ಧಾರವಾಡ:ಸಾಲಗಾರರ ಕಿರುಕುಳವನ್ನು ತಾಳಲಾರದೆ ಹಾಗೂ ಬಡ್ಡಿ ದಂಧೆಗೆ ಸಿಲುಕಿ ಧಾರವಾಡದಲ್ಲಿ ತನಗಾದ ಅನ್ಯಾಯದ ಬಗ್ಗೆ ವೀಡಿಯೋ ಮಾಡಿ ವ್ಯಕ್ತಿಯೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಧಾರವಾಡ ನಗರದ ಕೆಲಗೇರಿ ಬಡಾವಣೆಯ ಚೈತನ್ಯ ನಗರದಲ್ಲಿರುವ ನಿಂಗರಾಜ್ ಸಿದ್ದಪ್ಪ ಎನ್ನುವವರು ತನ್ನ ಮನೆಯ ದಾಖಲೆಗಳನ್ನು ಕರೆಪ್ಪ ಗುಳೆನವರ ಮುಖಾಂತರ ಆನಂದ್ ಪಾಸ್ತೆ ಎನ್ನುವವರ ಬಳಿ ಅಡಮಾನವಾಗಿ ಇಟ್ಟು ನಿಂಗರಾಜ್ ಅವರು ಸಾಲವನ್ನು 2018 ರಲ್ಲಿ10 ಲಕ್ಷ ಸಾಲ ಪಡೆದುಕೊಂಡಿರುತ್ತಾರೆ,
ಆದರೆ ಕರೆಪ್ಪ ಗುಳೆ ಎನ್ನುವವರ ಹೆಸರಲ್ಲಿ ಮನೆ ಖರೀದಿ ಪತ್ರ ಇರುತ್ತದೆ. ಕಳೆದ 2018 ರಿಂದ ಇಲ್ಲಿಯವರೆಗೂ 10 ಲಕ್ಷಕ್ಕೆ 18 ಲಕ್ಷ ಹಣ ತುಂಬಿಸಿಕೊಂಡಿರುತ್ತಾರೆ.ಖರೀದಿ ಪತ್ರ ಇಟ್ಟುಕೊಂಡಿದ್ದ ಕರೆಪ್ಪ ಪದೇ ಪದೇ ಬಡ್ಡಿಗಾಗಿ ಪೀಡಿಸುತ್ತಿದ್ದನು ಒಂದು ಅಳಲನ್ನು ತೋಡಿಕೊಂಡಿದ್ದಾನೆ.
ನಂತರ ನಿಂಗರಾಜ್ ಒಂದು ವಿಡಿಯೋವನ್ನು ಮಾಡಿ ಸಾಲಗಾರರ ಬಾಧೆ ತಾಳಲಾರದೆ ನನಗೆ ಮೋಸ ಮಾಡಿದ್ದಾರೆ ಬಡ್ಡಿ ನೀಡುವಂತೆ ಪೀಡಿಸುತ್ತಿದ್ದಾರೆ ನನಗೆ ಸಾಲಗಾರರ ಕಾಟ ತಾಳಲಾಗುತ್ತಿಲ್ಲ ಎಂದು ಅಳಲನ್ನು ತೋಡಿಕೊಂಡು ಮೋಸ ಮಾಡಿದವರ ಹೆಸರನ್ನು ಹೇಳಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ
ಈ ಘಟನೆ ಧಾರವಾಡ ಉಪನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
Shobha karandlaje: ನಿಮ್ಮ ಮೊದಲ ಕ್ಯಾಬಿನೆಟ್ ಯಾವಾಗ.? ನೀವು ಕೊಡೋದು ಯಾವಾಗ
Udyoga mela: ಉದ್ಯೋಗ ಮೇಳಕ್ಕೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಚಾಲನೆ: ದೇಶದ ಪ್ರಗತಿಗೆ ಕೈ ಜೋಡಿಸಿ