Vastu tips:
ಇತ್ತೀಚಿಕೆ ವಾಸ್ತು ಬಹಳಷ್ಟು ಪ್ರಚಲಿತವಾಗಿದೆ, ವಾಸ್ತು ಪ್ರಕರವಾಗಿಯೇ ಮನೆಗಳ ನಿರ್ಮಾಣ ಮಾಡುತ್ತಾರೆ , ಮನೆವಾಸ್ತು ಪ್ರಕಾರ ಇದ್ದರೆನೆ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ,ಅಭಿವೃದ್ಧಿ ಇರುತ್ತದೆ. ಹಾಗೆಯೆ ವಾಸ್ತುಪ್ರಕಾರ ಮನೆಯಲ್ಲಿ ಕೆಲವೊಂದು ವಸ್ತುಗಳು ಇದ್ದರೆ ಮನೆಗೆ ಬಹಳ ಒಳ್ಳೇದು ಎಂದು ವಾಸ್ತು ತಜ್ಞರು ಹೇಳುತ್ತಾರೆ .ವಾಸ್ತು ಶಾಸ್ತ್ರಗಳಲ್ಲಿ ಗಿಡಗಳಿಗೆ ಬಹಳ ಮಹತ್ವವಿದೇ ಕೆಲವೊಂದು ಗಿಡಗಳಿಂದ ಮನೆಗೆ ಲಕ್ ಬರುತ್ತದೆ ಹಾಗು ಮನಸ್ಸಿಗೆ ಶಾಂತಿ ಲಭಿಸುತ್ತದೆ .
ಇದು ಮನೆಯ ಸೌಂದರ್ಯ ಹೆಚ್ಚಿಸುವುದರ ಜೊತೆಗೆ ಕುಟುಂಬದ ಆರೋಗ್ಯವನ್ನೂ ಹೆಚ್ಚಿಸುತ್ತದೆ. ವಾಸ್ತು ಪ್ರಕಾರ, ಬಿದಿರಿನ ಸಸ್ಯವು ಮನೆಗೆ ಅದೃಷ್ಟ ಮತ್ತು ಸಮೃದ್ಧಿಯನ್ನು ತರುತ್ತದೆ. ಈ ಸಸ್ಯದ ಕಾಂಡಗಳು ಮನೆಯ ಯಜಮಾನನಿಗೆ ಧನಾತ್ಮಕ ಶಕ್ತಿ ಮತ್ತು ಸುರಕ್ಷತೆಯನ್ನು ತರುತ್ತದೆ ಎಂದು ಹೇಳುತ್ತಾರೆ .ಸಸ್ಯವನ್ನು ಪಾರದರ್ಶಕ ಪಾತ್ರೆಯಲ್ಲಿ ಇಡಬೇಕು, ಇದರಿಂದ ಬೇರುಗಳು ಗೋಚರಿಸುತ್ತವೆ. ಗಿಡ ಬೆಳೆಯಲು ಹೆಚ್ಚು ನೀರು ಅಗತ್ಯವಿರುವುದಿಲ್ಲ ಆದರೆ ಬೇರುಗಳು ನೀರಿನಿಂದ ಮುಚ್ಚಿರಬೇಕು. ಹಳದಿ ಅಥವಾ dark ಹಸಿರು ಬಣ್ಣದ ಕಾಂಡಗಳನ್ನು ಹೊಂದಿರುವ ಬಿದಿರಿನ ಸಸ್ಯವನ್ನು ಇಡಬಾರದು.ನಿಮಗೆ ಅದೃಷ್ಟ ಒಲಿಯಬೇಕೆಂದರೆ ಬಿದಿರಿನ ಸಸ್ಯ ಇರುವ ಪಾತ್ರೆಯ ಸುತ್ತಲೂ ಕೆಂಪು ರಿಬ್ಬನ್ ಕಟ್ಟಿರಬೇಕು. ಹಾಗು ಕ್ಲೋರಿನೇಟೆಡ್ ನೀರನ್ನು ಬಳಸಬಾರದು ನೈಸರ್ಗಿಕ ಖನಿಜಗಳನ್ನು ಹೊಂದಿರುವ ನೀರನ್ನು ಬಳಸಿ.ಗಿಡ ಆರೋಗ್ಯಕರವಾಗಿರಲು ಪ್ರತಿ ಏಳು ಅಥವಾ 10 ದಿನಗಳಿಗೊಮ್ಮೆ ಶುದ್ಧ ನೀರನ್ನು ತುಂಬಿಸಿ.ಬಿದಿರಿನ ಗಿಡಗಳನ್ನು ಪೋಷಿಸಲು ಸುಲಭ ನೀವು ಗಿಡವನ್ನು ಸರಿಯಾಗಿ ನೋಡಿಕೊಳ್ಳಬೇಕು. ಆರೋಗ್ಯಕರವಾಗಿ ಕಾಣುವ ಸಸ್ಯ ಮಾತ್ರ ನಿಮ್ಮ ಕಚೇರಿ ಮತ್ತು ಮನೆಗೆ ಸಕಾರಾತ್ಮಕ ಶಕ್ತಿ ಮತ್ತು ಬೆಳವಣಿಗೆಯನ್ನು ತರಬಲ್ಲದು.
ನನ್ನ ಮನೆಯಲ್ಲಿ ಅದೃಷ್ಟದ ಬಿದಿರನ್ನು ಎಲ್ಲಿ ಇಡಬೇಕು?
ನಿಮ್ಮ ಮನೆಯಲ್ಲಿ ಪೂರ್ವ ಅಥವಾ ಆಗ್ನೇಯ ದಿಕ್ಕಿನಲ್ಲಿ ಬಿದಿರಿನ ಗಿಡಗಳನ್ನು ಇಡಬಹುದು.
* 2 ಬಿದಿರಿನ ಕಾಂಡ ಪ್ರೀತಿ ಮತ್ತು ಮದುವೆಯನ್ನು ಪ್ರತಿನಿಧಿಸುತ್ತದೆ
* 3 ಬಿದಿರಿನ ಕಾಂಡ ಸಂತೋಷ ತರುವುದು
* 5 ಬಿದಿರಿನ ಕಾಂಡ ಆರೋಗ್ಯವನ್ನು ಪ್ರತಿನಿಧಿಸುವುದು
* 8 ಬಿದಿರಿನ ಕಾಂಡ ಸಂಪತ್ತನ್ನು ಸೂಚಿಸುವುದು
* 9 ಬಿದಿರಿನ ಕಾಂಡ ಅದೃಷ್ಟದ ಸಂಕೇತ
* 10 ಬಿದಿರಿನ ಕಾಂಡ ಪರಿಪೂರ್ಣ ಜೀವನಕ್ಕಾಗಿ ಹಾರೈಸುವುದು
* 11ಬಿದಿರಿನ ಕಾಂಡ ಶುಭದ ಸಂಕೇತ
* 21 ಬಿದಿರಿನ ಕಾಂಡ ಆಶೀರ್ವಾದಗಳು ಮತ್ತು ಸಮೃದ್ಧಿಯನ್ನು ಸೂಚಿಸುತ್ತದೆ
ಸಾಧ್ಯವಾದರೆ ಏಳು ಕಾಂಡ ಅಥವಾ ಹತ್ತು ಕಾಂಡದ ಅದೃಷ್ಟದ ಬಿದಿರಿನ ಸಸ್ಯವನ್ನು ಮನೆಯಲ್ಲಿಟ್ಟರೆ ಒಳ್ಳೆಯದು.
ಹಳದಿ ಅಥವಾ ಗಾಢ ಹಸಿರು ಬಣ್ಣದ ಕಾಂಡಗಳನ್ನು ಹೊಂದಿರುವ ಬಿದಿರಿನ ಸಸ್ಯವನ್ನು ನೀವು ಇಟ್ಟುಕೊಳ್ಳಬಾರದು ಎಂಬುದನ್ನು ನೆನಪಿಡಿ.