ಮುಂಬೈ: ಯಜ್ವಿಂದರ್ ಚಾಹಲ್ ಸ್ಪಿನ್ ಮ್ಯಾಜಿಕ್‍ಗೆ ಪತರಗುಟ್ಟಿದ ಲಕ್ನೊ ಸೂಪರ್ ಜೈಂಟ್ಸ್ ರಾಜಸ್ಥಾನ ಎದುರು 3 ರನ್‍ಗಳ ವಿರೋಚಿತ ಸೋಲು ಅನುಭವಿಸಿತು.
ವಾಂಖೆಡೆ ಮೈದಾನದಲ್ಲಿ ನಡೆದ ಜಿದ್ದಾಜಿದ್ದಿನ ಪಂದ್ಯದಲ್ಲಿ ಟಾಸ್ ಗೆದ್ದ ಲಕ್ನೊ ಫೀಲ್ಡಿಂಗ್ ಆಯ್ದುಕೊಂಡಿತು.
ರಾಜಸ್ಥಾನ ಪರ ಆರಂಭಿಕರಾಗಿ ಕಣಕ್ಕಳಿದ ಜೋಸ್ ಬಟ್ಲರ್ (13) ಹಾಗೂ ದೇವದತ್ ಪಡೀಕಲ್ (29) ಮೊದಲ ವಿಕೆಟ್‍ಗೆ 42 ರನ್ ಸೇರಿಸಿದರು. ಸಂಜು ಸ್ಯಾಮ್ಸನ್ 13, ವೆನ್ ಡೆರ್ ಡಸನ್ 4, ಆರ್.ಅಶ್ವಿನ್ 28, ರಿಯಾನ್ ಪರಾಗ್ 8, ಆರ್.ಅಶ್ವಿನ್ 8, ಶಿಮ್ರಾನ್ ಹೆಟ್ಮಯರ್ ಅಜೇಯ 59, ಟ್ರೆಂಟ್ ಬೌಲ್ಟ್ 2 ರನ್ ಗಳಿಸಿದರು.
ರಾಜಸ್ಥಾನ ನಿಗದಿತ 20 ಓವರ್‍ಗಳಲ್ಲಿ 6 ವಿಕೆಟ್ ನಷ್ಟಕ್ಕೆ 165 ರನ್ ಗಳಿಸಿದೆ. ಕೆ.ಗೌತಮ್, ಜಾಸನ್ ಹೋಲ್ಡರ್ ತಲಾ 2 ವಿಕೆಟ್ ಪಡೆದರು.

166 ರನ್‍ಗಳ ಗುರಿ ಬೆನ್ನತ್ತಿದ ಲಕ್ನೊ ತಂಡಕ್ಕೆ ಮೊದಲ ಓವರ್‍ನಲ್ಲೆ ಕೆ.ಎಲ್.ರಾಹುಲ್ (0) ಹಾಗೂ ಕೆ.ಗೌತಮ್ (0) ಅವರ ವಿಕೆಟ್ ಪಡೆದು ಆಘಾತ ಕೊಟ್ಟರು.
ನಂತರ ಬಂದ ಜಾಸನ್ ಹೋಲ್ಡರ್ 8, ಕ್ವಿಂಟಾನ್ ಡಿ ಕಾಕ್ 39, ದೀಪಕ್ ಹೂಡಾ 25 ರನ್ ಗಳಿಸಿದರು.
ಕೆಳ ಕ್ರಮಾಂಕದಲ್ಲಿ ಕೃಣಾಲ್ ಪಾಂಡ್ಯ 22, ಮಾರ್ಕಸ್ ಸ್ಟೋಯ್ನಿಸ್ ಅಜೇಯ 38, ದುಶ್ಮಂತ್ ಚಾಮೀರಾ 13, ಆವೇಶ್ ಖಾನ್ ಅಜೇಯ 7 ರನ್ ಗಳಿಸಿದರು.
ಲಕ್ನೊ ತಂಡ ನಿಗದಿತ 20 ಓವರ್‍ಗಳಲ್ಲಿ 8 ವಿಕೆಟ್ ನಷ್ಟಕ್ಕೆ 162 ರನ್ ಕಲೆ ಹಾಕುವಲ್ಲಿ ಮಾತ್ರ ಶಕ್ತವಾಯಿತು. ರಾಜಸ್ಥಾನ ಪರ ಚಹಲ್ 4 ವಿಕೆಟ್ ಪಡೆದು ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು. ಬೌಲ್ಟ್ 2, ಪ್ರಸಿದ್ಧ ಕೃಷ್ಣ ಹಾಗೂ ಕುಲದೀಪ್ ಸೇನ್ ತಲಾ ಒಂದು ವಿಕೆಟ್ ಪಡೆದರು.


