Sunday, April 20, 2025

Latest Posts

ನಿಮಗೆ ತುಂಬ ಕೋಪ ಬರತ್ತಾ..?ನಿಮ್ಮದು ಸಿಡುಕುವ ಗುಣಾನಾ..? ಹಾಗಾದ್ರೆ ಈ ಕಥೆ ಓದಿ..

- Advertisement -

ಯಾರಿಗೆ ಸಿಟ್ಟು ಜಾಸ್ತಿ ಇರತ್ತೋ ಅವರು ಜೀವನದಲ್ಲಿ ಮುಂದೆ ಬರೋಕ್ಕೆ ಸಾಧ್ಯಾನೇ ಇಲ್ಲಾ… ಆದ್ರೂ ಕೋಪಿಷ್ಠರು ಜೀವನದಲ್ಲಿ ಮುಂದೆ ಬಂದಿದ್ರೆ, ಅದು ಅವರ ಕೆಲ ಸಮಯಯದ ತಾಳ್ಮೆಯಿಂದ ಬಂದಿರ್ತಾರೆ. ಯಾಕಂದ್ರೆ ಯಾರಿಗೆ ಸಿಟ್ಟು ಬರತ್ತೋ, ಆ ಸಮಯದಲ್ಲಿ ಮನುಷ್ಯನ ಮನಸ್ಸಿನಲ್ಲಿ ಬರೀ ತಪ್ಪು ಭಾವನೆಗಳೇ ತುಂಬಿರತ್ತೆ. ಹಾಗಾಗಿ ಸಿಡುಕುತ್ತಲೇ ಇರುವವರಿಗೆ ದುಃಖವೇ ಹೆಚ್ಚು. ಹಾಗಾದ್ರೆ ಸಿಟ್ಟಿನ ಬಗ್ಗೆ ಭಗವದ್ಗೀತೆಯಲ್ಲಿ ಕೃಷ್ಣ ಏನೆಂದು ಹೇಳಿದ್ದಾನೆ ಎಂಬ ಬಗ್ಗೆ ತಿಳಿಯೋಣ ಬನ್ನಿ..

ಕಥೆಯೊಂದನ್ನು ಹೇಳುವ ಮೂಲಕ ಕೃಷ್ಣ ಸಿಟ್ಟಿನ ಬಗ್ಗೆ ಹೇಳಿದ್ದಾನೆ. ಒಮ್ಮೆ ಕಿರಾಣಿ ಅಂಗಡಿಗೆ ಬಂದಿದ್ದ ಗ್ರಾಹಕನ್ನು ಮಾತನಾಡಿಸಿದ ಮಾಲೀಕ ಹೀಗೆಂದ, ನಾನು ನಿನಗೊಂದು ಮಾತು ಹೇಳುತ್ತೇನೆ. ಆ ಮಾತು ಸಾಧ್ಯ ಇಲ್ಲವೆಂದು ಹೇಳಿದ್ದಲ್ಲಿ, ನೀನು ಸೋತೆ ಎಂದರ್ಥ. ಸಾಧ್ಯವಿದೆ ಎಂದಲ್ಲಿ ಹೇಗೆ ಸಾಧ್ಯವಿದೆ ಎಂದು ಹೇಳಬೇಕು. ನೀನು ಸೋತರೆ, ನೀನು ನನಗೆ ದುಡ್ಡು ನೀಡಬೇಕು, ಆದ್ರೆ ನಾನು ನಿನಗೆ ಕಿರಾಣಿ ಸಾಮಾನುಗಳನ್ನು ನೀಡುವುದಿಲ್ಲ. ಅಕಸ್ಮಾತ್ ನೀನು ಗೆದ್ದರೆ, ನಾನು ನಿನಗೆ ಎರಡು ಪಟ್ಟು ಹೆಚ್ಚು ದಿನಸಿ ನೀಡುತ್ತೇನೆಂದು ಹೇಳುತ್ತಾನೆ.

ಇದಕ್ಕೆ ಗ್ರಾಹಕ ಒಪ್ಪಿಕೊಳ್ಳುತ್ತಾನೆ.  ಆಗ ಮಾಲೀಕ, ನಾನು ಈ ಅಂಗಡಿಯಲ್ಲಿ ಒಂದು ಕುರಿಯನ್ನು ಇಟ್ಟು ಬಾಗಿಲು ಹಾಕಿ ಹೋಗುತ್ತೇನೆ. ನಾಳೆ ಬಂದು ನೋಡಿದಾಗ, ಆ ಕುರಿ ನೂರು ಮರಿಗಳಿಗೆ ಜನ್ಮ ನೀಡಿರುತ್ತದೆ. ಇದು ಸಾಧ್ಯವೇ ಎಂದು ಕೇಳುತ್ತಾನೆ. ಆಗ ಗ್ರಾಹಕ ಹೌದು ಸಾಧ್ಯ ಎನ್ನುತ್ತಾನೆ. ಹೇಗೆ ಎಂದು ಕೇಳಿದಾಗ, ಕುರಿ ನಿಮ್ಮದು, ಈ ಅಂಗಡಿಯೂ ನಿಮ್ಮದೇ, ಹಾಗಾಗಿ ಈ ಬಗ್ಗೆ ನಿಮಗಷ್ಟೇ ಗೊತ್ತಿರುತ್ತದೆ. ಇದನ್ನ ಯಾರೂ ನೋಡೇ ಇರಲ್ಲ. ಮತ್ತೆ ನೀವು ಸುಳ್ಳು ಹೇಳುವುದಿಲ್ಲವಲ್ಲ. ಹಾಗಾಗಿ ಇದು ಸಾಧ್ಯವಿರಲು ಬಹುದು ಎನ್ನುತ್ತಾನೆ. ಗ್ರಾಹಕನ ಬುದ್ಧಿವಂತಿಕೆ ಕಂಡು ಮಾಲೀಕ, ದುಪ್ಪಟ್ಟು ದಿನಸಿ ಕೊಡುತ್ತಾನೆ.

ಅಷ್ಟು ಹೊತ್ತಿಗೆ ಅಲ್ಲಿ ಬಂದ ಜನರಿಗೆ ಹೀಗೆ ಷರತ್ತು ವಿಧಿಸದ ವಿಷಯ ತಿಳಿಯುತ್ತದೆ. ಅವರ ಎದುರು ದಿನಸಿ ಪಡೆದು ಹೊರಡುವಾಗ ಅದೇ ಷರತ್ತನ್ನ ಗ್ರಾಹಕ ನೀಡುತ್ತಾನೆ. ನಾನು ಒಂದು ಘಟನೆ ಹೇಳುತ್ತೇನೆ.  ಅದನ್ನ ಸಾಬೀಸುಪಡಿಸಿದ್ದಲ್ಲಿ, ಈಗ ಪಡೆದ ದಿನಸಿಯೊಂದಿಗೆ ಹಣವನ್ನೂ ನೀಡುತ್ತೇನೆ. ನೀವು ಸೋತರೆ, ಇದರ ಜೊತೆ ನನಗೆ ಹಣವನ್ನೂ ನೀಡಬೇಕು ಎನ್ನುತ್ತಾನೆ. ಒಪ್ಪಿದ ಮಾಲೀಕ, ಪ್ರಶ್ನೆ ಕೇಳು ಎನ್ನುತ್ತಾನೆ. ಆಗ ಗ್ರಾಹಕ, ಇದೇ ಊರಿನಲ್ಲಿ ನನ್ನದೊಂದು ಗದ್ದೆಯಿದೆ. ಅಲ್ಲಿ ಒಂದು ಹಾವಿದೆ, ಆ ಹಾವು ಹಾರಿ ಹಾರಿ ಹಕ್ಕಿಗಳನ್ನು ತಿನ್ನುತ್ತದೆ ಎನ್ನುತ್ತಾನೆ.

ಆಗ ಮಾಲೀಕ ಹೌದೌದು ಇದು ಸಾಧ್ಯವಾಗಬಹುದು ಎನ್ನುತ್ತಾನೆ. ಆಗ ಗ್ರಾಹಕ ನನ್ನ ಮಾತಿನ್ನು ಮುಗಿದಿಲ್ಲ. ಪೂರ್ತಿ ಕೇಳಿ. ಮೊನ್ನೆ ನಾನು ಅಲ್ಲಿ ಕಲ್ಲಂಗಡಿ ಹಣ್ಣೊಂದನ್ನ ಕಂಡೆ, ಅದರಲ್ಲಿ ಒಂದು ಚಿಟ್ಟೆ ಇತ್ತು, ಕಲ್ಲಂಗಡಿ ಕತ್ತರಿಸಿದ ಬಳಿಕ, ಚಿಟ್ಟೆ ಹಾರಿ ಹೊರಬಂತು ಮತ್ತು ಅದರ ಬಾಯಲ್ಲಿ ಒಂದು ಚೀಟಿ ಇತ್ತು. ಆ ಚೀಟಿಯಲ್ಲಿ ದಿನಸಿ ಅಂಗಡಿ ಮಾಲೀಕ ಸುಳ್ಳುಗಾರ, ಮೋಸಗಾರ, ಊರ ಜನರ ಕೊಳ್ಳೆ ಹೊಡೆದು, ಶ್ರೀಮಂತನಾಗಿದ್ದಾನೆಂದು ಬರೆದಿತ್ತು ಎಂದು ಹೇಳುತ್ತಾನೆ. ಇಷ್ಟು ಅಂದಿದ್ದೇ ತಡ, ಮಾಲೀಕ, ಇದು ಹೇಗೆ ಸಾಧ್ಯ.. ಇದು ಸುಳ್ಳು.. ಹೀಗಾಗಲು ಸಾಧ್ಯವೇ ಇಲ್ಲ ಎನ್ನುತ್ತಾನೆ. ಇಲ್ಲಿಗೆ ಮಾಲೀಕ ಸೊಲನ್ನೊಪ್ಪಿದ. ಮತ್ತು ದುಪ್ಪಟ್ಟು ಹಣವನ್ನು ಗ್ರಾಹಕನಿಗೆ ಕೊಟ್ಟು ಕಳುಹಿಸಿದ.

ಇಲ್ಲಿ ನಾವು ಗಮನಿಸಬೇಕಾದ ವಿಷಯ ಅಂದ್ರೆ, ಮಾಲೀಕ ಸಿಟ್ಟು ಮಾಡಿಕೊಳ್ಳದೇ, ತಾಳ್ಮೆಯಿಂದ ಉತ್ತರಿಸಿದ್ದಲ್ಲಿ, ಆತ ಗೆಲ್ಲುತ್ತಿದ್ದ, ಲಾಭ ಪಡೆಯುತ್ತಿದ್ದ. ಆದ್ರೆ ಸಿಟ್ಟು ಮಾಡಿ, ನಷ್ಟ ಮಾಡಿಕೊಂಡ. ಹಾಗಾಗಿ ಶ್ರೀಕೃಷ್ಣ ಹೇಳುತ್ತಾನೆ. ಸಿಟ್ಟಿನಿಂದ ಏನೂ ಗೆಲ್ಲಲು ಸಾಧ್ಯವಿಲ್ಲ. ಆದ್ರೆ ತಾಳ್ಮೆ ಇದ್ದಲ್ಲಿ ಜಗತ್ತನ್ನೇ ಗೆಲ್ಲಬಹುದು ಅಂತಾ..

- Advertisement -

Latest Posts

Don't Miss