Wednesday, August 20, 2025

Latest Posts

ಲಿವ್-ಇನ್? ಮದುವೆನಾ? ಕಂಗನಾ ರನೌತ್ ಚಾಯ್ಸ್ ಯಾವ್ದು?

- Advertisement -

ನಟಿ ಕಂಗನಾ ರನೌತ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಬಾಲಿವುಡ್‌ಗೆ ಮಾತ್ರ ಸೀಮಿತವಾಗದೆ, ಅವರು ರಾಜಕೀಯ ಕ್ಷೇತ್ರಕ್ಕೂ ಪಾದಾರ್ಪಣೆ ಮಾಡಿದ್ದಾರೆ. ಬಿಜೆಪಿ ಸಂಸದೆ ಮತ್ತು ನಟಿ ಕಂಗನಾ ರನೌತ್‌ ಅವರು ಅನೇಕ ಚಿತ್ರಗಳಲ್ಲಿ ವಿವಿಧ ರೀತಿಯ ಪಾತ್ರಗಳನ್ನು ನಿರ್ವಹಿಸುವ ಮೂಲಕ ತಮ್ಮನ್ನು ತಾವು ಸಾಬೀತುಪಡಿಸಿಕೊಂಡಿದ್ದಾರೆ. ಕಂಗನಾ ತಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನದ ಬಗ್ಗೆ ಯಾವಾಗಲೂ ಸುದ್ದಿಯಲ್ಲಿರುತ್ತಾರೆ.

ಇದರ ಮಧ್ಯೆ, ಇತ್ತೀಚಿನ ಸಂದರ್ಶನವೊಂದರಲ್ಲಿ, ಕಂಗನಾ ತಮ್ಮ ವೈಯಕ್ತಿಕ ಜೀವನದ ಬಗ್ಗೆ ದೊಡ್ಡ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆ ವೈರಲ್ ಆಗಿದೆ. ಸಂದರ್ಶನದಲ್ಲಿ, ಕಂಗನಾ ತಮ್ಮ ಡೇಟಿಂಗ್ ಜೀವನ ಮತ್ತು ಲಿವ್-ಇನ್ ಸಂಬಂಧದ ಬಗ್ಗೆ ಮಾತನಾಡಿದ್ದಾರೆ. ಸಂದರ್ಶನದಲ್ಲಿ ಕಂಗನಾ ಅವರಿಗೆ ಮದುವೆಯ ಬಗ್ಗೆ ಕೇಳಲಾಯಿತು. ಇದಕ್ಕೆ ಕಂಗನಾ, ನಾನು ಇನ್ನೂ ಮದುವೆಯಾಗಿಲ್ಲ ಎಂದು ನಿಮಗೆ ಹೇಗೆ ಗೊತ್ತು. ನೀವು ನನ್ನನ್ನು ತಿಳಿದಿದ್ದೀರಿ ಎಂದು ಭಾವಿಸಬೇಡಿ… ಎಂದು ಹೇಳಿದರು. ಆಗ ಕಂಗನಾ ನಗಲು ಪ್ರಾರಂಭಿಸಿದರು. ಇದನ್ನು ಅವರು ಫನ್ಗಾಗಿ ಹೇಳಿದ್ದರು.

ಮದುವೆ ನನ್ನ ಲಿಸ್ಟ್ನಲ್ಲಿ ಇದೆ. ಈಗಾಗಲೇ ತಡವಾಗಿದೆ ಎಂದು ನನಗೆ ತಿಳಿದಿದೆ. ಆದರೆ ನಾನು ಖಂಡಿತವಾಗಿಯೂ ಮದುವೆಯಾಗಲಿದ್ದೇನೆ ಎಂದು ಕಂಗನಾ ಹೇಳಿದರು. ಅಷ್ಟೇ ಅಲ್ಲ, ಮದುವೆಯಾಗಲು ಕುಟುಂಬದಿಂದ ಸಾಕಷ್ಟು ಒತ್ತಡವಿದೆ, ಆದರೆ ಎಲ್ಲವೂ ಆಗಲು ಒಂದು ನಿಗದಿತ ಸಮಯವಿದೆ ಎನ್ನುತ್ತಾರೆ ಅವರು.

ಕಂಗನಾ ಕೂಡ ಲಿವ್-ಇನ್ ಸಂಬಂಧಗಳ ಬಗ್ಗೆ ದೊಡ್ಡ ಹೇಳಿಕೆ ನೀಡಿದ್ದಾರೆ. ಮದುವೆ ಎಂಬುದು ಜೀವನದಲ್ಲಿ ನಡೆಯುವ ಒಂದು ಒಳ್ಳೆಯ ವಿಷಯ. ಆದರೆ ಇಂದಿನ ಪೀಳಿಗೆ ಲಿವ್-ಇನ್ ಸಂಬಂಧಗಳಲ್ಲಿ ಹೆಚ್ಚು ನಂಬಿಕೆ ಇಡುತ್ತದೆ. ಲಿವ್-ಇನ್ ಸಂಬಂಧಗಳು ಮಹಿಳೆಯರ ಕಲ್ಯಾಣಕ್ಕೆ ಒಳ್ಳೆಯದಲ್ಲ.

ನಾನು ಎಂದಿಗೂ ಲಿವ್-ಇನ್ ಸಂಬಂಧದಲ್ಲಿ ಇರಲಿಲ್ಲ ಎಂದಿದ್ದಾರೆ. ಲಿವ್-ಇನ್ ಸಂಬಂಧದಲ್ಲಿರುವ ಯುವತಿಯರು ಗರ್ಭಿಣಿಯಾಗುತ್ತಾರೆ, ನಂತರ ಗರ್ಭಪಾತ ಮಾಡಿಸಿಕೊಳ್ಳಬೇಕಾಗುತ್ತದೆ. ಲಿವ್-ಇನ್ ಸಂಬಂಧಗಳು ಮಹಿಳೆಯರಿಗೆ ಸೂಕ್ತವಲ್ಲ ಎಂದು ನಾನು ಭಾವಿಸುತ್ತೇನೆ’ ಎಂದು ಹೇಳಿದ್ದಾರೆ.

 

ವರದಿ:ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss