Friday, August 29, 2025

Latest Posts

ಲಾಟರಿ ಸಿಎಂಗೆ ಇಲ್ಲ ಪವರ್! ಸುರ್ಜೇವಾಲಾ ಸೂಪರ್ ಸಿಎಂ?

- Advertisement -

ಕಳೆದ ಕೆಲ ದಿನಗಳಿಂದ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ರಾಜ್ಯದಲ್ಲೇ ಠಿಕಾಣಿ ಹೂಡಿದ್ದಾರೆ. ಸಚಿವರು, ಶಾಸಕರು, ಮತ್ತು ಪಕ್ಷದ ಹಿರಿಯ ನಾಯಕರ ಜೊತೆ ಬ್ಯಾಕ್ ಟು ಬ್ಯಾಕ್ ಸಭೆ ಮಾಡುತ್ತಿದ್ದಾರೆ. ಇದರಿಂದ ಕೆಪಿಸಿಸಿ ಕಚೇರಿಯೇ ರಾಜ್ಯದ ಪವರ್ ಸೆಂಟರ್ ಆಗಿದೆ. ಇದರಿಂದ ರಾಜ್ಯದಲ್ಲಿ ರಣದೀಪ್ ಸಿಂಗ್ ಸುರ್ಜೇವಾಲಾ ಆಡಳಿತ ಜಾರಿಯಾಗಿದೆಯೇ ಎಂದು ವಿಪಕ್ಷಗಳು ಪ್ರಶ್ನಿಸಿವೆ. ಬಿಜೆಪಿ ಮತ್ತು ಜೆಡಿಎಸ್ ‘ಸೂಪರ್ ಸಿಎಂ ಸುರ್ಜೇವಾಲಾ’ ಎಂದು ವ್ಯಂಗ್ಯವಾಡಿವೆ.

ರಾಜ್ಯದಲ್ಲಿ ರಣದೀಪ್ ಆಡಳಿತ ಜಾರಿ ಆಗಿದೆಯಾ? ನಾಳೆ ನಡೆಯುವ ಸಂಪುಟ ಸಭೆಯೂ ಸುರ್ಜೇವಾಲಾ ಅವರ ಅಧ್ಯಕ್ಷತೆಯಲ್ಲಿ ನಡೆಯುತ್ತಾ? ಲಾಟರಿ ಸಿಎಂ ಸಿದ್ದರಾಮಯ್ಯ ಅವರ ಮೇಲೆ ಸಂಪೂರ್ಣವಾಗಿ ವಿಶ್ವಾಸ ಕಳೆದುಕೊಂಡಿರುವ ಕಾಂಗ್ರೆಸ್ ಹೈಕಮಾಂಡ್ ಕರ್ನಾಟಕದಲ್ಲಿ ‘ರಣದೀಪ್’ ಆಡಳಿತ ಹೇರಿದೆ ಅಂತ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಪ್ರಶ್ನಿಸಿದ್ದಾರೆ

ಇದೇ ರೀತಿಯ ಟೀಕೆಗಳು ಮಾಜಿ ಸಿಎಂ ಹೆಚ್‌ಡಿಕೆ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಅವರಿಂದಲೂ ಬಂದಿವೆ. ಕರ್ನಾಟಕದ ಸೂಪರ್ ಸಿಎಂ ಆಗಿ ಸುರ್ಜೇವಾಲಾ ಅಧಿಕಾರ ವಹಿಸಿಕೊಂಡಿದ್ದಾರೆ. ಅಂತ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಕಾಂಗ್ರೆಸ್‌ನ ಹೈಕಮಾಂಡ್ ಈಗ ಸಿದ್ಧರಾಮಯ್ಯನವರ ಮೇಲೆ ಸಂಪೂರ್ಣ ನಂಬಿಕೆ ಇಲ್ಲದ ಸ್ಥಿತಿಗೆ ತಲುಪಿದೆಯೇ? ಡಿಕೆ ಶಿವಕುಮಾರ್ ರವರಿಗೆ ಶಾಸಕರ ಬೆಂಬಲದ ಕೊರತೆ ಇದೆಯೇ? ಪಕ್ಷದೊಳಗೆ ಪ್ರಧಾನಮಂತ್ರಿಯ ಹುದ್ದೆಗೆ ಸ್ಪಷ್ಟ ನಾಯಕತ್ವವಿಲ್ಲದ ತ್ರಿಶಂಕು ಸ್ಥಿತಿ ಇದೆಯೇ? ಈ ಎಲ್ಲ ಪ್ರಶ್ನೆಗಳು ಈಗ ಪಕ್ಷದೊಳಗಿನ ಬಿರುಕುಗಳನ್ನ ಹೊರಹಾಕುತ್ತಿವೆ.

ಈ ಎಲ್ಲದರ ನಡುವೆ ಸುರ್ಜೇವಾಲಾ ಅವರು ಡ್ಯಾಮೇಜ್ ಕಂಟ್ರೋಲ್ ಮಾಡುತ್ತಿದ್ದಾರೆ ಎಂಬ ಮಾತುಗಳನ್ನು ಕೇಳಬಹುದಾಗಿದೆ. ಆದರೆ ಈ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಪ್ರಭಾವ ಎಷ್ಟು ಉಳಿದಿದೆ ಎಂಬುದನ್ನು ಪ್ರಶ್ನಿಸುವ ಧ್ವನಿಗಳು ಮಾತ್ರ ಹೆಚ್ಚಾಗುತ್ತಿವೆ.

ಪಕ್ಷದೊಳಗೆ ಎರಡು ಶಕ್ತಿ ಕೇಂದ್ರಗಳು ಇವೆ. ಒಂದು ಕಡೆ ಸಿದ್ಧರಾಮಯ್ಯ, ಮತ್ತೊಂದು ಕಡೆ ಡಿಕೆ ಶಿವಕುಮಾರ್. ಈ ನಡುವೆ ರಣದೀಪ್ ಸಿಂಗ್ ಸುರ್ಜೇವಾಲಾ ಅವರ ಒತ್ತಾಯಕಾರಿ ನಿರ್ಣಯಗಳು ಮುಂದಿನ ದಿನಗಳಲ್ಲಿ ಸರ್ಕಾರದ ಸ್ಥಿರತೆಗೆ ಹೊಸ ಅಡಚಣೆಯಾಗಬಹುದೇ ಎಂಬ ಆತಂಕ ಉಂಟಾಗಿದೆ.

ವರದಿ: ಲಾವಣ್ಯ ಅನಿಗೋಳ

- Advertisement -

Latest Posts

Don't Miss