Friday, April 11, 2025

Latest Posts

ಮಹಾವಿಷ್ಣು ಮತ್ಸ್ಯಾವತಾರ ತಾಳಿದ್ದು ಯಾಕೆ..?

- Advertisement -

Devotional :

ಮಹಾವಿಷ್ಣುವಿನ ಅವತಾರಗಳಲ್ಲಿ ಮತ್ಸ್ಯಾವತಾರ ಕೂಡ ಒಂದು, ಇದೆ ಮೊದಲ ಅವತಾರ ಎಂದು ನಿಖರವಾಗಿ ಹೇಳಲಾಗುವುದಿಲ್ಲ ಆದರೂ ನಾವು ಗುರುತಿಸುವ ದಶಾವತಾರಗಲ್ಲಿ ಮತ್ಸ್ಯಾವತಾರ ಮೊದಲನೇ ಅವತಾರ. ವೈವಸ್ವತಮನುವನ್ನು ಪ್ರಳಯದಿಂದ ಕಾಪಾಡಿದ ಅವತಾರ ಎಂದು ಹೇಳಬಹುದು. ಎರಡು ಸಂದರ್ಭದಲ್ಲಿ ಮತ್ಸಾವತಾರ ನಮಗೆ ತಿಳಿಯುತ್ತದೆ. ವೈವಸ್ವತಮನ್ವಂತರ ಮತ್ತು ಚಾಕ್ಷುಷ ಮನ್ವಂತರದಲ್ಲಿಈ ಕಥೆಗಳು ಬರುತ್ತವೆ. ಪರಮಾತ್ಮನ ಅದ್ಭುತ ಅವತಾರಗಳಲ್ಲಿ ಮತ್ಸ್ಯಾವತಾರ ಒಂದು.

ಮೊದಲು ಈ ಕಥೆ ನಡೆದಿದ್ದುಚಾಕ್ಷುಷ ಮನ್ವಂತರದಲ್ಲಿ, ಒಮ್ಮೆ ಬ್ರಹ್ಮದೇವರು ನಿದ್ರಾವಸ್ಥೆಯಲ್ಲಿರುವಾಗ ಹಯಗ್ರೀವಾಸುರ ಎಂಬ ಅಸುರನು, ಬ್ರಹ್ಮದೇವರಲ್ಲಿದ್ದ ವೇದಗಳನ್ನು ಅಪಹರಿಸಿಕೊಂಡು ಹೋಗುತ್ತಿದ್ದನು, ಹಾಗ ಮಹಾವಿಷ್ಣುವು ಮೀನಿನ ರೂಪತಾಳಿ ಹಯಗ್ರೀವಸುರನನ್ನು ಸಂಹರಿಸಿ ಪುನಃ ವೇದಗಳನ್ನು ಬ್ರಹ್ಮದೇವರಿಗೆ ಕೊಟ್ಟನು. ಬ್ರಹ್ಮದೇವರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದಪುರಾಣವೇ ಮತ್ಸ್ಯಪುರಾಣ ಎಂದು ಪ್ರಸಿದ್ಧ ವಾಯಿತು.

ವೈವಸ್ವತಮನ್ವಂತರದಲ್ಲಿ ಬರುವ ಕಥೆಯ ಪ್ರಕಾರ ಸೂರ್ಯನ ಮಗನಾದ ಸತ್ಯವ್ರತ ರಾಜ ,ಕೃತಮಾಲ ನದಿಯ ಬಳಿಯಲ್ಲಿ ನಿರಾಹಾರಿಯಾಗಿ ತಪಸ್ಸು ಮಾಡಲು ಸಂಜೆಯ ನದಿಯಲ್ಲಿ ಅರ್ಘ್ಯ ಬಿಡುವ ಸಂದರ್ಭದಲ್ಲಿ ಒಂದು ಸಣ್ಣ ಮೀನು ಬಂದು ಸತ್ಯವ್ರತನ ಕೈ ಬೊಗಸೆಯಲ್ಲಿ ಬಂದು ಸೇರಿತು. ನಂತರ ಆ ಮೀನು ಮಾತನಾಡಲು ಆರಂಬಿಸಿತು ನನ್ನನ್ನು ಸುರಕ್ಷಿತ ಸ್ಥಳಕ್ಕೆ ಸೇರಿಸು ಎಂದು ಕೋರಿತು. ರಾಜ ತಕ್ಷಣ ತನ್ನ ಕಮಂಡಲದಲ್ಲಿಅದನ್ನು ಬಿಡಲು ಆ ಮೀನು ಅಲ್ಲೇ ದೊಡ್ಡದಾಯಿತು, ನಂತರ ರಾಜ ತನ್ನಅರಮನೆಯಲ್ಲಿದ್ದ ಬಾವಿಗೆ ಬಿಟ್ಟನು. ಮೀನುಬೆಳೆಯುತ್ತ ಬಾವಿಯು ಸಾಕಾಗಲಿಲ್ಲ. ನಂತರ ತನ್ನ ಅರಮನೆಯಲ್ಲಿದ್ದ ಕೊಳದಲ್ಲಿ ಬಿಟ್ಟನು, ಮರುದಿನ ಕೊಳದಲ್ಲೂ ಜಾಗಸಾಲದಾಯಿತು, ನಂತರ ಕೃತಮಾಲ ನದಿನಂತರ ಸಮುದ್ರಕ್ಕೆ ಬಿಟ್ಟನು. ಆಗ ರಾಜನಿಗೆ ಆಶ್ಚರ್ಯವಾಗಿ ಪರಮಾತ್ಮನಿಗೆ ಪ್ರಾರ್ಥನೆ ಮಾಡಿದನು, ಪರಮಾತ್ಮ ಪ್ರತ್ಯಕ್ಷನಾಗಿ ತಾನೇ ಈ ಮತ್ಸ್ಯವತಾರನಾಗಿ ಅವತರಿಸಿದ್ದೇನೆ, ಇಂದಿನಿಂದ ಸರಿಯಾಗಿ ಏಳನೇ ದಿನಕ್ಕೆ ಸರಿಯಾಗಿ ಮೂರು ಲೋಕಗಳು ಸಮುದ್ರದಲ್ಲಿ ಮುಳುಗಲು ನಾನು ಒಂದು ದೋಣಿಯನ್ನು ನಿನ್ನಬಳಿ ಕಳಿಸುವೆನು, ಎಲ್ಲಾ ತರಕಾರಿ ಆಹಾರ ಪದಾರ್ಥಗಳನ್ನೂ ಆ ದೋಣಿಯಲ್ಲಿರಿಸಿ ಸಪ್ತಋಷಿಗಳನ್ನು ದೋಣಿಯಲ್ಲಿ ಕುರಿಸಿ, ಆ ದೋಣಿಗೆ ಹಗ್ಗವನ್ನು ಮತ್ಸ್ಯಾವತಾರನಾದ ನನಗೆ ಕಟ್ಟಿ ಬಿರುಗಾಳಿಯಿಂದರಕ್ಷಿಸಿಕೋ ಎಂದು ಸತ್ಯವ್ರತರಾಜನಿಗೆ ವಿವರಿಸಿ ಅಂತರ್ಧಾನನಾದನು.

ಶ್ರೀಹರಿಯು ಹೇಳಿದಂತೆ ಏಳನೆಯ ದಿನ ಇದ್ದಕಿದ್ದಂತೆ ಬಿರುಗಾಳಿ, ಗುಡುಗು ಸಿಡಿಲುಗಳಿಂದ ಕೂಡಿದ ಅತ್ಯಂತ ವಿನಾಶಕಾರಿಯಾದ ಮಳೆ ಬೀಳತೊಡಗಿತು. ಇಡೀ ಭೂಭಾಗವೇ ಜಲಾವೃತವಾಯಿತು. ಮಹಾ ಪ್ರಳಯ ಇಡೀ ಸೃಷ್ಟಿಯನ್ನೇ ಆಹುತಿ ತೆಗೆದುಕೊಳ್ಳುವಷ್ಟು ಪ್ರಬಲವಾಯಿತು. ರಾಜನು ಏಕಾಗ್ರಚಿತ್ತನಾಗಿ ಶ್ರೀಹರಿಯನ್ನು ಧ್ಯಾನಿಸುತ್ತ ಶಾಂತನಾಗಿ ಕುಳಿತಿದ್ದನು, ಅಷ್ಟರಲ್ಲಿ ಸಪ್ತಋಷಿಗಳು ಕುಳಿತಿದ್ದ ದೋಣಿಯು ರಾಜನಲ್ಲಿಗೆ ಬಂದಿತು. ಸತ್ಯವ್ರತನು ಬೀಜ ಹಾಗೂ ವನಸ್ಪತಿಗಳೊಂದಿಗೆ ದೋಣಿಯಲ್ಲಿ ಕುಳಿತುಕೊಂಡನು. ಸಪ್ತಋಷಿಗಳು ರಾಜನಿಗೆ ಅಭಯವನ್ನಿಟ್ಟು ಶ್ರೀಹರಿಯ ಧ್ಯಾನದಲ್ಲಿ ತನ್ಮಯರಾಗಿರಲು ಸೂಚಿಸಿದರು. ಮಹಾ ಮಳೆ, ಪ್ರಳಯದ ಭೀಕರತೆಯಿಂದ ಎಲ್ಲೆಲ್ಲೂ ನೀರು ಆವರಿಸಿತು, ಖಾಲಿ ನೆಲವು ಸಾಗರದಂತೆ ಜಲಾವೃತವಾಯಿತು. ಸಾಗರದ ಬೃಹದಾಕಾರದ ತೆರೆಗಳ ಹೊಯ್ದಾಟದಲ್ಲಿ ದೋಣಿಯು ಅಲ್ಲೋಲ ಕಲ್ಲೋಲವಾಗುತ್ತಿದ್ದರೂ ರಾಜನು ಹರಿಯನ್ನು ಧ್ಯಾನಿಸುತ್ತ ಧೈರ್ಯದಿಂದ ಇದ್ದನು. ಅಷ್ಟರಲ್ಲಿ ಬಂಗಾರದ ಬಣ್ಣದ ಬೃಹದಾಕಾರದ ಮತ್ಸ್ಯವು ವಿಹರಿಸುತ್ತ ದೋಣಿಯ ಸಮೀಪಕ್ಕೆ ಬರುವುದನ್ನು ಕಂಡರು.

ಅದೇ ಸಮಯದಲ್ಲಿ ಬೃಹದಾಕಾರದ ಸರ್ಪವೊಂದು ಸಹ ದೋಣಿಯ ಬಳಿ ಬಂದಿತು. ರಾಜನು ಆ ಸರ್ಪದ ಒಂದು ತುದಿಯನ್ನು ದೋಣಿಗೂ ಮತ್ತೊಂದನ್ನು ಮತ್ಸ್ಯಕ್ಕೂ ಕಟ್ಟಿದನು. ಆಗ ದೋಣಿಯ ಹೊಯ್ದಾಟ ನಿಂತು ನಿಧಾನಕ್ಕೆ ತೇಲತೊಡಗಿತು. ಮಹಾ ಪ್ರಳಯ ನಿಲ್ಲುವವರೆಗೂ ನೀರಿನಲ್ಲಿ ಆ ದೋಣಿ ತೇಲುತ್ತಲೆ ಇತ್ತು. ಮಹಾ ಪ್ರಳಯವು ಶಾಂತವಾಯಿತು. ಪ್ರಳಯದ ಆರ್ಭಟಕ್ಕೆ ಎಲ್ಲವೂ ಕೊಚ್ಚಿ ಹೋಗಿತ್ತು. ಸಾಗರದಲ್ಲಿ ತೇಲುತ್ತಿದ್ದ ದೋಣಿಯು ದಡಕ್ಕೆ ಬಂದು ಸೇರಿತು. ಆಗ ಸಪ್ತಋಷಿಗಳು ಮತ್ತು ಸತ್ಯವ್ರತನು ಭೂಮಿಯ ಮೇಲೆ ಕಾಲಿಟ್ಟರು. ಅಂದಿನಿಂದ ಹೊಸ ಮನ್ವಂತರವು ಪ್ರಾರಂಭವಾಯಿತು. ಆಗ ಮತ್ಸ್ಯ ರೂಪದಲ್ಲಿದ್ದ ಮಹಾವಿಷ್ಣುವು ಪ್ರತ್ಯಕ್ಷವಾಗಿ ಪ್ರಳಯದಿಂದ ಭೂಮಿಯನ್ನ ರಕ್ಷಿಸಲು, ಪ್ರಕೃತಿಯನ್ನ ರಕ್ಷಿಸಲು ತಾನು ಈ ಅವತಾರ ತಾಳಿದೆ ಎಂದು ಹೇಳಿದ. ಅಷ್ಟೆ ಅಲ್ಲ ಧರ್ಮ ಸಂಸ್ಥಾಪನೆಗಾಗಿ ತಾನು ಮತ್ತೊಂದು ಅವತಾರದಲ್ಲಿ ಬರುವುದಾಗಿ ಹೇಳಿ ಅಲ್ಲಿಂದ ಮಾಯವಾದ. ಈ ರೀತಿ ಆ ಯುಗದಲ್ಲಿ ಮಹಾ ವಿಷ್ಣುವು ಮತ್ಸ್ಯ ಅವತಾರದಲ್ಲಿ ಬಂದು, ಮನುಕುಲವನ್ನ ರಕ್ಷಿಸಿದನು. ಅಂದಿನಿಂದ ಶುರುವಾದ ಸೃಷ್ಟಿಗೆ ಸತ್ಯವ್ರತನೇ ಮೊದಲ ಪುರುಷನಾದ ಎಂದು ಪುರಾಣ ಗ್ರಂಥದಲ್ಲಿ ಉಲ್ಲೇಖಿಸಲಾಗಿದೆ.

ಚಾಣಕ್ಯನ ಪ್ರಕಾರ ಗಂಡನಲ್ಲಿ ಈ ಗುಣಗಳಿದ್ದರೆ ನಿಮ್ಮ ದಾಂಪತ್ಯ ಸುಖವಾಗಿರುತ್ತದೆ..!

ಜಪಮಾಲೆ ಯಿಂದ ಆಗುವ ಪ್ರಯೋಜನಗಳೇನು..?

ವೈದ್ಯ ದೇವತೆಗಳು ಎಂದರೆ ಯಾರು…?

 

- Advertisement -

Latest Posts

Don't Miss