Life lesson: ಮುಂಚೆ ಹಿರಿಯರೆಲ್ಲ ರಾತ್ರಿ ವೇಳೆ ಉಗುರು ಕತ್ತರಿಸಬಾರದು ಎಂದು ಹೇಳುತ್ತಿದ್ದರು. ಕಾರಣವೇನೆಂದು ಕೇಳಿದಾಗ, ರಾತ್ರಿ ಉಗುರು ಕತ್ತರಿಸಿದರೆ, ಮನೆಯಲ್ಲಿ ನಕಾರಾತ್ಮಕ ಶಕ್ತಿಗಳ ಪ್ರಭಾವ ಹೆಚ್ಚಾಗುತ್ತದೆ. ಇದರಿಂದ ಮನೆಯಲ್ಲಿ ನೆಮ್ಮದಿ ಹಾಳಾಗುತ್ತದೆ ಎಂದು ಕಾರಣ ಹೇಳುತ್ತಿದ್ದರು. ಆದರೆ ಇದರ ಹಿಂದೆ ಬೇರೇಯದ್ದೇ ಕಾರಣವಿದೆ. ಆ ಕಾರಣವೇನು ಅಂತಾ ತಿಳಿಯೋಣ ಬನ್ನಿ.
ಮುಂಚೆ ಮನೆಯಲ್ಲಿ ವಿದ್ಯುತ್ ಇರುತ್ತಿರಲಿಲ್ಲ. ಹಾಗಾಗಿ ಕತ್ತಲಲ್ಲಿ ಉಗುರು ಕತ್ತರಿಸಲು ಹೋಗಿ, ನಾವೆಲ್ಲಿ ಬೆರಳಿಗೆ ಗಾಯ ಮಾಡಿಕ“ಳ್ಳುತ್ತೇವೋ ಎಂಬ ಕಾರಣಕ್ಕೆ, ರಾತ್ರಿ ಉಗುರು ಕತ್ತರಿಸಬಾರದು ಎನ್ನುತ್ತಿದ್ದರು. ಅಲ್ಲದೇ, ಆ ಸಮಯದಲ್ಲಿ ಗಾಯಕ್ಕೆ ಹಾಕಲು ಸರಿಯಾದ ಮದ್ದು ಇರುತ್ತಿರಲಿಲ್ಲ. ಈಗಿನ ಹಾಗೆ ಔಷಧಿ ಡಬ್ಬಗಳು ಇರುತ್ತಿರಲಿಲ್ಲ. ಅಂಗಡಿ ಹೋಗಿ ಔಷಧಿ ತರುವ ವ್ಯವಸ್ಥೆ ಇರುತ್ತಿರಲಿಲ್ಲ.
ಹಾಗಾಗಿ ಆ ಸಣ್ಣ ಗಾಯ ಸಾಂಕ್ರಾಮಿಕ ರೋಗವಾಗಿ ಮಾರ್ಪಾಡಾಗುತ್ತಿತ್ತು. ಹಾಗಾಗಿ ರಾತ್ರಿ ವೇಳೆ ಉಗುರು ಕತ್ತರಿಸಬಾರದು ಅಂತಾ ಹೇಳಲಾಗಿತ್ತು. ಆದರೆ ಅದರ ಕಾರಣವನ್ನು ಹೇಳಿರಲಿಲ್ಲ. ಅಂದಿನ ಕಾಲದಲ್ಲಿ ವಿದ್ಯಾರಂತ ಸಂಖ್ಯೆ ಕಡಿಮೆ ಇದ್ದ ಕಾರಣ, ಅದು ಮೂಢನಂಬಿಕೆಯಾಗಿ ಬದಲಾಯಿತು.




