- Advertisement -
Hubli News: ಹುಬ್ಬಳ್ಳಿ: ಕೊಪ್ಪಳ ಡಿಸ್ಟ್ರಿಕ್ಟ್ ಇಂಡಸ್ಟ್ರಿಯಲ್ & ಕಮರ್ಷಿಯಲ್ ಟ್ಯಾಕ್ಸ್ ಉಪ ನಿರ್ದೇಶಕ ಎಸ್ .ಎಂ ಚವ್ಹಾಣ ಮೇಲೆ ಲೋಕಾಯುಕ್ತ ದಾಳಿ ನಡೆಸಿದೆ. ಹುಬ್ಬಳ್ಳಿಯ ವಿದ್ಯಾನಗರದ ದತ್ತನಗರದಲ್ಲಿನ ಇವರ ನಿವಾಸದಲ್ಲಿ ಅಪಾರ ಪ್ರಮಾಣ ಬಂಗಾರ ,ಬೆಳ್ಳಿ ಪತ್ತೆಯಾಗಿದೆ.
ನಾಲ್ಕು ಲಕ್ಷ ನಗದು, ಅಪಾರ ಪ್ರಮಾಣದ ಬೆಳ್ಳಿ ,ಬಂಗಾರ, ವಿವಿಧ ಕಡೆ ಇರುವ 12 ಸೈಟ್, ಮೂರು ಮನೆ, ಆರು ಎಕರೆ ಜಮೀನನ ದಾಖಲೆ ಸಹ ಲಭ್ಯವಾಗಿದೆ. ಹಾಗಾಗಿ ಲೋಕಾಯುಕ್ತ ಪೋಲೀಸರು ದಾಳಿ ಮುಂದುವರಿಸಿದ್ದಾರೆ.
ಇನ್ನು ಅಪಾರ ಪ್ರಮಾಣದ ನಗದು ಪತ್ತೆಯಾದ ಕಾರಣಕ್ಕೆ, ಹಣ ಎಣಿಕೆಯ ಮಷಿನ್ ತರಲು ನಿರ್ಧರಿಸಿದ್ದಾರೆ. ಈಗಾಗಲೇ 1 ಮಿಷನ್ ಇದ್ದು, ಇನ್ನ“ಂದು ಮಿಷನ್ ತರುವ ಯೋಚನೆಯಲ್ಲಿದ್ದಾರೆ. ಇನ್ನು ಅಂದಾಜಿನ ಪ್ರಕಾರ ಸಂಜೆಯತನಕವೂ ಹಣ ಎಣಿಕೆ ಕಾರ್ಯ ನಡೆಯುವ ಎಲ್ಲ ಸಾಧ್ಯತೆಗಳಿದೆ.
- Advertisement -