Friday, November 22, 2024

Latest Posts

Preetham Gowda : ಲೋಕಸಭಾ ಚುನಾವಣೆ ಕುರಿತು ಮಾತನಾಡಿದ ಮಾಜಿ ಶಾಸಕ ಪ್ರೀತಂ ಗೌಡ..!

- Advertisement -

ಹಾಸನ: ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ – ಬಿಜೆಪಿ ಮೈತ್ರಿ ವಿಚಾರವಾಗಿ ಮಾಜಿ ಶಾಸಕ ಪ್ರೀತಂ ಗೌಡ ಅವರು ಮಾಧ್ಯಮದವರ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.

ಹಾಸನದಲ್ಲಿ ಬಿಜೆಪಿಯಿಂದ ಕ್ಯಾಂಡಿಡೇಟ್ ಹಾಕುತ್ತೇವೆ. ಮುಂದಿನ ದಿನಗಳಲ್ಲಿ ಬಹುಶಃ ಜನತಾದಳದವರು ಸಪೋರ್ಟ್ ಮಾಡೋ ದಿನ ಬರಬಹುದು ಈಗಲೇ ನಾವು ಏನು ಹೇಳುವುದಿಲ್ಲ ಅದು ಅವರಿಗೆ ಬಿಟ್ಟ ವಿಚಾರ ಎಂದರು.

ಬಿಜೆಪಿ ಹಾಸನ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡೋದು ಹಾಗೂ ಇವತ್ತಿನ ವಾತಾವರಣದಲ್ಲಿ ಒಳಿತು ಅನ್ನೋದು ಕಾರ್ಯಕರ್ತರ‌ ಭಾವನೆಯ ಮೇಲೆ ನಿಂತಿದೆ. ಅವರೇನಾದ್ರೂ ಅಲೆಯನ್ಸ್ ಗೆ ಒಪ್ಪಿಕೊಂಡ್ರೆ ಬಹಶಃ ಜೆಡಿಎಸ್ ಬೇರೆ ಕಡೆ ಸೀಟ್ ಕೇಳಬಹುದು. ಹಾಸನ ಕ್ಷೇತ್ರ ಭಾರತೀಯ ಜನತಾ ಪಾರ್ಟಿಗೆ ಪೂರಕವಾಗಿರೋ ಕಾರಣಕ್ಕೆ ಸೀಟ್ ಬಿಟ್ಟು ಕೊಡುವಂತಹ ಸಾಧ್ಯತೆ ಹೆಚ್ಚಿರುತ್ತದೆ ಎಂದರು.

ಹಾಲಿ ಜೆಡಿಎಸ್ ಸಂಸದರಿರೋ ಕ್ಷೇತ್ರದಲ್ಲಿ ಬಿಜೆಪಿಗೆ ಟಿಕೆಟ್ ಬಿಟ್ಟು ಕೊಡೋ ಸಾಧ್ಯತೆ ಇದ್ಯಾ ಎಂಬ ಪ್ರಶ್ನೆಗೆ ಉತ್ತರಿಸಿದಂತಹ ಪ್ರೀತಂ ಗೌಡ, ಪೂರಕವಾದ ವಾತಾವರಣ ಇರೋದು ಭಾರತೀಯ ಜನತಾ ಪಾರ್ಟಿಗೆ ಮಾತ್ರ, ಹಾಗಾಗಿ ಅದ್ರಲ್ಲಿ ಬದಲಾವಣೆಗೆ ಆಗಬಹುದು ಎಂಬ ಮಾಹಿತಿ ಹೇಳಿದ್ದೇನೆ. ಗೆದ್ದಿರೋ ಕ್ಷೇತ್ರ ವಾಪಸ್ಸು ಗೆಲ್ಲಬೇಕು ಅಂತೇನಿಲ್ಲ. ಹಿಂದೆ ನಾನು 2018 ರಲ್ಲಿ ಗೆದ್ದಿದ್ದೆ, 2023 ರಲ್ಲಿ ಜನ ಬೇರೆಯವರಿಗೆ ಅವಕಾಶ ಕೊಟ್ಟಿದ್ದಾರೆ. ಅದರರ್ಥ ಯಾರು ಇರ್ತಾರೆ ಅವರಿಗೆ ಕೊಡ್ತಾರೆ ಅನ್ನೋ ರೀತಿಯಲ್ಲಿ ಆಗಲ್ಲ. ನನಗೇನು ಈಗ ಜನ ಅವಕಾಶ ಕೊಟ್ಟಿಲ್ವಲ್ಲ. ಬಿಟ್ಟು ಕೊಡೋದಕ್ಕೆ ಗೆಲುವು ಮಾನದಂಡ ಆಗಿರೋದ್ರಿಂದ ಬಿಜೆಪಿ ನಿಂತರೆ ಗೆಲ್ತಾರೆ ಅನ್ನೋ ಅವಕಾಶ ಇದ್ದಾಗ ಒಂದೊಂದು ಸೀಟು ಮುಖ್ಯ ಆಗುತ್ತೆ ಹಾಗಾಗಿ ಬಿಜೆಪಿಗೆ ಒಳ್ಳೆಯ ಅವಕಾಶವಿದೆ ಎಂದು ಉತ್ತರಿಸಿದರು.

Satish Jarkiholi: ತಾಂತ್ರಿಕ ದೋಷ : ಲಿಫ್ಟ್ ನಲ್ಲಿ ಸಿಲುಕಿದ್ದ ಸತೀಶ್ ಜಾರಕಿಹೊಳಿ ಪುತ್ರ

 

- Advertisement -

Latest Posts

Don't Miss