Hassan News: ಲಂಚ ಕೊಡದೆ ಸಾರ್ವಜನಿಕರ ಕೆಲಸ ಸುಲಭವಾಗಿ ದೊರೆಯುವುದಿಲ್ಲ ಎನ್ನುವುದು ಸಾರ್ವಜನಿಕರ ಮಾತು. ಆ ಮಾತು ನಿಜವೇನೋ ಎಂಬಂತೆ ದಿನದಿಂದ ದಿನಕ್ಕೆ ಲಂಚಕೋರರು ಬಲೆಗೆ ಬೀಳುತ್ತಿರುವುದು ಸರ್ವೇ ಸಾಮಾನ್ಯವಾಗುತ್ತಿದೆ. ಹಾಸನದಲ್ಲೂ ಇಂತಹದ್ದೊಂದು ನಾಚಿಕೆಗೇಡಿನ ಕಾರ್ಯ ಬೆಳಕಿಗೆ ಬಂದಿದೆ.
ಹೌದು ಅಧಿಕಾರಿಯೊಬ್ಬ ಕೆಲಸ ಮಾಡಿಸಿಕೊಡುವ ಸಲುವಾಗಿ ಲಂಚ ಪಡೆದುಕೊಳ್ಳುತ್ತಿರುವ ವೇಳೆ ಲೋಕಾಯುಕ್ತ ಬಲೆಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ.
ಹಾಸನದಲ್ಲಿ ಲೋಕಾಯುಕ್ತ ಬಾಲುಗೌಡ ಮತ್ತು ಶಿಲ್ಪಾ ನೇತೃತ್ವದ ತಂಡ ಕಾರ್ಯಚರಿಸುತ್ತಿದ್ದ ವೇಳೆ ನಗರಸಭೆ ಅಧಿಕಾರಿ ದುಬ್ಬೇಗೌಡ ಅವರನ್ನು ಬಲೆ ಬೀಸಿ ಬಂದಿಸಿದ್ದಾರೆ. ಹೌದು ಈ-ಸ್ವತ್ತು ಮಾಡಿಸಿಕೊಡುವ ಸಲುವಾಗಿ ಅಧಿಕಾರಿ ಲಂಚ ಸ್ವೀಕರಿಸುತ್ತಿದ್ದಾರೆ ಎಂಬ ಮಾಹಿತಿ ಪಡೆದ ಲೋಕಾಯುಕ್ತ ಅಧಿಕಾರಿಗಳು ಟ್ರ್ಯಾಪ್ ಮಾಡಿ ನಗರ ಸಭೆ ಅಧಿಕಾರಿಯನ್ನು ಬಂಧಿಸಿದ್ದಾರೆ. ಹಾಸನದ ವಾರ್ಡ್ ಅಧಿಕಾರಿ ದುಬ್ಬೇಗೌಡ ಈ-ಸ್ವತ್ತು ಮಾಡಿಕೊಡುವ ವಿಚಾರವಾಗಿ 24 ಸಾವಿರ ದಂಡ ಪಡೆದುಕೊಳ್ಳುತಿದ್ದ ವೇಳೆ ಲೋಕಾಯುಕ್ತರು ರೆಡ್ ಹ್ಯಾಂಡ್ ಆಗಿ ಬಂಧಿಸಿದ್ದಾರೆ.
ನಿಗಮ ಮಂಡಳಿಯ ಗಾದಿಗಾಗಿ ನಡೆಯುತ್ತಿದೆ ಬಿಗ್ ಫೈಟ್: ಟಿಕೆಟ್ ತಪ್ಪಿದವರ ಸರ್ಕಸ್..!