www.karnatakatv.net :ಗುಂಡ್ಲುಪೇಟೆ: ನಾನು ಸಿಎಂ ಸ್ಥಾನದ ಪರ್ಮನೆಂಟ್ ಆಕಾಂಕ್ಷಿ ನನಗೆ ರಾಜಕೀಯ ಜೀವನದಲ್ಲಿ ಇನ್ನೂ 15 ವರ್ಷಗಳ ಕಾಲಾವಕಾಶ ಇದೆ. ಬೊಮ್ಮಾಯಿ ನೇತೃತ್ವದ ಸರ್ಕಾರ ಸೇಫ್ ಅಂತ ಸಚಿವ ಉಮೇಶ್ ಕತ್ತಿ ಸ್ಪಷ್ಟಪಡಿಸಿದ್ದಾರೆ.
ಬಂಡೀಪುರದಲ್ಲಿ ಮಾತನಾಡಿದ ಸಚಿವ ಉಮೇಶ್ ಕತ್ತಿ, ನಾನು ಮೊದಲಿನಿಂದಲೂ ಸಿಎಂ ಸ್ಥಾನದ ಆಕಾಂಕ್ಷಿಯಾಗಿದ್ದೇನೆ ಈಗಲೂ ಸಹ ಆಸೆ ಇದೆ, ಮನುಷ್ಯ ಎಂದ್ಮೇಲೆ ಆಸೆ ಇಲ್ಲದಿದ್ದರೆ ಹೇಗೆ ನನ್ನ ರಾಜಕೀಯ ಜೀವನ ಇನ್ನು 15 ವರ್ಷಗಳ ಕಾಲ ಇದೆ ಅಲ್ಲಿಯವರೆಗೂ ನೋಡೋಣ ಅಂತ ಅರಣ್ಯ ಸಚಿವ ಉಮೇಶ್ ಕತ್ತಿ ಸಿಎಂ ಆಗೋ ಇಂಗಿತ ವ್ಯಕ್ತಪಡಿಸಿದ್ದಾರೆ.
ಇನ್ನು ಬಂಡೀಪುರ ಅರಣ್ಯ ವಲಯದ ಕಳ್ಳಭೇಟೆ ಸಿಬ್ಬಂದಿ ವರ್ಗಾವಣೆ ಕುರಿತು ಪ್ರತಿಕ್ರಿಯಿಸಿದ ಕತ್ತಿ, ನಮ್ಮ ಇಲಾಖೆಯಲ್ಲಿ ಕೆಲಸ ಮಾಡೋ ಸಿಬ್ಬಂದಿ ಪ್ರತಿಭಟನೆ ನಡೆಸಲಿ ಅದು ಅವರ ಹಕ್ಕು, ಆದ್ರೆ ಪ್ರತಿಭಟನೆಯಿಂದ ಯಾವುದೇ ಪ್ರಯೋಜನವಿಲ್ಲ ಅಂತ ಪರೋಕ್ಷವಾಗಿ ಇಲಾಖೆ ನಿರ್ದಾರಕ್ಕೆ ಬದ್ಧರಾಗಿರಿ ಅನ್ನೋ ಸಂದೇಶವನ್ನು ಕತ್ತಿ ರವಾನಿಸಿದರು.
ಇನ್ನು ಬಂಡೀಪುರ ಅಭಯಾರಣ್ಯದಲ್ಲಿ ರಾತ್ರಿ ವೇಳೆ ಸಂಚಾರ ನಿಷೇಧ ಕುರಿತಂತೆ ಮಾತನಾಡಿದ ಸಚಿವ ಕತ್ತಿ, ವನ್ಯಜೀವಿಗಳ ಸಂರಕ್ಷಣೆ ಹಿತದೃಷ್ಟಿಯಿಂದ ರಾತ್ರಿ ಸಂಚಾರ ಸಮಯದಲ್ಲಿ ಯಾವುದೇ ಬದಲಾವಣೆ ಮಾಡಲ್ಲ ಅಂತ ಸ್ಪಷ್ಟನೆ ನೀಡಿದ್ದಾರೆ.
ಇನ್ನು ಬಂಡೀಪುರ ವ್ಯಾಪ್ತಿಯಲ್ಲಿನ ಹಾಡಿ ಜನರ ಸಮಸ್ಯೆಗಳೊಂದಿಗೆ ಮುಕ್ತವಾಗಿ ಚರ್ಚಿಸಿ ಸರ್ಕಾರದ ಯೋಜನೆ ಮತ್ತು ಸವಲತ್ತುಗಳ ಕುರಿತ ಮಾಹಿತಿ ನೀಡಿ ಮೂಲಭೂತ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತೆ ಎಂದ್ರು. ಇನ್ನು ರಾಜ್ಯದ ಜನತೆಗೆ 5 ಕೆಜಿ ಅಕ್ಕಿಯನ್ನು ನೀಡಲಾಗುತ್ತಿದೆ ಇದು ಸರಿಯಾದ ಕ್ರಮ ಅಂತ ಪ್ರತಿಪಾದಿಸಿಕೊಂಡ ಕತ್ತಿ, ವಿಪಕ್ಷದ ನಾಯಕ ಸಿದ್ದರಾಮಯ್ಯ 10 ಕೆಜಿ ಅಕ್ಕಿ ನೀಡುತ್ತೇನೆ ಅಂತ ಸುಮ್ಮನೆ ಆಶ್ವಾಸನೆ ನೀಡುತ್ತಿದ್ದಾರೆ. ಆದರೆ ಸದ್ಯ ಈಗ ಅವರ ಪಕ್ಷ ಅಧಿಕಾರದಲ್ಲಿ ಇಲ್ಲ ಮುಂದಿನ ದಿನಗಳಲ್ಲೂ ಬಿಜೆಪಿ ಅಧಿಕಾರ ಹಿಡಿಯಲಿದೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನಾಯಕತ್ವದಲ್ಲಿ ಚುನಾವಣೆ ಎದುರಿಸುತ್ತೇವೆ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯುತ್ತೇವೆ ಅಂತ ಸಚಿವ ಕತ್ತಿ ವಿಶ್ವಾಸ ವ್ಯಕ್ತಪಡಿಸಿದರು.
ಪ್ರಸಾದ್, ಕರ್ನಾಟಕ ಟಿವಿ- ಗುಂಡ್ಲುಪೇಟೆ

