ಬೆಂಗಳೂರು: ಲೋಕಾಯುಕ್ತ ಅಧಿಕಾರಿಗಳು ಕೆಲ ಭ್ರಷ್ಟ ಸರ್ಕಾರಿ ಅಧಿಕಾರಿಗಳಿಗೆ ಶಾಕ್ ಕೊಟ್ಟಿದ್ದಾರೆ. ಹೌದು…ಇಂದು(ಸೋಮವಾರ) ಬೆಳ್ಳಂಬೆಳಗ್ಗೆ ಕರ್ನಾಟಕದಾದ್ಯಂತ ವಿವಿಧ ಇಲಾಖೆಗಳ ಸರ್ಕಾರಿ ಅಧಿಕಾರಿಗಳ ಮನೆ ಹಾಗೂ ಕಚೇರಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಆದಾಯಕ್ಕಿಂತ ಹೆಚ್ಚು ಆಸ್ತಿ ಹಾಗೂ ಭ್ರಷ್ಟಾಚಾರ ಆರೋಪದ ಮೇಲೆ ಲೋಕಾಯುಕ್ತ ದಾಳಿ ಮಾಡಿದೆ.
ಒಟ್ಟು 250 ಲೋಕಾಯುಕ್ತ ಅಧಿಕಾರಿಗಳು ಮತ್ತು ಸಿಬ್ಬಂದಿ ರಾಜ್ಯಾದ್ಯಂತ ವಿವಿಧ ಇಲಾಖೆಗಳ 17 ಅಧಿಕಾರಿಗಳ ಮನೆ, ಕಚೇರಿ ಸೇರಿದಂತೆ ಏಕಕಾಲದಲ್ಲಿ 75 ಕಡೆ ದಾಳಿ ಮಾಡಿದ್ದು, ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ. ಹಾಗಾದ್ರೆ, ಯಾವೆಲ್ಲಾ ಇಲಾಖೆಯ ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿಯಾಗಿದೆ ಎನ್ನುವ ಮಾಹಿತಿ ಈ ಕೆಳಗಿನಂತಿದೆ.
ಯಾವೆಲ್ಲಾ ಇಲಾಖೆ ಅಧಿಕಾರಿಗಳ ಮೇಲೆ ದಾಳಿ?
1)ತಿಪ್ಪಣ್ಣಗೌಡ ತಂದೆ ಸೋಮಣ್ಣಗೌಡ ಅನ್ನದಾನಿ ಕಾರ್ಯನಿರ್ವಾಹಕ ಅಭಿಯಂತರರು, ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತ, ನಾರಾಯಣಪುರ ಬಲದಂಡೆ ಕಾಲುವೆ ಡಿವಿ-6, ಚಿಕ್ಕಹೊನ್ನಿ ಕ್ಯಾಂಪ್, ದೇವದುರ್ಗ.
2)ಬಸವರಾಜ ತಂದೆ ಶ್ರೀಶೈಲ ಡಾಂಗೆ ವಲಯ ಅರಣ್ಯಾಧಿಕಾರಿ, ಬೀದರ್
3) ಮಹಾಂತೇಶ ತಂದೆ ಸದಾನಂದ ನ್ಯಾಮತಿ ವಲಯ ಅರಣ್ಯಾಧಿಕಾರಿ, ಹಾವೇರಿ ಉಪ ವಿಭಾಗ, ಹಾವೇರಿ.
4)ಪರಮೇಶಪ್ಪ ತಂದೆ ಹನುಮಂತಪ್ಪ ಪೆಲ್ನಾವರ ವಲಯ ಅರಣ್ಯಾಧಿಕಾರಿ, ಜಲಾನಯನ ಅಭಿವೃದ್ಧಿ ವಿಭಾಗ, ಕೃಷಿ ಘಟಕ, ಹಾವೇರಿ.
5)ಎಂ.ಪಿ. ನಾಗೇಂದ್ರ ನಾಯ್ಕ್ ತಂದೆ ಪಾಪನಾಯಕ್, ಎಸಿಎಫ್, ಸಾಮಾಜಿಕ ಅರಣ್ಯ ಕಛೇರಿ, ಚಿತ್ರದುರ್ಗ.
7)ಬಾಲರಾಜು N.P ತಂದೆ ಪುಟ್ಟಸ್ವಾಮಿ ಮುಖ್ಯ ಇಂಜಿನಿಯರ್, ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿ, ಬೆಂಗಳೂರು.
8)ಕೆ.ಮಂಜುನಾಥ್ ತಂದೆ ಕೆ.ಬಸಣ್ಣ ಕಂದಾಯ ನಿರೀಕ್ಷಕರು, ಬಳ್ಳಾರಿ
9) ಶರಣಬಸಪ್ಪ ಪಟ್ಟೇಡ್ ನಿರ್ದೇಶಕರು, ಯೋಜನೆ, ಕ್ಯಾಶ್ಯೂಟೆಕ್ ನಿರ್ಮಿತಿ ಕೇಂದ್ರ, ಶಕ್ತಿ ನಗರ, ರಾಯಚೂರು.
10) ಎಂ.ನಾಗೇಂದ್ರಪ್ಪ ತಂದೆ ಮಾರಯ್ಯ, ಸಹಾಯಕ ಇಂಜಿನಿಯರ್, ಪಂಚಾಯತ್ರಾಜ್ ಇಂಜಿನಿಯರಿಂಗ್ ಉಪವಿಭಾಗ, ಶಿರಾ, ತುಮಕೂರು.
11)ವಿ.ಕೃಷ್ಣಮೂರ್ತಿ ತಂದೆ ದಿವಂಗತ ವೆಂಕಟಪ್ಪ, ಸಹಾಯಕ ನಿರ್ದೇಶಕ, ಗ್ರೇಡ್-1, ಸಮಾಜ ಕಲ್ಯಾಣ ಇಲಾಖೆ, ಚಿತ್ರದುರ್ಗ
12) ಅಪ್ಪಾಸಾಹೇಬ ಸಿದ್ಲಿಂಗ್ ಕಾಂಬಳೆ ಜಂಟಿ ನಿರ್ದೇಶಕರು, ನಗರ ಯೋಜನೆ, ಗುಲ್ಬರ್ಗ.
13)ಚಂದ್ರಪ್ಪ ಕೆ.ವಿ ARO, ಹೆಗ್ಗನಹಳ್ಳಿ, BBMP, ಬೆಂಗಳೂರು.
14) ಹೆಚ್.ರಾಜೇಶ್ ತಂದೆ ಹಮ್ಮಣ್ಣ ನಾಯಕ್, ಬೇಲೇಕೇರಿ. ಸಹಾಯಕ ಆಯುಕ್ತರು, ವಾಣಿಜ್ಯ ತೆರಿಗೆ ಇಲಾಖೆ. ಉಡುಪಿ.
15) ನಾರಾಯಣ ಹೆಚ್ ಇ ತಂದೆ ಈರೇಗೌಡ ಜೂನಿಯರ್ ಇಂಜಿನಿಯರ್, ಕೆಪಿಟಿಸಿಎಲ್, ಗೊರೂರು, ಹಾಸನ.
16) ಮಹಾದೇವ ತಂದೆ ಸಣ್ಣಪ್ಪ ಬೀರದಾರ ಪಾಟೀಲ್. ಎಇಇ, ಪಂಚಾಯತ್ ರಾಜ್ ಉಪವಿಭಾಗ, ಬೆಳಗಾವಿ.
17) ಶಶಿಕುಮಾರ್ ಟಿ ಎಂ ತಂದೆ ಮಾದಯ್ಯ ಟಿ ಸಿ ಎಕ್ಸಿಕ್ಯೂಟಿವ್ ಇಂಜಿನಿಯರ್, ಟೌನ್ ಪ್ಲಾನಿಂಗ್, ಕೆಐಎಡಿಬಿ ಬೆಂಗಳೂರು.
18) ಶ್ರೀನಿವಾಸ್ ಎಸ್.ಆರ್ ತಂದೆ ರಾಮಣ್ಣ ಡಿ. ಬಾಯ್ಲರ್ ಫಾರ್ ಉಪನಿರ್ದೇಶಕರು, ದಾವಣಗೆರೆ.