- Advertisement -
Lokayukta: ಕುಂದಾಣ ಗ್ರಾಮ ಪಂಚಾಯಿತಿ ಪಿಡಿಓ ಆಗಿ ಕೆಲಸ ಮಾಡುತ್ತಿದ್ದ ಪದ್ಮನಾಭ್ ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದಿದ್ದಾರೆ. ವಿದ್ಯುತ್ ಸಂಪರ್ಕ ಕಲ್ಪಿಸಲು ಕೇಬಲ್ ಅಳವಡಿಸುವ ಸಲುವಾಗಿ 5 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಕಾಮಗಾರಿಗೆ ಅನುಮತಿ ನೀಡಲು 3 ಲಕ್ಷ ರೂಪಾಯಿ ಮೊದಲೇ ಪಡೆದಿದ್ದರು. 2 ಲಕ್ಷ ರೂಪಾಯಿ ಕೊಡುವುದು ಬಾಕಿ ಇತ್ತು.
ಈ ಕುರಿತು ಲೋಕಾಯುಕ್ತ ಕಚೇರಿಗೆ ಮಲ್ಲಿಕಾರ್ಜುನ್ ದೂರು ನೀಡಿದ್ದರು. ಉಳಿದ 2 ಲಕ್ಷ ರೂಪಾಯಿ ಬಾಕಿ ನೀಡುವಾಗ, ಪದ್ಮನಾಭ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ನೆಲಮಂಗಲದಲ್ಲಿ ಸರ್ಕಾರದ ಹಣ ದುರ್ಬಳಕೆ ಮಾಡಿದ್ದಾರೆಂದು ಈ ಮೊದಲೂ ಕೂಡ ಲೋಕಾಯುಕ್ತ, ಪದ್ಮನಾಭ್ ಮೇಲೆ ದಾಳಿ ನಡೆಸಿತ್ತು.
- Advertisement -