Sunday, May 26, 2024

Latest Posts

ಲವ್ ಜಿಹಾದ್ ಜಾಲ ವ್ಯಾಪಕವಾಗಿದೆ, ದೊಡ್ಡಮಟ್ಟದ ತನಿಖೆಯಾಗಬೇಕು: ಸಿ.ಟಿ.ರವಿ..!

- Advertisement -

Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಮತ್ತೊಂದು ಲವ್ ಜಿಹಾದ್ ಪ್ರಕರಣ ಬೆಳಕಿಗೆ ಬಂದಿದೆ. ಆರೋಪಿಯ ಕಾಲಿಗೆ ಗುಂಡು ಹಾರಿಸಿದ್ದಾರೆ. ಹುಬ್ಬಳ್ಳಿ ಧಾರವಾಡ ವ್ಯಾಪ್ತಿಯಲ್ಲಿ ಐದು ಲವ್ ಜಿಹಾದ್ ಪ್ರಕರಣ ನಡೆದಿವೆ. ಇದೆಲ್ಲವನ್ನೂ ನೋಡಿದರೇ ಲವ್ ಜಿಹಾದ್ ಯೋಜನಾ ಬದ್ಧವಾಗಿ ಮಾಡಲಾಗುತ್ತಿದೆ ಎಂದು ಮಾಜಿ ಸಚಿವ ಸಿ.ಟಿ.ರವಿ ಹೇಳಿದರು‌.

ನಗರದಲ್ಲಿಂದು ಸುದ್ಧಿಗೋಷ್ಟಿ ನಡೆಸಿ ಮಾತನಾಡಿದ ಅವರು, ನಿಜವಾದ ಪ್ರೀತಿಯಾಗಿದ್ದರೇ ಯಾಕೆ ಮುಸ್ಲಿಂ ಹುಡುಗಿಯರು ಹಿಂದು ಹುಡುಗರನ್ನು ಯಾಕೆ ಲವ್ ಮಾಡ್ತಿಲ್ಲ. ಮುಖ್ಯಮಂತ್ರಿ ಈ ಪ್ರಕರಣಗಳನ್ನು ವೈಯಕ್ತಿಕ ಎಂದು ಭಾವಿಸಬಾರದು. ಲವ್ ಜಿಹಾದ್ ನಮ್ಮ ಹೆಣ್ಣುಮಕ್ಕಳ ಬಾಳು ಹಾಳು ಮಾಡುವುದರ ಜೊತೆಗೆ ಮತಾಂತರ ಭೀಕರತೆಯನ್ನು ತೋರಿಸುತ್ತಿದೆ ಎಂದರು.

ಇದೊಂದು ವ್ಯಾಪಕ ಜಾಲ, ಔರಂಗಜೇಬನ ಕಾಲದ ರೀತಿಯಲ್ಲಿ ಈಗ ಭಯ ಹುಟ್ಟಿಸುತ್ತಿದೆ. ಜಿಹಾದಿಗಳ ಮೂಲಕ ಮತಾಂತರ ಮಾಡಲಾಗುತ್ತಿದೆ. ವೋಟ್ ಜಿಹಾದಿ ಮೂಲಕ, ಶರಿಯಾಗೆ ಸಪೋರ್ಟ್ ಮಾಡುವವರಿಗೆ ಇದು ಅಸ್ತ್ರವಾಗಿದೆ. ಲವ್ ಜಿಹಾದ್ ಬಗ್ಗೆ ದೊಡ್ಡಮಟ್ಟದ ತನಿಖೆ ನಡೆಸಿ, ಆಳ ಅಗಲ ಗೊತ್ತುಪಡಿಸಬೇಕಿದೆ ಎಂದು ಆಗ್ರಹಿಸಿದ್ದಾರೆ.

ನಾನು ಗೆದ್ದರೆ ರೈತರಿಗೆ ನೀರು ತರುವೆ: ರಾಜುಗೌಡ ಭರವಸೆ

ಪ್ರಜ್ವಲ್ ರೇವಣ್ಣ ದುಬೈ ಬಿಟ್ಟು ಇನ್ನು ಯಾವುದೇ ದೇಶದಲ್ಲಿದ್ದರೂ ಕರೆತರುತ್ತೇವೆ: ಸಿಎಂ ಸಿದ್ದರಾಮಯ್ಯ

ರಾಯ್ ಬರೇಲಿಯಲ್ಲಿ ರಾಮಪತ್ರ ಸಲ್ಲಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ

- Advertisement -

Latest Posts

Don't Miss