ಹೈದರಾಬಾದ್ ನಿಂದ ಬೆಂಗಳೂರಿಗೆ ಹೊರಟಿದ್ದ ಕಾವೇರಿ ಟ್ರಾವೆಲ್ಸ್ನ ವೋಲ್ವೊ ಬಸ್ ಬೆಂಕಿಗಾಹುತಿಯಾಗಿದ್ದು, ೨೦ಕ್ಕೂ ಹೆಚ್ಚು ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇನ್ನು ಆ ಬಸ್ ನಿಂದ ಬಚಾವ್ ಆಗಿ ಬಂದ ಪ್ರಯಾಣಿಕ ತನ್ನ ಪರಿಸ್ಥಿತಿ ಹೇಗಾಗಿತ್ತು. ಹೇಗೆ ಬಚಾವ್ ಆದ್ವಿ ಅನ್ನೋದನ್ನ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾನೆ. ಇವರ ಮಾತುಗಳು ಎಂತವರಿಗೂ ಸಾವನ್ನು ಕಣ್ಮುಂದೆ ತರಿಸುತ್ತದೆ.
ನಾವು ಹೈದರಾಬಾದ್ ನಿಂದ ಹೊರಟಿದ್ವಿ, ರಾತ್ರಿ ೨.೩೦ ರ ಸುಮಾರಿಗೆ ಬಸ್ ನಿಲ್ತು. ನಾನು ಎದ್ದೆ, ಬಸ್‌ಗೆ ಅಪಘಾತವಾಗಿತ್ತು. ಹೊರಗೆ ನೋಡಿದಾಗ ಬೆಂಕಿ ಹೊತ್ತಿಕೊಂಡಿತ್ತು. ಎದುರಿನಲ್ಲಿ, ಎಡಭಾಗದ ಸೀಟ್ ನಲ್ಲಿ ಕಾಣಾತ ಇತ್ತು. ಮೊದಲು ನನಗೆ ತೊತ್ತಾಗಲಿಲ್ಲ ಬೆಂಕಿ ಹೊತ್ತಿಕೊಂಡಿದ್ಯಾ? ಬೇರೆ ಏನಾದರೂ ಆಗಿದ್ಯಾ ಎಂದು. ಸ್ವಲ್ಪ ಹೊತ್ತಿನ ಬಳಿಕ ನನ್ನ ಅರಿವಿಗೆ ಬಂತು, ಬೆಂಕಿ ಹೊತ್ತಿಕೊಂಡಿದೆ ಎಂದು.
ಕೆಲವರ ಸದ್ದು ಕೇಳ್ತಾ ಇತ್ತು.. ಎಲ್ಲರೂ ಮಲಗಿದ್ವಿ, ಇಬ್ಬರು ಮೂವರು ಜನರು ಮಾತ್ರ ಎಚ್ಚರವಾಗಿದ್ವಿ, ಆಗ ನಾವು ಎಲ್ಲರನ್ನೂ ಎಚ್ಚರಗೊಳಸಿದ್ವಿ, ಬೆಂಕಿ ಬೆಂಕಿ ಎಂದು ಕೂಗಿಕೊಂಡ್ವಿ. ನಾವು ಮುಂದಿನಿಂದ ಹೊರಗೆ ಬರಲು ಯತ್ನಿಸಿದ್ವಿ, ಡ್ರೈವರ್ ಗಳು ಎಲ್ಲಿದ್ದಾರೆಂದು ಗೊತ್ತೇ ಆಗಲಿಲ್ಲ. ಆದ್ರೆ ಮುಖ್ಯ ಬಾಗಿಲು ಲಾಕ್ ಆಗಿತ್ತು. ಮಧ್ಯದಲ್ಲಿ ಇರುವ ಕಿಟಕಿಯನ್ನ ತೆರೆಯಲು ಯತ್ನಿಸಿದ್ವಿ, ಆದ್ರೆ ಅದು ಬಂದ್ ಆಗಿತ್ತು. ಹಿಂದೆ ಎಮರ್ಜೆನ್ಸಿ ಕಿಟಕಿ ಇತ್ತು. ಬಾಗಿಲು ಇರಲಿಲ್ಲ, ಹ್ಯಾಂಡಲ್ ರೀತಿ ಏನೂ ಇರಲಿಲ್ಲ. ನಾರ್ಮಲ್ ವಿಂಡೋ ಇತ್ತು ನಾವು ಅದನ್ನ ಮುರಿದು, ಕೈಯಿಂದ ಗುದ್ವಿ, ಕಾಲಿನಿಂದ ಒದ್ದು, ಈ ರೀತಿಯಾಗಿ ಕಿಟಕಿ ಓಪನ್ ಮಾಡಿದ್ವಿ.
ಅಷ್ಟೊತ್ತಿಗೆ ತುಂಬಾ ಹೊಗೆ ಬರಲು ಪ್ರಾರಂಭಿಸಿತ್ತು. ಮುಂದೆ ಬೆಂಕಿ ಹರಡುತ್ತಲೇ ಇತ್ತು. ಕಿಟಕಿಯನ್ನ ಮುರಿದು ನಾವು ಅಲ್ಲಿಂದ ಜಂಪ್ ಮಾಡಿದ್ವಿ. ತುಂಬಾ ಎತ್ತರವಾಗಿತ್ತು ಕಿಟಕಿ, ಹೀಗೆ ಮೇಲಿಂದ ಜಿಗಿದ್ವಿ, ಮೇಲಿಂದ ಜಿಗಿದ ಮೇಲೂ, ಕೆಲವರು ಪ್ರಜ್ಹೆ ತಪ್ಪಿದರು. ಅವರನ್ನ ಎಳೆದು ನಾವು ಸೈಡಿಗೆ ಕರೆದುಕೊಂಡು ಬಂದ್ವಿ. ಹೊಗೆ ಬರ್ತಾ ಇತ್ತು. ಬೆಂಕಿ ಹೆಚ್ಚಾಗುತ್ತಲೇ ಇತ್ತು. ಸುಮಾರು ೧೦ ರಿಂದ ೧೧ ಜನರು ಹಿಂದಿನಿಂದ ಹೊರಗೆ ಬಂದ್ವಿ. ನಾಲ್ಕೈದು ಜನ ಸೈಡ್ ನಿಂದ ಜಿಗಿದಿದ್ರು. ಡ್ರೈವರ್ ಕಡೆಯ ವಿಂಡೋ ಭಾಗದಿಂದ ಹೊರಗೆ ಬಂದ್ವಿ, ಕೆಲವು ಚಾಲಕ ಕೂರ್ತಿದ್ದ ಕಿಟಕಿ ಒಡೆದು ಬಂದ್ರು. ಡ್ರೈವರ್ ಕೂರ್ತಿದ್ದ ಬಾಗಿಲು ಸಹ ಲಾಕ್ ಆಗಿತ್ತು. ಕಿಟಕಿಯನ್ನು ಮುರಿದು ಹೊರಗೆ ಬಂದ್ರು ಎಂದು ಬಚಾವ್ ಆದ ಪ್ರಯಾಣಿಕ ತನ್ನ ಘೋರ ಅನುಭವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾನೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ

