Sunday, July 6, 2025

Latest Posts

ಸ್ವಿಗ್ಗಿ, ಜೊಮೆಟೋದಲ್ಲಿ ಆಹಾರ ಬಂದಂತೆ, ಇನ್ಮುಂದೆ ಮದ್ಯವೂ ಮನೆ ಬಾಗಿಲಿಗೆ ಬರಲಿದೆ

- Advertisement -

National News: ಇಷ್ಟು ದಿನ ಜನ ಡಾಮಿನೋಸ್, ಸ್ವಿಗ್ಗಿ, ಬಿಗ್‌ಬಾಸ್ಕೇಟ್, ಜೋಮೆಟೋನಿಂದ ಬಿಸಿ ಬಿಸಿ ಆಹಾರವನ್ನು ಆರ್ಡರ್ ಮಾಡಿ ತರಿಸುತ್ತಿದ್ದರು. ಇದೀಗ ಎಣ್ಣೆ ಪ್ರಿಯರು ಕೂಡ, ಕುಡಿಯಬೇಕು ಅಂತಾ ಮನಸ್ಸಾದಾಗ, ಮನೆಗೇ ಮದ್ಯವನ್ನು ಆರ್ಡರ್ ಮಾಡಬಹುದು. ಆದರೆ ನಿಮಗೆ ಸುಮ್ಮನೇ ಮದ್ಯ ಸಿಗೋದಿಲ್ಲ. ಬದಲಾಗಿ ನೀವು ಅವರಿಗೆ ವಯಸ್ಸಿನ ಪ್ರಮಾಣಪತ್ರ ನೀಡಬೇಕು.

ಮದ್ಯ ಸರಬರಾಜಿಗೆ ಅಂತಲೇ, ಬೇರೆ ಆ್ಯಪ್ ಬಳಸಬೇಕಾಗುತ್ತದೆ. ಆ ಆ್ಯಪ್‌ನಲ್ಲಿ ನಿಮ್ಮ ವಯಸ್ಸು ಮತ್ತು ವಯಸ್ಸಿನ ಪ್ರಮಾಣಪತ್ರ ಅಪ್ಲೋಡ್ ಮಾಡಬೇಕು. ಆಗ ಮಾತ್ರ ಮದ್ಯ ಸರಬರಾಜು ಮಾಡಲಾಗುತ್ತದೆ. ಕೊರೋನಾ ಸಮಯದಲ್ಲಿ ಈ ರೀತಿ ಮದ್ಯ ಮಾರಾಟ ಮಾಡಿದಾಗ, ಉತ್ತಮ ಲಾಭ ಬಂದಿತ್ತು. ಏಕೆಂದರೆ, ಲಾಕ್‌ಡೌನ್ ಇದ್ದ ಸಂದರ್ಭದಲ್ಲಿ ಹೊರಗಡೆ ಹೋಗಲು ನಿರ್ಬಂಧವಿದ್ದ ಕಾರಣ, ಮದ್ಯಕ್ಕಾಗಿ ಹಲವು ಚಡಪಡಿಸುತ್ತಿದ್ದರು. ಆ ಕಾರಣಕ್ಕೆ ಮದ್ಯಕ್ಕೆ ಹೆಚ್ಚಿನ ಬೇಡಿಕೆ ಇತ್ತು.

ಇದೀಗ ಮತ್ತೆ ಮನೆಯ ಬಳಿಯೇ ಮದ್ಯ ಬರುವಂತೆ ಮಾಡುವ ಬಗ್ಗೆ ಚರ್ಚೆ ನಡೆದಿದೆ. ಎಲ್ಲದಕ್ಕೂ ಅನುಮತಿ ಸಿಕ್ಕರೆ, ಇನ್ಮುಂದೆ ಮನೆತನಕ ಮದ್ಯ ಸರಬರಾಜಾಗುತ್ತದೆ.

 

- Advertisement -

Latest Posts

Don't Miss