ಏಜೆಂಟರಾಗಲು ಬಿಮಾ ಸಖಿಯರಿಗೆ ವಿಶೇಷ ತರಬೇತಿ, ಆರ್ಥಿಕ ಪ್ರೋತ್ಸಾಹ ಮತ್ತು ಪ್ರಚಾರ ಸಾಮಗ್ರಿಗಳನ್ನು ಎಲ್‌ಐಸಿ ಕಡೆಯಿಂದ ಒದಗಿಸಲಾಗುತ್ತದೆ.
ಈ ಯೋಜನೆಯಡಿ ಆಯ್ಕೆಯಾದ ಮಹಿಳಾ ಏಜೆಂಟರು ತಮ್ಮ ಕಾರ್ಯಕ್ಷಮತೆಯನ್ನು ಆಧರಿಸಿ ಮೊದಲ ಮೂರು ವರ್ಷಗಳವರೆಗೆ ಮಾಸಿಕ ಸ್ಟೈಫಂಡ್ ಪಡೆಯಲಿದ್ದಾರೆ. ಮೊದಲ ವರ್ಷದಲ್ಲಿ ಪ್ರತಿ ತಿಂಗಳು 7,000 ರೂ. ಸ್ಥಿರ ಸ್ಟೈಫಂಡ್ ದೊರೆಯಲಿದೆ. ವಯಸ್ಸಿನ ಪುರಾವೆಯ ಸ್ವಯಂ-ದೃಢೀಕರಿಸಿದ ಪ್ರತಿವಿಳಾಸ ಪುರಾವೆಯ ಸ್ವಯಂ-ದೃಢೀಕರಿಸಿದ ಪ್ರತಿಶೈಕ್ಷಣಿಕ ಅರ್ಹತೆಯ ಪ್ರಮಾಣಪತ್ರದ ಸ್ವಯಂ-ದೃಢೀಕರಿಸಿದ ಪ್ರತಿಅರ್ಜಿ ನಮೂನೆಯೊಂದಿಗೆ ಇತ್ತೀಚಿನ ಪಾಸ್ಪೋರ್ಟ್ ಅಳತೆಯ ಭಾವಚಿತ್ರವನ್ನು ಸಲ್ಲಿಸಬೇಕು.
ಅರ್ಜಿ ಸಲ್ಲಿಸುವ ವೇಳೆಗೆ ಕನಿಷ್ಠ 18 ವರ್ಷ ಪೂರ್ಣಗೊಂಡಿರಬೇಕು. ಗರಿಷ್ಠ ವಯೋಮಿತಿ 70 ವರ್ಷಗಳು. ಕನಿಷ್ಠ ಶೈಕ್ಷಣಿಕ ಅರ್ಹತೆ: 10ನೇ ತರಗತಿ ಉತ್ತೀರ್ಣ ಆಗಿರಬೇಕು. ಈಗಾಗಲೇ ಎಲ್‌ಐಸಿ ಏಜೆಂಟರಾಗಿರುವವರು ಅಥವಾ ನೌಕರರ ಸಂಬಂಧಿಕರು ಅರ್ಜಿ ಸಲ್ಲಿಸುವಂತಿಲ್ಲ. ಸಂಬಂಧಿಕರು ಎಂದರೆ ಪತಿ/ಪತ್ನಿ, ಮಕ್ಕಳು, ಪೋಷಕರು, ಸಹೋದರ-ಸಹೋದರಿಯರು ಮತ್ತು ಅತ್ತೆ-ಮಾವಂದಿರು. ಅಲ್ಲದೆ, ನಿವೃತ್ತ ಎಲ್‌ಐಸಿ ನೌಕರರು ಮತ್ತು ಮಾಜಿ ಏಜೆಂಟರು ಈ ಯೋಜನೆಯಡಿ ಮರು ನೇಮಕಾತಿಗೆ ಅರ್ಹರಾಗಿರುವುದಿಲ್ಲ. ಪ್ರಸ್ತುತ ಏಜೆಂಟರಾಗಿರುವವರು ಸಹ ಈ ಯೋಜನೆಗೆ ಅರ್ಜಿ ಸಲ್ಲಿಸುವಂತಿಲ್ಲ.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ